ಶನಿವಾರ, ಏಪ್ರಿಲ್ 17, 2021
28 °C

ಎನ್‌ಸಿ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯನ್ನು ಪಕ್ಷ ಬೆಂಬಲಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಪರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸೋಮವಾರ ಟ್ವಿಟರ್‌ನಲ್ಲಿ  ಬರೆದಿದ್ದಾರೆ.ಒಮ್ಮತಕ್ಕೆ ಜೆಡಿಯು

ರಾಷ್ಟ್ರಪತಿ ಚುನಾವಣೆ ವಿವಾದದಿಂದ ತಲೆದೋರಿರುವ ಭಿನ್ನಮತ ಬದಿಗಿಟ್ಟು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲರೂ ಒಪ್ಪುವಂತಹ ಅಭ್ಯರ್ಥಿಯನ್ನು ವಿರೋಧ ಪಕ್ಷಗಳು ಕಣಕ್ಕಿಳಿಸಬೇಕೆಂದು ಜೆಡಿಯು ತಿಳಿಸಿದೆ.`ರಾಷ್ಟ್ರಪತಿ ಚುನಾವಣೆ ವಿಷಯವೇ ಬೇರೆ. ಏಕೆಂದರೆ ಆ ಸ್ಥಾನಕ್ಕೆ ಅನುಭವಿ ಹಾಗೂ ನುರಿತ ರಾಜಕಾರಣಿ ಪ್ರಣವ್ ನಿಂತಿದ್ದಾರೆ. ಹೀಗಾಗಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಯಿತು. ಆದರೆ, ಉಪರಾಷ್ಟ್ರಪತಿಯ ವಿಷಯ ಹಾಗಲ್ಲ. ಎಲ್ಲರಿಗೂ ಒಪ್ಪಿಗೆಯಾಗುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನ ಮುಂದುವರಿಸಬೇಕು~ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.