ಭಾನುವಾರ, ಮೇ 29, 2022
31 °C

ಎಫ್ ಬಾರ್ ಫುಡ್ ಫ್ಯಾಷನ್ ಫೆಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಫ್ ಬಾರ್ ಫುಡ್ ಫ್ಯಾಷನ್ ಫೆಸ್ಟ್

ಸಾಂಪ್ರದಾಯಿಕ ಆಹಾರ ತಿನಿಸುಗಳನ್ನು ಸಮಕಾಲೀನತೆಗೆ ಒಗ್ಗಿಸಿ ಆಹಾರ ಪ್ರಿಯರ ನಾಲಗೆ ರುಚಿ, ಫ್ಯಾಷನ್ ಶೊಗಳನ್ನು ಆಯೋಜಿಸಿ ಕಣ್ಣುಗಳನ್ನು ತಣಿಸುತ್ತಿದೆ ಕನ್ನಿಂಗ್‌ಹ್ಯಾಮ್ ರಸ್ತೆಯ ಎಫ್ ಬಾರ್ ಅಂಡ್ ಕಿಚನ್ ರೆಸ್ಟೋರೆಂಟ್.ಅದು ಶನಿವಾರ ಮತ್ತು ಭಾನುವಾರ ಅಕ್ಟೋಬರ್ ಫೆಸ್ಟ್ ನಡೆಸುತ್ತಿದೆ. ಇಲ್ಲಿ ಮದ್ಯ, ಸಂಗೀತ ಮತ್ತು ಫ್ಯಾಷನ್ ಸಹ ಜತೆಗೂಡುವುದರಿಂದ ಊಟದ ಸವಿ ಮತ್ತಷ್ಟು ಹೆಚ್ಚಲಿದೆ.ಶನಿವಾರ ಸೂಪರ್‌ಸ್ಟಾರ್ ಡಿಜೆ ಯಾನ್ ಅವರು ನೀಡುವ ಹಾಟ್ ಶೊ, ಜರ್ಮನ್ ಬಾರ್‌ಮೇಡ್‌ಗಳ ಕೈ ರುಚಿ ಫೆಸ್ಟ್‌ನ ವಿಶೇಷ.ಭಾನುವಾರ ಆಹಾರ, ಸಂಗೀತ ಮತ್ತು ಫ್ಯಾಷನ್ ರಂಗು ಮೇಳೈಸಲಿದೆ. ವಿನ್ಯಾಸಗಾರ್ತಿ ಜಿ.ನಮ್ರತಾ ಅವರ ವಸ್ತ್ರವನ್ನು ಧರಿಸಿ ರೂಪದರ್ಶಿಗಳು ರ‌್ಯಾಂಪ್‌ನಲ್ಲಿ ವೈಯಾರದಿಂದ ಬಳುಕಲಿದ್ದಾರೆ. ಇದರ ಜತೆಗೆ ಜರ್ಮನಿಯ ಜನಪ್ರಿಯ ಖಾದ್ಯಗಳಾದ ಒಬಾಟ್‌ಡಾ, ವೇಸ್‌ವ್ರಟ್ ಮೊದಲಾದ ತಿನಿಸುಗಳು ಘಮಘಮಿಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.