ಕರ್ನಾಟಕದ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕೆಲವು ಸ್ಪಷ್ಟೀಕರಣ ಕೇಳಿ ರಾಷ್ಟ್ರಪತಿ ಅವರು ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ ಎಂಬ ಸುದ್ದಿ ಬಂದಿದೆ.

ಮಸೂದೆಯಲ್ಲಿ ಎಮ್ಮೆ ,ಕೋಣಗಳ ಹತ್ಯೆಗೆ ನಿಷೇಧ ವಿಧಿಸಿಲ್ಲ. ಗೋವುಗಳಂತೆ, ಎಮ್ಮೆ, ಕೋಣಗಳೂ ಪ್ರಾಣಿಗಳೇ ಅಲ್ಲವೇ? ಅವು ಏನು ಪಾಪ ಮಾಡಿವೆ? ಸರ್ಕಾರ ಇದು `ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ~ ಎಂಬ ನೀತಿ ಅನುಸರಿಸಿದೆ. ಇದು ತಾರತಮ್ಯದ ಪರಮಾವಧಿ.

ಹಸುಗಳಂತೆ ಎಮ್ಮೆಗಳೂ ಹಾಲು ಕೊಡುತ್ತವೆ. ಎತ್ತುಗಳಂತೆ, ಕೋಣಗಳೂ ಹೊರೆ ಹೊರುತ್ತವೆ, ನೇಗಿಲು, ಬಂಡಿ ಎಳೆಯುತ್ತವಲ್ಲವೇ? ಹತ್ಯೆ ನಿಷೇಧಿಸುವ ವಿಷಯದಲ್ಲಿ ತಾರತಮ್ಯ ಸಲ್ಲದು. ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವುದು ತಪ್ಪು ಎಂಬ ಕಾಯಿದೆಯನ್ನು ಸರ್ಕಾರ ರೂಪಿಸಬೇಕು. ಎಲ್ಲ ಪ್ರಾಣಿಗಳೂ ಜೀವಿಗಳೇ ಅಲ್ಲವೇ?
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಿಸುವ ಮಸೂದೆಯನ್ನು ಪುನರ್ ಪರಿಶೀಲಿಸಬೇಕು. ಎಮ್ಮೆ ಮತ್ತು ಕೋಣಗಳ ಹತ್ಯೆ ನಿಷೇಧಿಸುವ ತಿದ್ದುಪಡಿ ಸೇರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.