ಶನಿವಾರ, ಮೇ 8, 2021
19 °C

ಎರಡು ಕಿ.ಮೀ. ಉದ್ದದ ಸಾಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಐಎಎನ್‌ಎಸ್): ಅರ್ಜೆಂಟೀನಾ ಹಾಗೂ ವೆನಿಜುವೆಲಾ ನಡುವಿನ ಸೌಹಾರ್ದ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣದೊಳಗೆ ತೆರಳಲು ಪ್ರೇಕ್ಷಕರು ಎರಡು ಕಿ.ಮೀ. ಉದ್ದದ ಸಾಲಿನಲ್ಲಿ ನಿಂತಿದ್ದು ಕಂಡುಬಂತು.ಬಾರಿ ಭದ್ರತೆ ಇದ್ದ ಕಾರಣ ಪ್ರೇಕ್ಷಕರು ಅರ್ಧ ಗಂಟೆ ಕಾಲ ನಿಂತಲ್ಲೇ ನಿಲ್ಲಬೇಕಾಯಿತು. ಪ್ರತಿಯೊಬ್ಬರನ್ನು ಪೂರ್ಣವಾಗಿ ತಪಾಸಣೆಗೆ ಒಳಪಡಿಸಿ ಕ್ರೀಡಾಂಗಣದೊಳಗೆ ಬಿಡಲಾಗುತಿತ್ತು. ಈ ಪಂದ್ಯ ವೀಕ್ಷಿಸಲು ದೇಶದ ಮೂಲೆಮೂಲೆ ಹಾಗೂ ವಿದೇಶದಿಂದಲೂ ಅಭಿಮಾನಿಗಳು ಆಗಮಿಸಿದ್ದರು. ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಸಮಸ್ಯೆ. ಹಾಗಾಗಿ ಪಂದ್ಯ ರಾತ್ರಿ 7.10ಕ್ಕೆ ಆರಂಭವಾದರೂ ಕೆಲ ಪ್ರೇಕ್ಷಕರು ಕ್ರೀಡಾಂಗಣದೊಳಗೆ ಬರುವುದರೊಳಗೆ ಅರ್ಧ ಪಂದ್ಯ ಮುಗಿದಿತ್ತು. ಸಂಜೆ ಸುರಿದ ಮಳೆ ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿತು.ಕ್ರೀಡಾಂಗಣದ ಸುತ್ತ ಮುತ್ತ ಸುಮಾರು ಐದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.