ಎರೆ ಗೊಬ್ಬರ ತಯಾರಿಸಿ
ಸಾಮಗ್ರಿ: ಅಗಲ ಬಾಯಿಯ ಪ್ಲಾಸ್ಟಿಕ್ ಪಾತ್ರೆ, ಒಣಗಿದ ಎಲೆಗಳು, ಒದ್ದೆಯಾದ ತೋಟದ ಮಣ್ಣು, ಕಪ್ಪು ಕಾಗದ, ಎರೆ ಹುಳುಗಳು.
ವಿಧಾನ
1. ಚಿತ್ರದಲ್ಲಿ ತೋರಿಸಿರುವಂತೆ ಒಂದು ಅಗಲ ಬಾಯಿಯ ಪ್ಲಾಸ್ಟಿಕ್ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಮುಕ್ಕಾಲು ಭಾಗ ಸ್ವಲ್ಪ ಒದ್ದೆಯಾದ ತೋಟದ ಮಣ್ಣನ್ನು ತೆಗೆದುಕೊಳ್ಳಿ.
2. ಪ್ಲಾಸ್ಟಿಕ್ ಪಾತ್ರೆಯನ್ನು ಪೂರ್ತಿಯಾಗಿ ಕಪ್ಪು ಕಾಗದದಿಂದ ಮರೆಮಾಡಿ.
3. ಪ್ಲಾಸ್ಟಿಕ್ ಪಾತ್ರೆಯಲ್ಲಿ 3-4 ಎರೆಹುಳುಗಳನ್ನು ಬಿಟ್ಟು ಮಣ್ಣಿನ ಮೇಲೆ ಒಂದು ಹಿಡಿ ಒಣಗಿದ ಎಲೆಯ ಪುಡಿಹಾಕಿ. ಬಳಿಕ ಅದನ್ನು ಕತ್ತಲ ಕೋಣೆಯಲ್ಲಿ ಇಡಿ.
4. 15-20 ದಿವಸಗಳ ನಂತರ ಪ್ಲಾಸ್ಟಿಕ್ ಪಾತ್ರೆಯನ್ನು ಹೊರತೆಗೆದು, ಕಪ್ಪು ಕಾಗದವನ್ನು ಬಿಡಿಸಿ ನೋಡಿ.
ಪ್ರಶ್ನೆ
1. ಮಣ್ಣಿನ ಬಣ್ಣದಲ್ಲಿ ಬದಲಾವಣೆ ಆಗಿದೆಯೇ?
2. ಎಲೆಯ ಪುಡಿ ಇದೆಯೇ?
ಉತ್ತರ
1. ಮಣ್ಣು ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಯಾಕೆಂದರೆ ಎರೆಹುಳು ಎಲೆಯನ್ನು ತಿಂದು ಎರೆ ಗೊಬ್ಬರ (Wormi compost) ತಯಾರಿಸುತ್ತದೆ. ಅದು ಮಣ್ಣಿನಲ್ಲಿ ಸೇರಿ ಕಪ್ಪಾಗುತ್ತದೆ.
2. ಎಲೆಯನ್ನು (ಸಾವಯವ ಪದಾರ್ಥ) ಎರೆಹುಳು ಸೇವಿಸಿ ಎರೆ ಗೊಬ್ಬರವನ್ನಾಗಿ ಮಾಡುತ್ತದೆ. ಎರೆಹುಳು ಕತ್ತಲನ್ನು ಇಷ್ಟಪಡುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.