ಸೋಮವಾರ, ಏಪ್ರಿಲ್ 19, 2021
25 °C

ಎಲ್ಲ ವಾರ್ಡ್ ಅಭಿವೃದ್ಧಿಗೆ ಸಮಾನ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಪಟ್ಟಣದ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಐದು ಜನ ಸದಸ್ಯರು ಅನರ್ಹಗೊಂಡ ನಂತರ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಸಾಮಾನ್ಯ ಸಭೆಗೆ ಹಾಜರಾಗಿರುವ ಮತ್ತು ಹೈಕೋರ್ಟ್ ಇವರಿಗೆ ನೀಡಿರುವ ನಿಬಂಧನೆಗಳ ಪ್ರಕಾರ ಅಧ್ಯಕ್ಷರು ಸಭೆ ನಡೆಸಲು ಯಾವುದೇ ನಿರ್ಬಂಧವಿಲ್ಲ. ಆದರೆ, ಪುರಸಭೆಯ ಅಧಿಕೃತ ಸಭೆಗಳಲ್ಲಿ ಯಾವುದೇ ನಿರ್ಣಯಕ್ಕೆ ಸಂಬಂಧಪಟ್ಟಂತೆ ಮತ ಚಲಾಯಿಸಲು ಅವಕಾಶವಿಲ್ಲ ಎಂದು ಮುಖ್ಯಾಧಿಕಾರಿ ಬಸವರಾಜ್ ಹೇಳಿದರು.ಪಟ್ಟಣದ ಪುರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯ ಪ್ರಾರಂಭದಲ್ಲಿ ಅವರು ಸಭೆಗೆ ವಿವರಿಸಿದರು. ಇದು ಸಭೆಯಲ್ಲಿ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು. ಮುಖ್ಯಾಧಿಕಾರಿ ಹೇಳಿಕೆಗೆ ಕಾಂಗ್ರೆಸ್ ಸದಸ್ಯರಾದ ಸಿ. ವೀರಭದ್ರಬಾಬು, ಎಂ. ಶಿವಮೂರ್ತಿ, ಜೆಡಿಎಸ್ ಸದಸ್ಯ ಪಿ. ತಿಪ್ಪೇಸ್ವಾಮಿ ಈ ರೀತಿಯ ಅರೆಬರೆ ಅಧಿಕಾರವುಳ್ಳ ಸದಸ್ಯರು ನಡೆಸುವ ಸಭೆ ನಮಗೆ ಬೇಕಿಲ್ಲ. ಅದ್ದರಿಂದ, ಈ ಸಭೆ ರದ್ದುಪಡಿಸಿ ಎಂದು ಮುಖ್ಯಾಧಿಕಾರಿಯನ್ನು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯೆ ಜಯಮ್ಮ, ಪಟ್ಟಣದಲ್ಲಿ  ಕುಡಿಯುವ ನೀರು ಸ್ವಚ್ಚತೆ ಇಲ್ಲದೇ ಜನತೆ ನೊಂದಿದ್ದಾರೆ. ಅದ್ದರಿಂದ ಅನಗತ್ಯ ವಿಷಯಗಳನ್ನು ಬಿಟ್ಟು ಅಭಿವೃದ್ಧಿಗೆ ಬಂದ ಅನುದಾನ ಬಳಸಿಕೊಳ್ಳಲು ಕ್ರಿಯಾಯೋಜನೆ ಅಂಗೀಕರಿಸಿ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಬೇಕು ಎಂದು ತಿರುಗೇಟು ನೀಡಿದರು.ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಕೈಜೋಡಿಸಿ ಸಹಕಾರ ನೀಡಿದಾಗ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ. ಯಾವುದೇ ವೈಯಕ್ತಿಕ ವಿಷಯಗಳನ್ನು ಬಿಟ್ಟು ಅಭಿವೃದ್ಧಿ ವಿಷಯಕ್ಕೆ ಬಗ್ಗೆ ಮಾತ್ರ ಒತ್ತು ನೀಡಬೇಕು ಎಂದು ಮುಖ್ಯಾಧಿಕಾರಿ ಬಸವರಾಜ್ ಸದಸ್ಯರಲ್ಲಿ ಮನವಿ ಮಾಡಿದರು.ಎಂಜಿನಿಯರ್ ವೀರೇಶ್, ಕ್ರಿಯಾಯೋಜನೆ ಹಾಗೂ ಕಾಮಗಾರಿಗಳ ವಿವರಗಳನ್ನು ಸಭೆಯಲ್ಲಿ ಗಮನ ಸೆಳೆದಾಗ ಒಂದೇ ವಾರ್ಡ್‌ಗೆ ್ಙ 20 ಲಕ್ಷ ಹಣ ನೀಡಿದರೆ ಇನ್ನು ಉಳಿದ ವಾರ್ಡ್‌ಗಳ ಅಭಿವೃದ್ಧಿ ಹೇಗೆ? ಎಂದು ಕೆಲ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷೆ ಪಿ. ಶಂಷಾದ್ ಪ್ರತಿಕ್ರಿಯಿಸಿ, ಎಲ್ಲಾ ಸದಸ್ಯರ ವಾರ್ಡ್‌ಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.ರಹೀಂ ನಗರ ಮತ್ತು ಶಾಂತಿನಗರಗಳಲ್ಲಿ ಮಳೆಬಂದಾಗ ತೀವ್ರ ಸಮಸ್ಯೆ ಉಂಟಾಗುತ್ತದೆ. ಮನೆಗಳಿಗೆ ನೀರು ನುಗ್ಗುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯ ಮುಜೀಬುಲ್ಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುದಕೊಂಡರು.ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯ ಗಾಡಿ ತಿಪ್ಪೇಸ್ವಾಮಿ, ಈ ಸಮಸ್ಯೆಗೆ ಬಳ್ಳಾರಿ ರಸ್ತೆಯ ಸೇತುವೆ ಬಳಿ ಒತ್ತುವರಿ ಮಾಡಿ ಚಿತ್ರಮಂದಿರದ ತಡೆಗೋಡೆ ನಿರ್ಮಿಸಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದರು.ಇದಕ್ಕೆ ಕುಪಿತರಾದ ಎಚ್.ವಿ. ಪ್ರಸನ್ನಕುಮಾರ್, ಅಲ್ಲಿ ಒತ್ತುವರಿಯಾಗಿಲ್ಲ. ಚಿತ್ರಮಂದಿರದ ಜಾಗದಲ್ಲೇ ಗೋಡೆ ನಿರ್ಮಿಸಲಾಗಿದೆ ಇದನ್ನು ತೆರವು ಗೊಳಿಸಲು ಅಳತೆ ಮಾಡಿಸಲು ಸಾಧ್ಯವಾಗುವುದಿಲ್ಲ ಎಂದು ಏರು ದನಿಯಲ್ಲಿ ಮಾತನಾಡಿದರು. ಗಾಡಿ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಅಧಿಕಾರಿಗಳ ಗಮನ ಸೆಳೆದಿದ್ದೆೀನೆ. ಅನಗತ್ಯವಾಗಿ ನೀನೇಕೆ ಮಧ್ಯ ಪ್ರವೇಶಿಸುತ್ತಿದ್ದೀಯ ಎಂದು ಪ್ರಶ್ನಿಸಿದರು.ಇದರಿಂದಾಗಿ ಎರಡು ಬಣದ ಸದಸ್ಯರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ನಾಮಫಲಕಗಳಿಂದ ಮೇಜು ಗುದ್ದಿ ಆತಂಕದ ವಾತವರಣ ಸೃಷ್ಟಿಯಾಗುವಂತೆ ಮಾಡಿದರು. ಮುಖ್ಯಾಧಿಕಾರಿ ಬಸವರಾಜ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.