ಶನಿವಾರ, ಜನವರಿ 18, 2020
23 °C

ಎಲ್‌ಪಿಜಿ: ಮತ್ತೆ ಆರು ಜಿಲ್ಲೆಗಳಲ್ಲಿ ನೇರ ಸಬ್ಸಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಡುಗೆ ಅನಿಲದ (ಎಲ್‌ಪಿಜಿ) ಸಬ್ಸಿಡಿ ಹಣವನ್ನು ಗ್ರಾಹ ಕರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಯನ್ನು ಬೆಂಗಳೂರು ನಗರ ಸೇರಿದಂತೆ ಆರು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದು ಭಾನುವಾರದಿಂದ ಜಾರಿಗೆ ಬಂದಿದೆ.ಹಾವೇರಿ, ಕೊಪ್ಪಳ, ಬೀದರ್‌, ದಾವಣಗೆರೆ ಹಾಗೂ ವಿಜಾಪುರ ಜಿಲ್ಲೆಗಳು ಈಗ ಈ ಯೋಜನೆ ವ್ಯಾಪ್ತಿಗೆ ಸೇರಿವೆ. ಈಗಾಗಲೇ ಮೊದಲನೇ ಹಂತದಲ್ಲಿ ಮೈಸೂರು, ತುಮಕೂರು, ಮೂರನೇ ಹಂತದಲ್ಲಿ ಧಾರವಾಡ, ಉಡುಪಿ, ನಾಲ್ಕನೇ ಹಂತದಲ್ಲಿ ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಯೋಜ ನೆಯನ್ನು ಜಾರಿ ಮಾಡಲಾಗಿದೆ.ಗ್ರಾಹಕರು ತಮ್ಮ ಅನಿಲ ಏಜೆನ್ಸಿ ಹಾಗೂ ಬ್ಯಾಂಕ್‌ನಲ್ಲಿ ಆಧಾರ್‌ ಸಂಖ್ಯೆ ಯನ್ನು ಮೂರು ತಿಂಗಳ ಒಳಗೆ ನೋಂದಣಿ ಮಾಡಿಸಿಕೊಳ್ಳಲು ಅವ ಕಾಶ ಕಲ್ಪಿಸಲಾಗಿದೆ. ನೋಂದಣಿ ನಂತರ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣ ನೇರ ಸಂದಾಯ ವಾಗ ಲಿದೆ ಎಂದು  ಮೂಲಗಳು ತಿಳಿಸಿವೆ.‘ಭಾನುವಾರದಿಂದಲೇ ಆಧಾರ್‌ ಸಂಖ್ಯೆಯನ್ನು ಅನಿಲ ವಿತರಕ ಕಚೇರಿ ಗಳಲ್ಲಿ ಹಾಗೂ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಪಾರಂಭವಾಗಿದ್ದು, 2014ರ ಫೆಬ್ರ ವರಿವರೆಗೆ ಕಾಲಾವಕಾಶ ನೀಡಲಾ ಗಿದೆ. ಈ ಅವಧಿವರೆಗೂ ಸಬ್ಸಿಡಿ ದರ ದಲ್ಲೇ ಸಿಲಿಂಡರ್‌ ವಿತರಿಸಲಾಗುತ್ತದೆ. ಮೂರು ತಿಂಗಳ ಕಾಲಾವಕಾಶ ಮುಗಿಯುತ್ತಿದ್ದಂತೆ ಈ 6 ಜಿಲ್ಲೆಗಳ ಗ್ರಾಹಕರು ಮಾರುಕಟ್ಟೆ ದರದಲ್ಲೇ ಸಿಲಿಂಡರನ್ನು ಖರೀದಿಸಬೇಕಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.ಜನವರಿ ಒಂದರಿಂದ ಆರನೇ ಹಂತದಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಈ ಯೋಜನೆ ಆರಂಭವಾಗಲಿದೆ. ಚಿಕ್ಕ ಬಳ್ಳಾಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಚಿಕ್ಕ ಮಗಳೂರು, ಗುಲ್ಬರ್ಗ, ದಕ್ಷಿಣ ಕನ್ನಡ, ಕೊಡಗು, ಬಳ್ಳಾರಿ, ಮಂಡ್ಯ, ಕೋಲಾರ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆ ದಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ.ಆತಂಕ ಬೇಡ: ಆಧಾರ್‌ ಸಂಖ್ಯೆಗಾಗಿ ಅರ್ಜಿ ಸಲ್ಲಿಸಿ, ಇನ್ನೂ ಸಿಗದೇ ಇರುವ ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ತಕ್ಷಣವೇ  ತಮ್ಮ ಬಳಿ ಇರುವ ಆಧಾರ್ ಸ್ವೀಕೃತಿ ಪತ್ರದ ಪ್ರತಿಯೊ ಂದಿಗೆ ಮನವಿ ಪತ್ರವೊಂದನ್ನು ಜಿಲ್ಲಾಧಿ ಕಾರಿ ಹಾಗೂ ಸಂಬಂಧಪಟ್ಟ ಗ್ಯಾಸ್‌ ಏಜೆನ್ಸಿಗೆ ಸಲ್ಲಿಸಬೇಕು. ಅವರು ಆಧಾರ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಿಮ್ಮ ಮನವಿಯನ್ನು ಆಧಾರ್‌ ಅಧಿಕಾರಿ ಗಳಿಗೆ ವರ್ಗಾಯಿಸುತ್ತಾರೆ. ಈ ಮೂಲಕ ಆಧಾರ್‌ ಸಂಖ್ಯೆಯನ್ನು ಆದಷ್ಟು ಬೇಗ ಪಡೆಯಬಹುದು.ಅಡುಗೆ ಅನಿಲದ ಗ್ರಾಹಕ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಜೋಡಿಸಲು ಹತ್ತಿರದ ಅನಿಲ ವಿತರಕರನ್ನು ಸಂಪರ್ಕಿಸಿ. ಇನ್ನು ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಸೇರಿಸಲು ಈ ವೆಬ್‌ (http://www.petroleum.nic.in/dbtl) ವಿಳಾಸಕ್ಕೆ ಹೋಗಿ ಅರ್ಜಿ ನಮೂನೆ ಪಡೆಯಬಹುದು.

ಪ್ರತಿಕ್ರಿಯಿಸಿ (+)