ಎಸ್.ಎನ್. ಸುಬ್ಬಣ್ಣ ಇನ್ನಿಲ್ಲ

7

ಎಸ್.ಎನ್. ಸುಬ್ಬಣ್ಣ ಇನ್ನಿಲ್ಲ

Published:
Updated:
ಎಸ್.ಎನ್. ಸುಬ್ಬಣ್ಣ ಇನ್ನಿಲ್ಲ

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ (ಎಸ್‌ಬಿಐ) ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಸುಬ್ಬಣ್ಣ (80) ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು.ಜೆ.ಪಿ.ನಗರ ಮೊದಲನೇ ಹಂತದ ಎಸ್‌ಬಿಐ ಕಾಲೊನಿಯಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದ ಸುಬ್ಬಣ್ಣ, ಎಸ್‌ಬಿಐ ಕನ್ನಡ ಸಂಘದ ಸಂಸ್ಥಾಪಕರಾಗಿದ್ದರು. ಜತೆಗೆ, ಎಸ್‌ಬಿಐ ಅಧಿಕಾರಿಗಳ ಸಂಘಟನೆಯ ಕಾರ್ಯದರ್ಶಿಯೂ ಆಗಿದ್ದರು. ಬೆಳಿಗ್ಗೆ 11.15ರ ಸುಮಾರಿಗೆ ಸುಬ್ಬಣ್ಣ ಹೃದಯಾಘಾತದಿಂದ ಕೊನೆಯುಸಿರೆಳೆದರು.ಸುಬ್ಬಣ್ಣ ಅವರು, ಪತ್ನಿ ಸುನಂದಾ, ಪುತ್ರ ಪ್ರಸನ್ನಕುಮಾರ್ ಹಾಗೂ ಪುತ್ರಿ ಉಮಾರಾವ್ ಅವರನ್ನು ಅಗಲಿದ್ದಾರೆ. ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಸಂಜೆ ಆರು ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry