ಮಂಗಳವಾರ, ಜನವರಿ 21, 2020
19 °C

ಎಸ್ಮಾ ಜಾರಿಗೆ ಕಾರ್ಮಿಕ ಸಂಘಟನೆಗಳ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿಭಟನೆ, ಮುಷ್ಕರ ನಡೆಸುವ ಸರ್ಕಾರಿ ವಲಯಗಳ ಕಾರ್ಮಿ­ಕರ ಮೇಲೆ ‘ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯನ್ನು (ಎಸ್ಮಾ)­ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ವಿವಿಧ ಸಂಘಟನೆ­ಗಳಿಂದ ವಿರೋಧ ವ್ಯಕ್ತವಾಗಿದೆ. ‘ಎಸ್ಮಾ ಜಾರಿಯಾದರೆ ಪ್ರತಿಭಟನೆ ನಡೆಸುವ ನೌಕರರನ್ನು ವಾರೆಂಟ್‌ ಇಲ್ಲದೆ ಬಂಧಿಸಿ, ಜೈಲಿಗೆ ಕಳುಹಿಸ­ಬಹುದಾಗಿದೆ.

ಜತೆಗೆ ₨5,000 ದಂಡ ವಿಧಿಸಲು ಅವಕಾಶವಿದೆ. ಬದುಕಿನ ಹಕ್ಕಿಗಾಗಿ  ಹೋರಾಟ ಮಾಡುವ  ನೌಕರರನ್ನು ಹೀಗೆ ಕಾಯ್ದೆ, ಕಾನೂನು­ಗಳಿಂದ ಕಟ್ಟಿ ಹಾಕುವ ಕ್ರಮ ಸರಿಯಲ್ಲ ಎಂದು ಎಐಯುಟಿಯುಸಿ ಸಂಘಟನೆ ತಿಳಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಎಸ್ಮಾ ಕಾಯ್ದೆಯನ್ನು ಅಂಗೀಕರಿಸಿರುವ ಸರ್ಕಾರದ ಕ್ರಮವನ್ನು ರಾಜ್ಯ ಲಾರಿ ಮಾಲೀಕರು ಮತ್ತು ಏಂಜೆಂಟರ ಸಂಘ ಖಂಡಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ­ಯನ್ನು ದಮನ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದೆ.

ಪ್ರತಿಕ್ರಿಯಿಸಿ (+)