ಶಿರಸಿ: ಹಿಂದಿನ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿನ ಸ್ಥಾನಕ್ಕೆ ಬಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯ ಬರಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿಶೇಷ ಕಾರ್ಯಕ್ರಮ ರೂಪಿಸಿದೆ. ಶೈಕ್ಷಣಿಕ ಜಿಲ್ಲೆಯ ಎಲ್ಲ ಆರು ತಾಲ್ಲೂಕುಗಳ ಪ್ರೌಢಶಾಲೆಗಳ ಶಿಕ್ಷಕರು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, ಫಲಿತಾಂಶ ಹೆಚ್ಚಿಸುವ ಪ್ರಯತ್ನದಲ್ಲಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಜಿಲ್ಲೆಯ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ 10,088 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ಎಸ್. ಪ್ರಸನ್ನಕುಮಾರ್, ಫಲಿತಾಂಶ ಹೆಚ್ಚಿಸಲು ಶಾಲೆ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಿ ಪ್ರತಿ ಶಾಲೆಯಲ್ಲಿ ಅನುಷ್ಠಾನಗೊಳಿಸಲು ತಿಳಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ದಿನ ಶಾಲಾ ಅವಧಿ ಮೊದಲು ಅಥವಾ ನಂತರ ಪ್ರತಿ ವಿಷಯದಲ್ಲಿ ವಿಶೇಷ ವರ್ಗ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿನ ವಿಷಯ ಶಿಕ್ಷಕರ ಸಂಪನ್ಮೂಲ ತಂಡ ರಚಿಸಿದ್ದು, ಆಯಾ ತಾಲ್ಲೂಕಿನ ಶಾಲೆಗಳಿಗೆ ಸಂಪನ್ಮೂಲ ತಂಡ ಭೇಟಿ ನೀಡಿ ವಿಶೇಷ ಮಾರ್ಗದರ್ಶನ ನೀಡುತ್ತದೆ. ಚೇತನ್ ರಾಮ್ ಮೈಸೂರು ಅವರಿಂದ ಪರೀಕ್ಷಾ ಭಯ ಹೋಗಲಾಡಿಸುವ ಹಾಗೂ ಅಭ್ಯಾಸ ಕೌಶಲ ವೃದ್ಧಿಸುವ ವಿಶೇಷ ತರಬೇತಿಯನ್ನು ಹಳಿಯಾಳ ಹಾಗೂ ಶಿರಸಿ ತಾಲ್ಲೂಕುಗಳ ಸುಮಾರು 1500 ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.

ಡಿಸೆಂಬರ್ ಅಂತ್ಯದೊಳಗೆ ಪಠ್ಯಕ್ರಮ ಪೂರ್ಣಗೊಳಿಸಬೇಕು. ಪ್ರತಿ ತಿಂಗಳಿಗೊಮ್ಮೆ ಶೈಕ್ಷಣಿಕ ಸ್ಪರ್ಧೆ ನಡೆಸಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಪ್ರಸನ್ನಕುಮಾರ್ ತಿಳಸಿದರು.

ವಿದ್ಯಾರ್ಥಿಗಳು ಅಕ್ಟೋಬರ್ ರಜೆಯ ಸದುಪಯೋಗ ಪಡೆಯಲು ಹಿಂದಿನ ಐದು ವರ್ಷಗಳ ಪ್ರಶ್ನೆ ಪತ್ರಿಕೆ ಬಿಡಿಸುವುದು, ಪ್ರಥಮ ಸರಣಿ ಪರೀಕ್ಷೆ ಮೊದಲಾದ ಮನೆಗೆಲಸ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸ್ವಅಧ್ಯಯನ ವೇಳಾ ಪಟ್ಟಿ ನೀಡಿದ್ದು, ಅದರಂತೆ ಅವರು ಅಭ್ಯಾಸ ಮಾಡುವುದನ್ನು ಪರಿಶೀಲಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಕರು ದತ್ತಕ ತೆಗೆದುಕೊಂಡು ಅವರತ್ತ ವಿಶೇಷ ಗಮನ ನೀಡಬೇಕು. ಮಕ್ಕಳ ಕಲಿಕಾ ಸಾಧನೆ ಅನುಸರಿಸಿ ಗುಂಪು ಅಧ್ಯಯನ ನಡೆಸಲು ಮಾರ್ಗದರ್ಶನ ಮಾಡಬೇಕು. ಪ್ರತಿ ಸರಣಿ ಪರೀಕ್ಷೆಯ ನಂತರ ಶಾಲೆವಾರು ಫಲಿತಾಂಶ ವಿಶ್ಲೇಷಿಸಬೇಕು ಎಂದು ಎಲ್ಲ ಶಾಲೆಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಇನ್ನಿತರ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಎಲ್ಲ ತಂಡವು ಒಂದೊಂದು ದಿನ ಒಂದೊಂದು ತಾಲ್ಲೂಕಿಗೆ ತೆರಳಿ, ಪ್ರೌಢಶಾಲೆಗಳನ್ನು ಸಂದರ್ಶಿಸಿ ಶೈಕ್ಷಣಿಕ ಕಾರ್ಯಕ್ರಮ ಪರಿಶೀಲಿಸಿ ಮಾರ್ಗದರ್ಶನ ನೀಡುವ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಪ್ರಸನ್ನಕುಮಾರ್ ತಿಳಿಸಿದರು.

‘ಪಾಸಿಂಗ್ ಪ್ಯಾಕೇಜ್’
ಉತ್ತೀರ್ಣತೆಯ ಅಂಚಿನಲ್ಲಿರುವ ವಿದ್ಯಾರ್ಥಿಗಳಿಗೆ ‘ಪಾಸಿಂಗ್ ಪ್ಯಾಕೇಜ್’ ಅನ್ನು ರಚಿಸಿ ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಈ ಪ್ಯಾಕೇಜ್ನಲ್ಲಿ ವಿಶೇಷ ಬೋಧನೆ, ಸಾಧ್ಯವಾದಲ್ಲಿ ಸನಿವಾಸ ತರಬೇತಿ, ವಾರಕ್ಕೊಮ್ಮೆ ಎಲ್ಲ ವಿಷಯಗಳ ರಸಪ್ರಶ್ನೆ ಕಾರ್ಯಕ್ರಮ, ವಿದ್ಯಾರ್ಥಿಗಳ ಕೌನ್ಸಿಲಿಂಗ್, ಅಣಕು ಪರೀಕ್ಷೆ, ಗುಂಪು ಅಧ್ಯಯನ, ಬರವಣಿಗೆ ಸುಧಾರಣೆ ತಂತ್ರ, ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮಗಳು ಒಳಗೊಂಡಿವೆ. ಎಂ.ಎಸ್. ಪ್ರಸನ್ನಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.