ಶನಿವಾರ, ಜನವರಿ 28, 2023
16 °C

ಎಸ್‌ಎಐಗೆ ಮಣಿದ ಎಂಎಲ್‌ಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌ಎಐಗೆ ಮಣಿದ ಎಂಎಲ್‌ಐ

ಬೆಂಗಳೂರು: ಎಸ್‌ಎಐ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ‘ಓಜೋನ್ ಗ್ರೂಪ್’ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಗೆಲುವು ಪಡೆದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಸ್‌ಎಐ 2-1 ಗೋಲುಗಳಿಂದ ಎಂಎಲ್‌ಐ ತಂಡವನ್ನು ಮಣಿಸಿತು. ವಿಜಯಿ ತಂಡದ ಎಸ್.ಕೆ ಉತ್ತಪ್ಪ (26), ದೀಪಕ್ ಬಿಜ್ವಾಡ್ (27) ಗೋಲುಗಳನ್ನು ತಂದಿತ್ತರೆ, ಎದುರಾಳಿ ತಂಡದ ಬಿ. ರೋಷನ್ (46) ಚೆಂಡನ್ನು ಗುರಿ ಸೇರಿಸಿದರು.

ಇನ್ನೊಂದು ಪಂದ್ಯದಲ್ಲಿ ಬಿಪಿಸಿಎಲ್ ತಂಡ 4-1 ಗೋಲುಗಳಿಂದ ಎಎಸ್‌ಸಿ ತಂಡದ ಎದುರು ಗೆಲುವು ಪಡೆಯಿತು. ಬಿಪಿಸಿಎಲ್‌ನ ಹರಿ ಪ್ರಸಾದ್ (7, 46, 63), ತುಷಾರ್ ಖಾಂಡೇಕರ್ (52) ಹಾಗೂ ಎಎಸ್‌ಸಿಯ ಎ.ಎಚ್.ಚಿಟ್ಟಿಯಪ್ಪ (9) ಗೋಲು ತಂದಿತ್ತರು.

ಐಒಸಿಎಲ್ ತಂಡ 5-0ರಲ್ಲಿ ಆರ್ಮಿ ಗ್ರೀನ್ ತಂಡವನ್ನು ಸುಲಭವಾಗಿ ಪರಾಭವಗೊಳಿಸಿತು. ವಿಜಯಿ ತಂಡದ ರಘುನಾಥ್ (8, 66), ಅರ್ಜುನ್ ಅಂಟಿಲ್ (29), ರೋಶನ್ ಮಿಂಜ್ (37) ಹಾಗೂ ವಿಕ್ರಮ್‌ಕಾಂತ್ (43) ಗೋಲು ಗಳಿಸಿದರು.

ಏರ್ ಇಂಡಿಯಾ 5-3ಗೋಲುಗಳಿಂದ ಫೋರ್ಟಿಸ್ ಎದುರು ಗೆಲುವು ಪಡೆಯಿತು. ಏರ್ ಇಂಡಿಯಾ ತಂಡದ ಬೀರೇಂದ್ರ ಲಾಕ್ರಾ (12 ಹಾಗೂ 42), ಅರ್ಜುನ್ ಹಾಲಪ್ಪ (27), ಶಿವೇಂದರ್ ಸಿಂಗ್ (46 ಹಾಗೂ 57) ಗೋಲು ಗಳಿಸಿದರು. ಫೋರ್ಟಿಸ್‌ಗೆ ದಿವಾಕರ್ ರಾಮ್ (46), ಟೈರಾನ್ ಪೆರಿರಾ (52), ಗುರಿಂದರ್ ಸಿಂಗ್ (67) ಚೆಂಡನ್ನು ಗುರಿ ಸೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.