ತುಮಕೂರು: ಎಸ್ಐಟಿ ಕಾಲೇಜಿನ ಮೊದಲ ಪದವಿ ಪ್ರದಾನ ಸಮಾರಂಭ ಮಾರ್ಚ್ 13ರಂದು ನಡೆಯಲಿದೆ.ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ನಡೆಯುವ ಸಮಾರಂಭದದಲ್ಲಿ ಎಂಬಿಎ 111, ಎಂಟೆಕ್ 44 ಹಾಗೂ ಪಿಜಿಡಿಎಂಎಫ್ 19 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.

ಸಾನ್ನಿಧ್ಯವನ್ನು ಡಾ.ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರ. ಇನ್ಫೋಸಿಸ್ ಟೆಕ್ನಾಲಜಿಸ್ ಸಂಸ್ಥೆ ಉಪಾಧ್ಯಕ್ಷ ಶ್ರೀಕಂಠನ್, ಎಸ್ಐಟಿ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎನ್.ರುದ್ರಯ್ಯ, ಗುಲ್ಬರ್ಗ ವಿ.ವಿ ವಿಶ್ರಾಂತ ಕುಲಪತಿ ಡಾ.ಎನ್.ರುದ್ರಯ್ಯ ಇನ್ನಿತರರು ಪಾಲ್ಗೊಳ್ಳುವರು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ತಿಳಿಸಿದರು.ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಗುತ್ತಿದೆ.

ಎನ್.ಲೋಕೇಶ್ (ಎಂಬಿಎ), ಹರ್ಷಿತಾ (ಎಂಬಿಎ ಫೈನಾನ್ಸ್), ಕೆ.ಪಿ.ಜ್ಯೋತಿ (ಪಿಜಿಡಿಎಂಎಫ್), ಪಿ.ಎಸ್.ಶಿಲ್ಪಶ್ರೀ (ಎಂ.ಟೆಕ್- ಸಿಗ್ನಲ್ ಪ್ರೊಸೆಸಿಂಗ್), ಎ.ಎನ್.ಕೃಷ್ಣಮೂರ್ತಿ (ಎಂ.ಟೆಕ್- ಥರ್ಮಲ್ ಪವರ್ ಎಂಜಿನಿಯರಿಂಗ್) ಚಿನ್ನದ ಪದಕ ಗಳಿಸಿದ್ದಾರೆ. ಜಿ.ಸ್ಮಿತಾ (ಎಂಬಿಎ-ಎಚ್ಆರ್), ಬಿ.ವಿಜಯಲಕ್ಷ್ಮಿ (ಎಂಬಿಎ-ಎಚ್ಆರ್), ಗುರುರಾಜ್ ಗೌಡರ್ (ಎಂಬಿಎ- ಮಾರ್ಕೆಟಿಂಗ್) ನಗದು ಬಹುಮಾನ ಗಿಟ್ಟಿಸಿದ್ದಾರೆ.

737 ವಿದ್ಯಾರ್ಥಿಗಳಿಗೆ ಉದ್ಯೋಗ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದಿರುವ ಕ್ಯಾಂಪಸ್ ಉದ್ಯೋಗ ಆಯ್ಕೆಯಲ್ಲಿ ಕಾಲೇಜಿನ 800 ವಿದ್ಯಾರ್ಥಿಗಳಲ್ಲಿ 737 ವಿದ್ಯಾರ್ಥಿಗಳನ್ನು ವಿವಿಧ ಕಂಪೆನಿಗಳು ಆಯ್ಕೆ ಮಾಡಿಕೊಂಡಿವೆ. ಟಿಸಿಎಸ್ ಕಂಪೆನೆಯೊಂದೇ 364 ವಿದ್ಯಾರ್ಥಿಗಳಿಗೆ ಕೆಲಸ ನೀಡಿದೆ.

ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಕಂಪೆನಿ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ವಾರ್ಷಿಕ ತಲಾ ರೂ. 5.90 ಲಕ್ಷ ವೇತನ ನೀಡಿದೆ ಎಂದು ಡಾ.ಎಂ.ಎನ್.ಚನ್ನಬಸಪ್ಪ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಶಿವಕುಮಾರಯ್ಯ, ಡಾ.ಸೊಲ್ಲಾಪುರ್ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.