ಭಾನುವಾರ, ಏಪ್ರಿಲ್ 11, 2021
25 °C

ಎಸ್‌ಪಿಬಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಡಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಯಾರೂ ಅಭಿಮಾನಿಗಳಲ್ಲ; ಎಲ್ಲರೂ  ಸ್ನೇಹಿತರು ಎಂದು ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾವುಕರಾಗಿ ನುಡಿದರು.  ಬೆಂಗಳೂರಿನ ಇಂದಿರಾನಗರ ಕ್ಲಬ್‌ನಲ್ಲಿ ಎಸ್‌ಪಿಬಿ ಫ್ಯಾನ್ಸ್ ಚಾರಿಟಬಲ್ ಫೌಂಡೇಶನ್‌ನವರು ಹಮ್ಮಿಕೊಂಡ 8ನೇ ವಾರ್ಷಿಕೋತ್ಸವ ದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ದೇವರು ಕೊಟ್ಟಿದ್ದರಲ್ಲಿ ಒಂದಷ್ಟನ್ನು ಇಲ್ಲದವರಿಗೆ ನೀಡಿ ಖುಷಿ ಪಡುವುದೇ ಮಾನವಧರ್ಮ ಎಂದು ಅವರು ಹೇಳಿದರು.  ಗೀತ ರಚನೆಕಾರ ಕಲ್ಯಾಣ್ ಮತ್ತು ತಬಲಾ ವಾದಕ ವೇಣು ಅವರು ಎಸ್‌ಪಿಬಿ ಕುರಿತ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಬದುಕಿನ ಸ್ವಾರಸ್ಯಕರ ಘಟನೆಗಳನ್ನು ವಿವರಿಸಿದ ಎಸ್‌ಪಿಬಿ ಅವರು ಹಳೆಯ ಹಾಡುಗಳ ತುಣುಕುಗಳನ್ನು ಹಾಡಿದರು. ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.  ನಂತರ ಅವರು ಆನಂದ ಆಶ್ರಮ, ವಾರ್ಡ್ಸ್, ಲಿಟಲ್ ಫ್ಲವರ್ ಹೋಂ... ಮುಂತಾದ ಸೇವಾ ಸಂಸ್ಥೆಗಳಿಗೆ ಧನಸಹಾಯದ ಚೆಕ್‌ಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ‘ಪದ್ಮಭೂಷಣ ಪ್ರಶಸ್ತಿ’ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಪಿಬಿ ಅವರನ್ನು ಸನ್ಮಾನಿಸಲಾಯಿತು. ಬಾಲು ಅವರ ಪುತ್ರ ಕಲ್ಯಾಣ ಚರಣ್, ಅಳಿಯ ಗಿರಿಧರ್, ನಟ ನಿತಿನ್ ಸತ್ಯಾ, ಉದ್ಯಮಿ ಜಿ.ಕೆ.ಓಬಯ್ಯ, ಎ.ಮರಿಯಪ್ಪ, ಪುರುಷೋತ್ತಮ್, ಅರ್ಚನಾ ಉಡುಪ, ಸುಲೇಖ, ವಾಣಿ ಹರಿಕೃಷ್ಣ ಉಪಸ್ಥಿತರಿದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.