ಎಸ್ಬಿಐ ಲಾಭ ರೂ.3658 ಕೋಟಿ
ಮುಂಬೈ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ರೂ.3,658 ಕೋಟಿ ನಿವ್ವಳ ಲಾಭ ಗಳಿಸಿದ್ದು, ವಾರ್ಷಿಕ ಶೇ 30ರಷ್ಟು ಪ್ರಗತಿ ದಾಖಲಿಸಿದೆ.
ಕಳೆದ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್ ರೂ.2,810 ಕೋಟಿ ನಿವ್ವಳ ಲಾಭ ಗಳಿಸಿತ್ತು. ಬ್ಯಾಂಕಿನ ಒಟ್ಟು ವರಮಾನ ಎರಡನೇ ತ್ರೈಮಾಸಿಕದಲ್ಲಿ ರೂ.32,953 ಕೋಟಿಗಳಷ್ಟಾಗಿದೆ.
ಎನ್ಪಿಎ ಶೇ 5.15ಕ್ಕೆ: ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ) ರೂ.49,202 ಕೋಟಿಯಷ್ಟಾಗಿದ್ದು, ಶೇ 5.15ಕ್ಕೆ ಏರಿಕೆ ಕಂಡಿದೆ.
`ಎನ್ಪಿಎ~ ಏರಿಕೆಯಿಂದ `ಎಸ್ಬಿಐ~ ಷೇರು ಮೌಲ್ಯ `ಬಿಎಸ್ಇ~ಯಲ್ಲಿ ಶುಕ್ರವಾರ ಶೇ 3.89 ಕುಸಿತ ಕಂಡು ರೂ.2156ರಲ್ಲಿ ವಹಿವಾಟು ಕೊನೆಗೊಳಿಸಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.