ಭಾನುವಾರ, ಜೂಲೈ 12, 2020
28 °C

ಎಸ್‌ಬಿಐ: ಶೇ 14ರಷ್ಟು ನಿವ್ವಳ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)  ಶೇಕಡ 14.07ರಷ್ಟು ನಿವ್ವಳ ಲಾಭ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.‘ನಿವ್ವಳ ಲಾಭ ರೂ. 2,818 ಕೋಟಿಗಳಿಗೆ ಏರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಬ್ಯಾಂಕಿನ ಒಟ್ಟು ವರಮಾನ ರೂ. 21,145 ಕೋಟಿಗಳಿಂದ  ರೂ. 24,726 ಕೋಟಿಗಳಿಗೆ ಪ್ರಗತಿ ಕಂಡಿದೆ  ಎಂದು ಮುಂಬೈ ಷೇರುಪೇಟೆಗೆ ಸಲ್ಲಿಸಲಾಗಿರುವ ವರದಿಯಲ್ಲಿ ‘ಎಸ್‌ಬಿಐ’ ತಿಳಿಸಿದೆ.ಕಳೆದ 9 ತಿಂಗಳ ಅವಧಿಯಲ್ಲಿ  ಬ್ಯಾಂಕ್ ರೂ. 8,243 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.93ರಷ್ಟು ಪ್ರಗತಿ ಕಂಡಿದೆ.  ನಿವ್ವಳ ಪ್ರಗತಿ ಕೂಡ ಶೇ 22ರಷ್ಟು ಹೆಚ್ಚಳವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.