ಬುಧವಾರ, ಮೇ 12, 2021
26 °C

ಎಸ್‌ಬಿಐ: 3ನೇ ವಲಯ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಬೆಂಗಳೂರು ವೃತ್ತವು ತನ್ನ ಸಂಪರ್ಕ ಜಾಲ-2ರ ಅಡಿಯಲ್ಲಿ ಹೊಸ ವಲಯ ಸ್ಥಾಪಿಸಿದೆ.ಬೆಂಗಳೂರು ಮಹಾನಗರ ವಲಯ ವ್ಯಾಪ್ತಿ ಹೊರಗಿನ ದಕ್ಷಿಣ ಮತ್ತು ಕರಾವಳಿ ಕರ್ನಾಟಕದ 15 ಜಿಲ್ಲೆಗಳನ್ನು  ಒಳಗೊಂಡ ಹೊಸ ವಲಯವು ಈಗ ಅಸ್ತಿತ್ವಕ್ಕೆ ಬಂದಿದೆ.ಇಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್‌ನ ಚೀಫ್ ಜನರಲ್ ಮ್ಯಾನೇಜರ್ ಅಶ್ವಿನಿ ಮೆಹ್ರಾ ಅವರು ಈ ಹೊಸ ವಲಯವು ಅಸ್ತಿತ್ವಕ್ಕೆ ಬಂದಿರುವುದನ್ನು ಪ್ರಕಟಿಸಿದರು.ಈ ಮೊದಲು ಕೇವಲ ಎರಡು ವಲಯಗಳು ಕಾರ್ಯನಿರ್ವಹಿಸುತ್ತಿದ್ದವು. ವಹಿವಾಟು ಉತ್ತೇಜಿಸಲು ಮತ್ತು ಬ್ಯಾಂಕ್ ಶಾಖೆಗಳ ಉತ್ತಮ ನಿರ್ವಹಣೆ ಉದ್ದೇಶಕ್ಕೆ ಈ ಹೊಸ ವಲಯ ಸ್ಥಾಪಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.