ಬೆಂಗಳೂರು: ಸುಲೈಮಾನ್ ಅಟ್ಟೊ ಲಾಹಿ ಅವರಿಂದ ತರಬೇತಿ ಪಡೆದ ‘ಏಂಜೆಲ್ ಡಸ್ಟ್‘ ಟ್ರೆವರ್ ಪಟೇಲ್ ಸವಾರಿಯಲ್ಲಿ ಮತ್ತೊಂದು ಅನಿರೀಕ್ಷಿತ ಗೆಲುವು ಪಡೆದಿದೆ.

ಹಿಂದಿನ ಬೇಸಿಗೆ ರೇಸ್ಗಳ ಕಿಂಗ್ಫಿಷರ್ ಡರ್ಬಿಯಲ್ಲಿ ಎಲ್ಲರ ಲೆಕ್ಕಚಾರ ತಲೆಕೆಳಗು ಮಾಡಿದ್ದ ವಿನ್ ಲೆಜೆಂಡ್ ಮತ್ತು ಏಂಜೆಲಿಕ್ ಸಂತತಿಯ ನಾಲ್ಕು ವರ್ಷದ ಗಂಡು ಕುದುರೆ ‘ಏಂಜೆಲ್ ಡಸ್ಟ್’, ಪ್ರಸಕ್ತ ಚಳಿಗಾಲದ ರೇಸ್ಗಳ ಶ್ರಿಮಂತ ರೇಸ್ ‘ಗರುಡಾ ಬೆಂಗಳೂರು ಡರ್ಬಿ’ಯಲ್ಲಿ ಮತ್ತೊಮ್ಮೆ ಅನಿರೀಕ್ಷಿತ ಗೆಲುವು ಪಡೆಯಿತು. ಎಂಟು ಗಂಡು ಮತ್ತು ಎರಡು ಹೆಣ್ಣು ಕುದುರೆಗಳು ಭಾಗವಹಿಸಿದ್ದ, ಈ ಡರ್ಬಿಯಲ್ಲಿ ‘ಬ್ರಿಲಿಯಂಟ್ ಕಟ್‘ ಮತ್ತು ‘ನ್ಯೂ ಅಲಯನ್ಸ್’ ನಡುವೆ ನೇರ ಪೈಪೋಟಿ ನಿರೀಕ್ಷಿಸಲಾಗಿತ್ತು. ಬೇಸಿಗೆಯ ಡರ್ಬಿ ಗೆದ್ದ ನಂತರದ ರೇಸ್ಗಳಲ್ಲಿ ಗಮನಾರ್ಹ ಸಾಧನೆ ಮಾಡಿರಲಿಲ್ಲವಾದ್ದರಿಂದ ‘ಏಂಜೆಲ್ ಡಸ್ಟ್’ಅನ್ನು ಕಡೆಗಣಿಸಲಾಗಿತ್ತು.

ಬೆಟ್ಟಿಂಗ್ನಲ್ಲಿ ‘ಬ್ರಿಲಿಯಂಟ್ ಕಟ್’ (2 1/4:1) ಮತ್ತು ‘ನ್ಯೂ ಅಲಯನ್ಸ್‘ (3:1) ಮೊದಲನೇ ಹಾಗೂ ಎರಡನೇ ಫೆವರಿಟ್ಗಳಾಗಿದ್ದರೆ, ‘ಮೊಗಡಿಶು’ ಮತ್ತು ‘ಏಂಜೆಲ್ ಡಸ್ಟ್’ಗೆ 8:1ಗಿಂತಲೂ ಹೆಚ್ಚಿನ ಬೆಲೆ ನೀಡಲಾಗಿತ್ತು.

ಸುಮಾರು 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ರೇಸ್ ಪ್ರಿಯರ ಹರ್ಷೊದ್ಗಾರದೊಂದಿಗೆ ಚಾಲನೆ ದೊರೆತ ಕೂಡಲೇ ‘ಕ್ಯಾಲಿಕೊ ಜ್ಯಾಕ್’ ಮೊದಲನೇ ಸ್ಥಾನದಲ್ಲಿ ಓಡುತ್ತಿತ್ತು. ಆದರೆ, ಕೊನೆಯ 800 ಮೀಟರ್ಸ್ ಇರುವಂತೆಯೆ ‘ಆರಿಗ’ ಲೀಡ್ ಪಡೆದರೆ, ಆರನೇ ಸ್ಥಾನದಲ್ಲಿ ‘ಬ್ರಿಲಿಯಂಟ್ ಕಟ್’, ಏಳನೇ ಸ್ಥಾನದಲ್ಲಿ ‘ನ್ಯೂ ಅಲಯನ್ಸ್’, ಒಂಬತ್ತನೇ ಸ್ಥಾನದಲ್ಲಿ ‘ಏಂಜೆಲ್ ಡಸ್ಟ್’ ಮತ್ತು ಹತ್ತನೇ ಸ್ಥಾನದಲ್ಲಿ ‘ಮೊಗಡಿಶು’ ಓಡುತ್ತಿದ್ದವು. ಕೊನೆಯ ನೇರ 400 ಮೀಟರ್ಸ್ನಲ್ಲಿ ‘ಬ್ರಿಲಿಯಂಟ್ ಕಟ್’ ವೇಗವಾಗಿ ಓಡಿಬಂದು ಲೀಡ್ ಪಡೆಯಿತು. ‘ಮೊಗಡಿಶು’ ಸಹಾ ಉತ್ತಮವಾಗಿ ಓಡಿ ಬಂದು ‘ಬ್ರಿಲಿಯಂಟ್ ಕಟ್’ಗೆ ಸವಾಲೊಡ್ಡಿತು. ಆದರೆ, ‘ಬ್ರಿಲಿಯಂಟ್ ಕಟ್’ ಧ್ರುತಿಗೆಡದೆ ವೇಗವಾಗಿ ಮುನ್ನುಗ್ಗುತ್ತಲೆ ಇದ್ದುದ್ದನ್ನು ನೋಡಿ, ‘ಬ್ರಿಲಿಯಂಟ್ ಕಟ್’ಗೆ ಗೆಲುವು ಖಚಿತವೆನಿಸಿತ್ತು.

ಆ ಸಮಯದಲ್ಲಿ ಟ್ರೆವರ್ ಪಟೇಲ್ ಸವಾರಿಯಲ್ಲಿದ್ದ ‘ಏಂಜೆಲ್ ಡಸ್ಟ್’ ಹಿಂದಿನಿಂದ ದಾಪುಗಾಲು ಹಾಕುತ್ತಾ ಓಡಿಬಂದು ಕೊನೆಯ ಕ್ಷಣದಲ್ಲಿ ‘ಲಾಂಗ್ ನೆಕ್’ ಅಂತರದಿಂದ ಗೆಲುವನ್ನು ‘ಬ್ರಿಲಿಯಂಟ್ ಕಟ್’ನಿಂದ ಕಸಿದು ಕೊಂಡು ರೋಚಕ ವಿಜಯ ಸಾಧಿಸಿತು. ಮೊಗಡಿಸು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ‘ನ್ಯೂ ಅಲಯನ್ಸ್’ ನಿರಾಸೆ ಮೂಡಿಸಿ ನಾಲ್ಕೆನೇ ಸ್ಥಾನ ಪಡೆಯಿತು. ‘ಲೆಟ್ ದಿ ಲಯನ್ ರೋರ್’ ಮತ್ತು ‘ಆರಿಗ’ ಕ್ರಮವಾಗಿ ಐದನೇ ಮತ್ತು ಆರನೇ ಸ್ಥಾನ ಅಲಂಕರಿಸಿದವು.

2400 ಮೀಟರ್ಸ್ ದೂರದ ಈ ಡರ್ಬಿಯಲ್ಲಿ ಗೆಲುವು ಪಡೆಯಲು ‘ಏಂಜೆಲ್ ಡಸ್ಟ್’ 2 ನಿಮಿಷ 33.49 ಸೆಕೆಂಡ್ಸ್ ತೆಗೆದುಕೊಂಡಿತು. ಈ ಗೆಲುವಿನೊಂದಿಗೆ ‘ಏಂಜೆಲ್ ಡಸ್ಟ್’ ಮಾಲೀಕರಾದ ವಿಜಯ್ ಮಲ್ಯ ಪ್ರತಿನಿಧಿಸುವ ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್ಸ್ಟಾಕ್ ಬ್ರೀಡರ್ಸ್ ಲಿಮಿಟೆಡ್ಗೆ ಎರಡು ಲಕ್ಷ ಬೆಲೆಯ ಸುಂದರ ಟ್ರೋಫಿ ಮತ್ತು ಮೊದಲನೇ ಬಹುಮಾನ ರೂ.61.47 ಲಕ್ಷ ದೊರಕಿಸಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.