ಬುಧವಾರ, ಜೂನ್ 16, 2021
22 °C

ಏಕೀಕರಣದ ಹೋರಾಟಗಾರ ಕೂನಾ ಸಿದ್ದಪ್ಪ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಕರ್ನಾಟಕ ಏಕೀಕರಣ ಹೋರಾಟಗಾರರಾದ ಕೂನಾ ಸಿದ್ದಪ್ಪ (78) ಮಂಗಳವಾರ ನಿಧನ ಹೊಂದಿದರು. ಮೃತರಿಗೆ ಐದು ಜನ ಹೆಣ್ಣುಮಕ್ಕಳು, ಮೂವರು ಗಂಡು ಮಕ್ಕಳಿದ್ದಾರೆ.ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ಪಟ್ಟಣದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ.

1955ರ ನವೆಂಬರ್ 21ರಂದು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್‌ನ ಸತ್ಯಾಗ್ರಹದಲ್ಲಿ ಭಾಗವಹಿಸಿ 16 ದಿನ ಸೆರೆಮನೆವಾಸ ಅನುಭವಿಸಿದ್ದರು. 1952ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ, 1956ರಿಂದ 1961ರ ವರೆಗೆ ಕುರುಗೋಡು ಪಟ್ಟಣ ಪಂಚಾಯಿತಿ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದರು.1960ರಿಂದ1962ರ ವರೆಗೆ ಕುರುಗೋಡಿನ ನೇಕಾರರ ಸಹಕಾರಿ ಉತ್ಪಾದಕರ ಹಾಗೂ ಮಾರಾಟಗಾರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ. 1983 ರಿಂದ1986 ವರೆಗೆ ಬಳ್ಳಾರಿ ತಾಲ್ಲೂಕು ಅಂಬರ್ ಚರಕಾ ಕ್ರಾಫ್ಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ, 1988ರಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸದಸ್ಯರಾದ ಸೇವೆ ಸಲ್ಲಿಸಿದ್ದರು.1992ರಲ್ಲಿ ಬಳ್ಳಾರಿ ತಾಲ್ಲೂಕು ಭೂಮಿ ಸಾಗುವಳಿ ಅಕ್ರಮ-ಸಕ್ರಮ ಸಮಿತಿ ಸದಸ್ಯರಾಗಿ ಹಾಗೂ 1998ರಲ್ಲಿ ಅಖಿಲ ಭಾರತ ಕುರುಹಿನಶೆಟ್ಟಿ ಸಮಾಜದ ಗುಲ್ಬರ್ಗ ವಿಭಾಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಪಟ್ಟಣದ ವಿವಿಧ ಸಂಘಸಂಸ್ಥೆ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.