ದೇವನಹಳ್ಳಿ: ಎಚ್ಐವಿ ಪೀಡಿತರನ್ನು ಅವರ ಕುಟುಂಬದ ಸದಸ್ಯರು ಅಥವಾ ಸಮುದಾಯವು ಬಹಿಷ್ಕಾರ ಹಾಕಿದರೆ ಅಂತಹವರನ್ನು ಎರಡು ವರ್ಷ ಕಠಿಣ ಶಿಕ್ಷೆಗೆ ಗುರಿಪಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶೈಲ ಕುಮಾರ್ ತಿಳಿಸಿದರು.

ಆರೋಗ್ಯ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಇಲಾಖೆ ಮತ್ತು ತಾಲ್ಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಜಿಲ್ಲೆಯಲ್ಲಿ 750 ಏಡ್ಸ್ ಪೀಡಿತರಿದ್ದಾರೆ. ಈ ಪೈಕಿ 190 ರೋಗಿಗಳು ಏಡ್ಸ್ ಜೊತೆಗೆ ಕ್ಷಯ ರೋಗದಿಂದ ಬಳಲುತ್ತಿದ್ದಾರೆ.
ಇವರಲ್ಲಿ ಶೇ.90 ರಷ್ಟು ಮಂದಿ ಕಾಂಡೋಮ್ ರಹಿತವಾಗಿ ಲೈಂಗಿಕ ಸಂಬಂಧ ಹೊಂದಿದ ಪರಿಣಾಮ ಕಾಯಿಲೆ ಪೀಡಿತರಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಲೈಂಗಿಕತೆ ಬಗ್ಗೆ ಅರಿವಿನ ಕೊರತೆ ಇದೆ. ಗುಪ್ತ ಸಮಾ ಲೋಚನೆ, ಉಚಿತ ರಕ್ತಪರೀಕ್ಷೆ ಅತಿ ಮುಖ್ಯ. ವೈಯಕ್ತಿಕ ಸ್ವಚ್ಛತೆ ಬಗ್ಗೆ ಒತ್ತು ನೀಡ ಬೇಕು. ಏಡ್ಸ್ ಎಂಬುದು ಭಯಾನಕ ವಲ್ಲ. ಮಾನಸಿಕ ಸಿದ್ಧತೆ ಯೊಂದಿಗೆ ಆತ್ಮಸ್ಥೈರ್ಯ್ದದಿಂದ ಎದುರಿ ಸುವಂತೆ ವೈದ್ಯರು, ಆಶಾ ಕಾರ್ಯ ಕರ್ತೆಯರು ಒತ್ತು ನೀಡಬೇಕೆಂದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಸಿರಾಜುದ್ದಿನ್ ಮದನಿ ಮಾತ ನಾಡಿ, ಏಡ್ಸ್ ಸೋಂಕು ಎಂಬ ಪರಿ ಕಲ್ಪನೆ ಮೊದಲ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿತು. ನಂತರ ಭಾರತ ದೇಶ ದಲ್ಲಿ ಮೊದಲ ಬಾರಿಗೆ 1981 ರಲ್ಲಿ ಬೆಳಗಾವಿಯಲ್ಲಿ ಇದನ್ನು ಪತ್ತೆ ಹಚ್ಚ ಲಾಯಿತು ಎಂದು ವಿವರಿಸಿದರು.

ಎಚ್ಚರ ವಹಿಸದಿದ್ದರೆ ಯಾರಿಗೆ ಬೇಕಾದರೂ ಏಡ್ಸ್ ರೋಗ ಬರ ಬಹುದು. ಮದುವೆಗೆ ಮೊದಲು ಲೈಂಗಿಕ ಸಂಪರ್ಕ ಮಾಡದೆ ಇರು ವುದು, ಏಕಸಂಗಾತಿ ಸಂಪರ್ಕ, ಕಾಂಡೋಮ್ ಬಳಕೆ, ಸಂಸ್ಕರಣೆ ಮಾಡಿದ ಸೂಜಿ ಮತ್ತು ಸಿರಿಂಜ್ ಬಳಕೆಯಿಂದ ಏಡ್ಸ್ ಸೋಂಕು ಹರ ಡದಂತೆ ನಿಯಂತ್ರಣ ಮಾಡಬಹುದು ಎಂದರು.

ಕಾರ್ಯಕ್ರಮಕ್ಕೆ ಮೊದಲು ಆಶಾ ಕಾರ್ಯಕರ್ತರು ಆರೋಗ್ಯ ಸಹಾ ಯಕಿಯರು ಸಿಬ್ಬಂದಿ ವರ್ಗ ಮತ್ತು ಅಧಿಕಾರಿಗಳ ತಂಡ ಅರಿವು ಜಾಥಾ ನಡೆಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ತಾ.ಪಂ.ಅಧ್ಯಕ್ಷೆ ರಾಧಿಕಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಶೋಕ, ತಾಲ್ಲೂಕು ಆರೋಗ್ಯಾ ಧಿಕಾರಿ ಡಾ.ಪ್ರಿಯಲತಾ, ಬಿ.ಎಚ್. ಇ.ಓ ಗೋವಿಂದರಾಜು, ವಿಶ್ವೇಶ್ವರಯ್ಯ ಹಾಗೂ ಆಯುಷ್ ಮುಂತಾದವರು ವೈದ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.