ಶನಿವಾರ, ಮೇ 8, 2021
26 °C

ಏರ್ ಇಂಡಿಯಾ ವಿಮಾನ ಊಟಕ್ಕೆ ಕತ್ತರಿ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದೊಳಗಿನ ಕಡಿಮೆ ಅವಧಿಯ ಪ್ರಯಾಣದ ವೇಳೆ ಏರ್ ಇಂಡಿಯಾ ವಿಮಾನಗಳಲ್ಲಿ ಉಚಿತ ಊಟಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ವಿಮಾನ ಪ್ರಯಾಣಿಕರಿಗೆ ಊಟ ನೀಡದಿರುವ ತೀರ್ಮಾನ ಇನ್ನೂ ಅಂತಿಮಗೊಂಡಿಲ್ಲ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ.90 ನಿಮಿಷದೊಳಗಿನ ಪ್ರಯಾಣದ ವೇಳೆ ಬಿಸಿಯೂಟ ನೀಡದಿರಲು ಈಗಾಗಲೇ ನಿರ್ಧರಿಸಲಾಗಿದೆ. ಒಂದು ಗಂಟೆಯ ಪ್ರಯಾಣ ನಡೆಸುವ ಪ್ರಯಾಣಿಕರಿಗೂ ಊಟ ನೀಡದಿರುವ ತೀರ್ಮಾನಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ. ವಿಮಾನದಲ್ಲಿ ಬಿಸಿಯೂಟ ನೀಡುವುದರಿಂದ ಸಂಸ್ಥೆಗೆ ಹಣಕಾಸಿನ ಹೊರೆಯಾಗಲಿದೆ. ಅಲ್ಲದೆ ಇದು ಸಾಕಷ್ಟು ವಿದ್ಯುತ್ ಬಳಸುತ್ತದೆ ಎನ್ನಲಾಗಿದೆ. ಸದ್ಯ ಏರ್ ಇಂಡಿಯಾ  ವಿಮಾನಗಳಲ್ಲಿ 90 ನಿಮಿಷದೊಳಗಿನ ಪ್ರಯಾಣಿಕರಿಗೆ ಸ್ಯಾಂಡ್‌ವಿಚ್ ಮುಂತಾದ ಪದಾರ್ಥ ಮಾತ್ರ ನೀಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.