ಶುಕ್ರವಾರ, ಜೂನ್ 18, 2021
22 °C

ಏ.1ರಂದು ರ‌್ಯಾಲಿ ಡಿ ಮೈಸೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 1ರಂದು `ರ‌್ಯಾಲಿ ಡಿ ಮೈಸೂರ್~ ಮೋಟಾರ್ ರ‌್ಯಾಲಿಯನ್ನು ಆಯೋಜಿಸಲಾಗಿದೆ.ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳ ರ‌್ಯಾಲಿಯನ್ನು ಆಯೋಜಿಸಲಾಗುತ್ತಿದೆ. ಈ ರ‌್ಯಾಲಿಯಲ್ಲಿ ವೃತ್ತಿಪರ ಮತ್ತು ನೊವೈಸ್ ಕ್ಲಾಸ್ ರೈಡರ್‌ಗಳು ಭಾಗವಹಿಸಬಹುದು.ಒಟ್ಟು 200 ಕಿಲೋಮೀಟರ್ ರ‌್ಯಾಲಿ ಇದಾಗಿದ್ದು, ಮೈಸೂರು ಸುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ. ಹುಣಸೂರು ರಸ್ತೆಯ ರೂಸ್ಟ್ ಹೊಟೇಲ್‌ನಿಂದ ರ‌್ಯಾಲಿ ಆರಂಭವಾಗುತ್ತದೆ. ಒಟ್ಟು 1.5 ಲಕ್ಷ ರೂಪಾಯಿ ಪ್ರಶಸ್ತಿ ನಿಗದಿಪಡಿಸಲಾಗಿದೆ.ಹೆಸರು ನೋಂದಾಯಿಸಲು ಮಾರ್ಚ್ 28 ಕೊನೆಯ ದಿನವಾಗಿದೆ. ವಿವರಗಳಿಗೆ; ಸುಧೀರ್ ಗಣಪತಿ (ಮೊ: 9620069767) ಅಥವಾ ರತನ್ ಪೊನ್ನಪ್ಪ (ಮೊ: 9480771724) ಅವರನ್ನು ಸಂಪರ್ಕಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.