`ನನ್ನಿಂದ ಏನಾದ್ರೂ ಮಾಡ್ಲಿಕ್ಕೆ ಆಗುತ್ತಾ.. ಅಂತ ಘೋರ ಹತಾಶ ಭಾವನೆಯಲ್ಲಿ

`ವಿಶೇಷ ಮಕ್ಕಳಿಗಾಗಿ ಇರುವ ಜೆಎಸ್ಎಸ್ ಪಾಲಿಟೆಕ್ನಿಕ್ನಲ್ಲಿ ನಾನು ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಕಲಿಯುವಾಗ ಪಾಂಡು ಸರ್ ನನ್ನ ಪ್ರತಿಭೆ ಗುರುತಿಸಿದ್ದರು. ಅವರು ಐಕ್ಯಾನ್ ಟೆಕ್ನಾಲಜಿ ಆರಂಭಿಸಿದಾಗಲೇ ನನಗೆ ಆನಿಮೇಷನ್ ಕೆಲಸಗಳನ್ನು ಕೊಟ್ಟರು. ಅವರಿಂದ ಹಾಗೂ ಆನ್ಲೈನ್ ಮೂಲಕ ನಾನು ವಿವಿಧ ಕೌಶಲವನ್ನು ಕಲಿತಿದ್ದೇನೆ. ಐಕ್ಯಾನ್ ಟೆಕ್ನಾಲಜಿ ನನಗೊಂದು ಅವಕಾಶ ನೀಡಿದೆ. ನನಗೆ ಓಡಾಡಲು ಅಸಾಧ್ಯವಾದ್ದರಿಂದ ಇಂಥ ಅವಕಾಶ ಕೊಟ್ಟು ಪಾಂಡು ಸರ್ ನನಗೆ ಬದುಕಲು ಒಂದು ಸ್ಫೂರ್ತಿ ನೀಡಿದ್ದಾರೆ. ನಾನೂ ನನ್ನಂಥವರಿಗೆ ಮುಂದೆ ಸಹಾಯ ಮಾಡುತ್ತೇನೆ ಎನ್ನುತ್ತಾರೆ ಐಕ್ಯಾನ್ ಟೆಕ್ನಾಲಜಿಯ ಉದ್ಯೋಗಿಯಾಗಿರುವ ಯತೀಶ್ಕುಮಾರ್.

ಮುಳುಗ್ದ್ದಿದೆ. ಒಂದಿನ ನನ್ನ ಮನದಾಳದಿಂದ ನಾನು ಏನು ಬೇಕಾದರೂ ಮಾಡಬಲ್ಲೆ..~ ಎಂಬ ಕೂಗು ಎದ್ದಿತು. ಆ ಕೂಗೇ ನನ್ನ ಈ ಸಂಸ್ಥೆ `ಐಕ್ಯಾನ್ ಟೆಕ್ನಾಲಜೀಸ್~.
ಪಾಂಡುರಂಗ ರಾವ್ ಒಂದೊಂದೇ ಶಬ್ದ ಹೆಕ್ಕಿ-ಹೆಕ್ಕಿ ಇಷ್ಟು ಹೇಳಿ ಮುಗಿಸಬೇಕಾದರೆ ಅವರಿಗಿಂತ ಎದುರು ಕುಳಿತಿದ್ದವರಿಗೇ ಹೆಚ್ಚು ನೋವಾಗಿತ್ತು.

ಅವರಲ್ಲಿದ್ದಷ್ಟೂ ಶಕ್ತಿಯನ್ನು ಇಷ್ಟು ಶಬ್ದಗಳಿಗಾಗಿ ಬಳಸಿದ್ದಾರೇನೋ ಎಂದು ಅನಿಸಿದ್ದೂ ಹೌದು. ಅವರು ಎದ್ದು ನಾಲ್ಕಾರು ಹೆಜ್ಜೆ ನಡೆದು ಬರುವುದರೊಳಗೆ ಹಿಂದೆ ಬಾಗಿ ಬೀಳುವಂತಾಯಿತು. ಪತ್ನಿ ಜ್ಯೋತಿ ಓಡಿ ಬಂದು ಆಧಾರ ನೀಡಿದರು. `ಬಹಳ ನಡೆದಾಡಬೇಕೆನ್ನಿಸಿದಾಗ ಹೀಗೆ ಯಾರಾದ್ರೂ ಹಿಡಕೋಬೇಕು ನೋಡಿ~ ಎಂದು ನಿಸ್ಸಂಕೋಚವಾಗಿ ಹೇಳಿದರು ಪಾಂಡು.

ಆದರೆ ಕಂಪ್ಯೂಟರ್ ಮುಂದೆ ಕುಳಿತಾಗ ಅವರ ಮೆದುಳು ಚಕಚಕನೆ ಕೆಲಸ ಮಾಡತೊಡಗಿತು. ಮುಖದಲ್ಲಿ ಖುಷಿ ಲಾಸ್ಯವಾಡುತ್ತಿದ್ದರೆ ಅವರ ಕೈಗಳು ಕಂಪ್ಯೂಟರ್ ಕೀಬೋರ್ಡ್ ಮೇಲೆ ಪಟಪಟನೆ ಚಲಿಸತೊಡಗಿದವು. ಕಂಪ್ಯೂಟರ್ನಲ್ಲಿ ತಮ್ಮ ಚಿಕ್ಕ ಉದ್ಯಮ ದುನಿಯಾವನ್ನು ಪಾಂಡುರಂಗ ರಾವ್ ವಿವರಿಸುತ್ತ ಹೊರಟರು.

ಮೈಸೂರಿನ ಈ 37ರ ಯುವಕ ಪಾಂಡುರಂಗ ರಾವ್ ಮಗುವಿರುವಾಗಲೇ `ಸೆರೆಬ್ರಲ್ ಪಾಲ್ಸಿ~ ಎನ್ನುವ ಅಂಗವಿಕಲತೆಗೆ ತುತ್ತಾದವರು. ಅಂಗಾಗಗಳು ಭಾಗಶಃ ಸ್ವಾಧೀನ ಕಳೆದುಕೊಂಡಿವೆ. ಎರಡಕ್ಷರದ ಎರಡು ಶಬ್ದ ಉಚ್ಚರಿಸಲು ನಿಮಿಷಕ್ಕೂ ಹೆಚ್ಚು ಕಾಲ ಹಿಡಿಯುತ್ತದೆ. ಜೋರಾಗಿ ಮಾತನಾಡಿದರಷ್ಟೇ ಅವರಿಗೆ ಕೇಳುವುದು. ಇಷ್ಟೆಲ್ಲ ಅಡ್ಡಿಗಳನ್ನು ಹಿಮ್ಮೆಟ್ಟಿಸಿ ಮೇಲೆದ್ದಿದ್ದು ಅವರ ಆತ್ಮವಿಶ್ವಾಸ. ಪರಿಣಾಮವಾಗಿ ಈಗ ಅವರೊಬ್ಬರು ಕಂಪ್ಯೂಟರ್ ತಜ್ಞ.

ಈ ತಂತ್ರಜ್ಞನ ನಿಜವಾದ ಶಿಲ್ಪಿ ಅವರಮ್ಮ ಸುನಂದಾ ರಾವ್. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ತಂದೆ ನಾರಾಯಣ ರಾವ್ ಇವರ ಎಲ್ಲ ಪ್ರಯತ್ನಗಳಿಗೂ ಬೆಂಬಲವಾಗಿ ನಿಂತರು. ಮೊದಲಿಗೆ ತಮ್ಮ ಮಗನನ್ನು ಮುಂಬಯಿಯ `ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಮೆಡಿಸಿನ್ಸ್~ದಲ್ಲಿ ತೋರಿಸಿದರು.

ಈ ಅಂಗವಿಕಲತೆಗೆ ಮದ್ದಿಲ್ಲ. ಆದರೆ ಮನೆಯಲ್ಲೇ ತರಬೇತಿ ನೀಡಿ, ವ್ಯಾಯಾಮ ಮಾಡಿಸುತ್ತಿದ್ದಲ್ಲಿ ಒಳ್ಳೆಯ ವ್ಯಕ್ತಿತ್ವ ಬೆಳಸಿಕೊಳ್ಳಬಲ್ಲರು ಎಂಬ ವೈದ್ಯರ ಸಲಹೆ ಬಂದಾಗ ಸುನಂದಾ ತಮ್ಮ ಮಗನ ಭವಿಷ್ಯ ರೂಪಿಸಲು ದಿಟ್ಟ ಸಂಕಲ್ಪ ತೊಟ್ಟರು.

ಉಡುಪಿಗೆ ತೆರಳಿ ಶಾಲೆಗೆ ದಾಖಲು ಮಾಡಲು ಪ್ರಯತ್ನಿಸಿದಾಗ ಮೊದಲು ಯಾವ ಸಾಮಾನ್ಯ ಶಾಲೆಯವರೂ ಸೇರಿಸಿಕೊಳ್ಳಲು ತಯಾರಾಗಲಿಲ್ಲ. ಅಂತೂ `ಸೇಂಟ್ ಸಿಸಿಲೀಸ್ ಹೈಸ್ಕೂಲ್~ನಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರವೇಶ ದೊರೆಯಿತು.

ಅಕ್ಷರ ಬರೆಯಲು ಕಲಿಯಬೇಕಾದರೆ ಒಂದನೇ ತರಗತಿಯನ್ನೇ ಮೂರು ಬಾರಿ ಕಲಿಯಬೇಕಾಯಿತು. ಆದರೆ ಸುನಂದಾ ಬೇಸರ ಪಡಲಿಲ್ಲ. ಸರ್ಟಿಫಿಕೇಟ್ಗಿಂತ ಅವರಿಗೆ ಮಗ ಎಷ್ಟರಮಟ್ಟಿಗೆ ವಿಷಯ ಜ್ಞಾನ ಪಡೆಯುತ್ತಾನೆ ಎನ್ನುವುದೇ ಮುಖ್ಯವಾಗಿತ್ತು. ಅಲ್ಲಿ ನಾಲ್ಕನೇ ತರಗತಿವರೆಗಷ್ಟೇ ಅವಕಾಶವಿದ್ದುದರಿಂದ ಮುಂದೆ ಮೈಸೂರಿಗೆ ಕರೆತಂದರು. ಇಲ್ಲಿಯೂ ಶಾಲಾ ಪ್ರವೇಶ ಸುಲಭವಾಗಲಿಲ್ಲ.

ಈ ಮಗುವಿನ ಸ್ಥಿತಿ ಅರಿತು ಪ್ರವೇಶಾವಕಾಶ ನೀಡಿದ್ದು `ಭಾರತೀಯ ಸಮಾಜ ಶಾಲೆ~.ಓದುವಾಗ ಕೈಯಲ್ಲಿದ್ದ ಪುಸ್ತಕವೇ ಬಿದ್ದು ಹೋಗುತ್ತಿತ್ತು. ಕೈಯಲ್ಲಿ ಪೆನ್ ಸಹ ನಿಲ್ಲುತ್ತಿರಲಿಲ್ಲ. ಮನೆಯಲ್ಲಿ ತಾಯಿ ಓದಿ ಹೇಳುವುದು, ಪಾಂಡು ಕೇಳುವುದು... ಎಂಬ ಯೋಜನೆ ಜಾರಿಗೆ ಬಂತು. ಅಂತೂ ಇಂತೂ ಕಷ್ಟಪಟ್ಟು ಏಳನೇ ತರಗತಿಯವರೆಗೆ ಪಾಂಡು ಕನ್ನಡ ಮಾಧ್ಯಮದಲ್ಲಿ ಓದಿ ಸೈ ಎನಿಸಿಕೊಂಡ.

ಜೊತೆಜೊತೆಗೆ ಅಖಿಲಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ವಿಶೇಷ ತರಬೇತಿಯೂ ಸಿಗುತ್ತಿದ್ದುದರಿಂದ ಓದಿಗೆ ಸಹಾಯವಾಯಿತು.
ಮುಂದಿನ ಹಾದಿ ಇನ್ನಷ್ಟು ಕಷ್ಟದ್ದು. 8ನೇ ತರಗತಿಗೆ ಚಿನ್ಮಯ ಮಿಷನ್ ಶಾಲೆಯಲ್ಲಿ ಪ್ರವೇಶ ಸಿಕ್ಕಿತು.

ಅಲ್ಲಿಂದ ಆಂಗ್ಲ ಮಾಧ್ಯಮದ ಪಾಠ. ಮತ್ತೆ ಉಡುಪಿಗೆ ತೆರಳಿದ ಸುನಂದಾ 9 ಹಾಗೂ 10ನೇ ತರಗತಿಗೆ ಅಲ್ಲಿಯ ಕಲ್ಯಾಣಪುರದ ಮಿಲಾಗ್ರಿಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗೆ ಮಗನನ್ನು ಸೇರಿಸಿದರು. ಶಾಲೆಯಲ್ಲಿನ ಕಲಿಸುವಿಕೆಗೆ ಪೂರಕವಾಗಿ ಮನೆಯಲ್ಲೇ ಪಾಠ ಹೇಳಲು ಪುರುಷೋತ್ತಮ್ ಎನ್ನುವವರನ್ನು ನೇಮಿಸಿದರು. ಅವರ ಮುತುವರ್ಜಿಯಿಂದಲೇ ಪಾಂಡುರಂಗನ ತಿಳಿವಳಿಕೆಗೆ ತಕ್ಕಂತೆ ಪಾಠ ಸಿಕ್ಕಿತು ಎನ್ನುವುದು ಸುನಂದಾ ಅಭಿಪ್ರಾಯ.

ಬಹಳಷ್ಟು ಬರೆಯುವ ವಿಷಯ ಮಗನಿಗೆ ಸೂಕ್ತವಲ್ಲ ಎಂದು ಯೋಚಿಸಿದ ಸುನಂದಾ, ತಾಂತ್ರಿಕ ಶಿಕ್ಷಣವನ್ನೇ ನೀಡಲು ನಿರ್ಧರಿಸಿದರು. ವಿಶೇಷ ಮಕ್ಕಳಿಗಾಗಿಯೇ ಮೈಸೂರಿನಲ್ಲಿ ಪಾಲಿಟೆಕ್ನಿಕ್ ಕಾಲೇಜ್ ತೆರೆಯಲಿದೆಯೆಂಬ ಸುದ್ದಿ ಬಂದದ್ದರಿಂದ ಮೈಸೂರಿಗೆ ಕುಟುಂಬ ಸಮೇತ ಬಂದು ನೆಲೆಸಿದರು. ಆದರೆ ಅವರ ದುರದೃಷ್ಟವೇನೋ ಆ ವರ್ಷ ಕಾಲೇಜ್ ಆರಂಭವಾಗಲೇ ಇಲ್ಲ. ಅದೇ ಸಮಯಕ್ಕೆ ಇದ್ದ ಸರಕಾರಿ ಪಾಲಿಟೆಕ್ನಿಕ್ನಲ್ಲಿ ಡಿಪ್ಲೊಮಾಗೆ ಒಂದು ಸೀಟ್ ಸಿಕ್ಕಿತು.

ಇಲ್ಲಿಂದ ಇನ್ನೊಂದು ರೀತಿಯ ಕಷ್ಟ ಆರಂಭವಾಗಿತ್ತು. ಕೆಲ ಶಿಕ್ಷಕರು ಅಕ್ಕರೆಯಿಂದ ಪಾಂಡು ಅವರಿಗೆ ಅರ್ಥವಾಗುವಂತೆ ಕಲಿಸಿದರೆ, ಇನ್ನು ಕೆಲವರು ತಾತ್ಸಾರ ಮನೋಭಾವ ಪ್ರದರ್ಶಿಸಿದರು. ಕಲಿಕೆಯ ಕೊನೆಯ ವರ್ಷದ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡದೇ ಹೋಗಿದ್ದರಿಂದ ಒಂದೇ ವರ್ಷದ ಪರೀಕ್ಷೆಯನ್ನು ಮೂರು ಬಾರಿ ಬರೆಯಬೇಕಾಯಿತು. ಇಲ್ಲಿ ಎದುರಾದ ಅವಮಾನ, ತಾತ್ಸಾರ, ಅನ್ಯಾಯಗಳನ್ನು ಎದುರಿಸಿ ಪಾಂಡುರಂಗ ಪೂರ್ಣ ಕುಗ್ಗಿಯೇ ಹೋದರು.

ಅಂದಿನ ಸನ್ನಿವೇಶವನ್ನು ನಾನು ನೆನಪಿಸಿಕೊಳ್ಳಲೂ ಇಷ್ಟಪಡುವುದಿಲ್ಲ ಎಂದು ಈಗಲೂ ಆಕ್ರೋಶದಿಂದ ನುಡಿಯುತ್ತಾರೆ ಪಾಂಡು.ಪರೀಕ್ಷೆಯಲ್ಲಿ ಮಗ ಏನು ಬರೆದಿದ್ದಾನೆ, ಬರೆದಿದ್ದಾನೋ ಇಲ್ಲವೋ, ಏಕೆ ಉತ್ತೀರ್ಣನಾಗಿಲ್ಲ ನೋಡೋಣ ಎಂದು ತಾಯಿ ಸುನಂದಾ ಬಯಸಿದರೂ, ಅಂದು ಇವರ ಉತ್ತರ ಪತ್ರಿಕೆಗಳಿಗೆ ಮರು ಮೌಲ್ಯಮಾಪನದ ಅವಕಾಶವೇ ಇರಲಿಲ್ಲ.

ಪತ್ರಿಕೆಗಳ ಝೆರಾಕ್ಸ್ ಪ್ರತಿ ಕೊಡುವ ಪದ್ಧತಿಯೂ ಇರಲಿಲ್ಲ. ಹೀಗಾಗಿ ತಾನು ಪಾಸಾಗುತ್ತೇನೆ ಎಂಬ ವಿಶ್ವಾಸ ಪಾಂಡುವಿನಲ್ಲಿದ್ದರೂ ಅವರ ನಿರೀಕ್ಷೆ ಹುಸಿಯಾಯಿತು. ಕಾಲೇಜಿನಲ್ಲಿ ನಡೆದ ಅನ್ಯಾಯದಿಂದಾಗಿ ಮನನೊಂದ ಸುನಂದಾ ಮೂರನೇ ಬಾರಿಗೆ ಮಗನಿಗೆ ಬೇರೊಂದು ಪರೀಕ್ಷಾ ಕೇಂದ್ರವನ್ನು ಆರಿಸಿಕೊಂಡರು. ಮನೆಯಲ್ಲಿ ಸುಮ್ಮನೆ ಕುಳಿತರೆ ಮಗನ ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆಂದು ಅರಿತು ತಕ್ಷಣ ಹೊಸದಾಗಿ ಆರಂಭವಾಗಿದ್ದ ಜೆಎಸ್ಎಸ್ ವಿಶೇಷ ಮಕ್ಕಳ ಪಾಲಿಟೆಕ್ನಿಕ್ನಲ್ಲಿ ಕೆಲಸಕ್ಕೆ ಸೇರಿಸಿದರು.

ಅಲ್ಲಿ ಸಿಕ್ಕ `ಲ್ಯಾಬ್ ಇನ್ಸ್ಟ್ರಕ್ಟರ್~ ಕೆಲಸ ಚಿಕ್ಕದೇ ಆದರೂ ಪಾಂಡುರಂಗ ಅವರ ಜೀವನಕ್ಕೆ ಹೊಸ ತಿರುವನ್ನೇ ನೀಡಿತು. ಮೈಸೂರಿನಲ್ಲಿ ಇದ್ದ `ವಿದ್ಯಾರಣ್ಯ ಅಕಾಡೆಮಿ ಆಫ್ ಕಂಪ್ಯೂಟರ್~ನ ಕೃಷ್ಣಮೂರ್ತಿ ಅವರು ನೀಡಿದ ಕಂಪ್ಯೂಟರ್ ತರಬೇತಿ ಪಾಂಡುರಂಗ ಅವರ ಸಹಾಯಕ್ಕೆ ಒದಗಿತು. ಅವರ ಬದುಕಿನ ಜೀವನಾಡಿಯೂ ಆಯಿತು. ಮುಂದೆ ರಾಜ್ಯ ಮುಕ್ತ ವಿವಿಯಿಂದ ಬಿಎಸ್ಸಿ ಪದವಿಯನ್ನೂ ಅವರು ಮುಗಿಸಿದರು.

ಮನೆಯಲ್ಲೇ ಕಂಪ್ಯೂಟರ್ ತಂದಿಟ್ಟುಕೊಂಡು ಅದರ ಮೂಲಕ ಪಾಂಡುರಂಗ ಹೆಚ್ಚಿನ ಮಾಹಿತಿ ಪಡೆಯತೊಡಗಿದರು. ವೆಬ್ಸೈಟ್ ಹಾಗೂ ಸಾಫ್ಟ್ವೇರ್ಗಳನ್ನು ರಚಿಸುವ ಕಾರ್ಯಕ್ಕೆ ಕೈಹಾಕಿದರು. ಜೆಎಸ್ಎಸ್ ಪಾಲಿಟೆಕ್ನಿಕ್ನ ಗಣಿತ ಅಧ್ಯಾಪಕ ಇಳಂಗೋವನ್ ಈ ಕಾರ್ಯಕ್ಕೆ ಪಾಂಡುರಂಗ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿದವರು. ಇಳಂಗೋವನ್ ನನ್ನ ಜೀವನದಲ್ಲಿ ಸದಾ ಸ್ಮರಣೀಯರು ಎಂದು ಪಾಂಡು ನೆನಪಿಸಿಕೊಳ್ಳುತ್ತಾರೆ.

ಇನ್ನೊಬ್ಬರಿಗೂ ಸ್ಫೂರ್ತಿಇವೆಲ್ಲದರ ಪರಿಣಾಮವೇ ಅವರ `ಐಕ್ಯಾನ್ ಟೆಕ್ನಾಲಜೀಸ್~ ಸಂಸ್ಥೆ. ಅಂಬೆಗಾಲಿಡುತ್ತಿರುವ ಈ ಸಂಸ್ಥೆ ಸದ್ಯ ಮೈಸೂರಿನ ಜೆಎಸ್ಎಸ್ ಪಾಲಿಟೆಕ್ನಿಕ್ ಆವರಣದ ಸ್ಟೆಪ್ ಸಂಸ್ಥೆಯಲ್ಲಿ ಇದೆ. ಈಗ ಮನೆಯಲ್ಲೇ ಕುಳಿತು ಈ ಕಂಪನಿಯ ವ್ಯವಹಾರ ನಡೆಸುವಷ್ಟು ಕುಶಲರಾಗಿದ್ದಾರೆ ಪಾಂಡು. ಇದಕ್ಕೂ ಮೊದಲು `ಎಕ್ಸಲ್ ಸಾಫ್ಟ್ವೇರ್~ನಲ್ಲಿ ಸುಧನ್ವ ಅವರಿಂದ ಸಂಸ್ಥೆ ನಡೆಸಬಹುದಾದ ವ್ಯವಹಾರ ಜ್ಞಾನವನ್ನು ಕಲಿತಿದ್ದಾರೆ.

ಮೊದಲಿಗೆ ಸ್ಟೆಪ್ ಸಂಸ್ಥೆಯ ಕಚೇರಿ ಕಾರ್ಯಗಳಿಗೆ ಸೂಕ್ತವಾದ ವೆಬ್ಸೈಟ್ ಒಂದನ್ನು ರೂಪಿಸಿಕೊಟ್ಟ ನಂತರ ಸ್ನೇಹಿತ ವಲಯದ ಮೂಲಕ ಅವರಿಗೆ ಅವಕಾಶಗಳು ಬಂದವು. ಇವರ ಕಂಪನಿಯ ಇನ್ನೊಬ್ಬ ಕೆಲಸಗಾರರೆಂದರೆ ಗಾಲಿಕುರ್ಚಿಯಿಂದ ಮೇಲೇಳಲಾಗದ ಯತೀಶ್ಕುಮಾರ! ತಮಗಿಂತ ಕಷ್ಟದ ಸ್ಥಿತಿಯಲ್ಲಿರುವ ಅವರಿಗೆ ಮನೆಯಲ್ಲೇ ಕುಳಿತು ಮಾಡುವಂಥ ಉಪಯುಕ್ತ ಕೆಲಸ ಒದಗಿಸಿದ್ದಾರೆ ಪಾಂಡುರಂಗ ರಾವ್.

ಆತ ಇವರ ಶಿಷ್ಯನೂ ಹೌದು. ಯತೀಶ್ಕುಮಾರ್ ಒಳ್ಳೆಯ ಆ್ಯನಿಮೇಷನ್ ತಂತ್ರ ಅರಿತಿದ್ದಾರೆ. ಅದಕ್ಕೆ ಆ್ಯನಿಮೇಶನ್ ಕೆಲಸವನ್ನೆಲ್ಲ ಅವರಿಗೇ ವಹಿಸುತ್ತೇನೆ ಎನ್ನುತ್ತಾರೆ ಪಾಂಡು. ಪಾಂಡು ಅವರ ಬಾಳ ಸಂಗಾತಿಯಾಗಿ ಬಂದಿರುವ ಶಿವಮೊಗ್ಗದ ಹುಡುಗಿ ಜ್ಯೋತಿ ಅವರೂ ಈಗ ಐಕ್ಯಾನ್ ಟೆಕ್ನಾಲಜಿಯನ್ನು ಕಟ್ಟಲು ಕೈಜೋಡಿಸಿದ್ದಾರೆ. ದೀಪದಿಂದ ದೀಪ ಬೆಳಗುವುದೆಂದರೆ ಇದೇ ಏನೋ?ಏನೇನ್ ಮಾಡಿದ್ದಾರೆ?

ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲ್ಯಾಬ್ ಇನ್ಸ್ಟ್ರಕ್ಟರ್ ಆಗಿ ವಿದ್ಯಾರ್ಥಿಗಳು ತಯಾರಿಸುವ ಪ್ರಾಜೆಕ್ಟ್ಗಳಿಗೆ ಸಲಹೆ ನೀಡಿದ್ದಾರೆ. ಎಂಜಿನಿಯರ್ ವಿದ್ಯಾರ್ಥಿಗಳಿಗೆ ವಿವಿಧ ಪ್ರಾಜೆಕ್ಟ್ಗಳನ್ನು ತಯಾರಿಸಿಕೊಟ್ಟಿದ್ದಾರೆ.

ರಾಜ್ಯಮಟ್ಟದ `ಡು ಇಟ್ ಯುವರ್ ಸೆಲ್ಫ್~ ಸ್ಪರ್ಧೆಯಲ್ಲಿ ಇವರ ಸಲಹೆ ಮೇರೆಗೆ ತಯಾರಿಸಿದ `ಮೈ ಬ್ಲಾಗ್ಸ್~ ಮಾದರಿ 2010ರಲ್ಲಿ ಪ್ರಥಮ ಬಹುಮಾನ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ `ಎಂಪ್ಲಾಯೀಸ್ ಟೈಮ್ ಆ್ಯಂಡ್ ವರ್ಕ್ ಮ್ಯಾನೇಜ್ಮೆಂಟ್~ ಪ್ರಾಜೆಕ್ಟ್ ನಾಲ್ಕನೇ ಬಹುಮಾನ ಪಡೆದಿದೆ. ಮೈಸೂರಿನ `ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ~ ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ತೆರಳಿ, ಮಲ್ಟಿಮೀಡಿಯಾ ತಂತ್ರಜ್ಞಾನ ಮೂಲಕ ಕಿವುಡ ಮಕ್ಕಳಿಗೆ ಕಲಿಸುವ ವಿಧಾನವನ್ನು ವಿವರಿಸಿದ್ದಾರೆ.

ಗ್ರೀನ್ ಕಾರ್ಬನ್ ಸಂಸ್ಥೆಗೆ ಹಾಗೂ ಡಾ.ಅನಿಲ್ ಕಾಮತ್ ಅವರಿಗೆ ವೆಬ್ಸೈಟ್ ತಯಾರಿಸಿಕೊಟ್ಟಿದ್ದಾರೆ. ಸದ್ಯ ಲಲಿತ್ ಗ್ರುಪ್ನವರ ಅಪಾರ್ಟ್ಮೆಂಟ್, `ಗ್ಯಾಸ್ ಸೇಫ್ ಹೋಮ್~ ಸಂಸ್ಥೆಗಾಗಿ ವೆಬ್ಸೈಟ್ ರೂಪಿಸುವಲ್ಲಿ ನಿರತರಾಗಿದ್ದಾರೆ. ಮಕ್ಕಳಿಗಾಗಿ www.programmingbasics.inವೆಬ್ಸೈಟ್ ರೂಪಿಸಿದ್ದಾರೆ.

ಯತೀಶ್ಕುಮಾರ್ ಸಹಾಯದಿಂದ `ಸ್ಪೈನೋ ಕ್ರಿಕೆಟ್~ ಎಂಬ ಆಟವನ್ನು ಅದರಲ್ಲಿ ಅಳವಡಿಸಿದ್ದಾರೆ.ಐಕ್ಯಾನ್ ಟೆಕ್ನಾಲಜಿ~ ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸುತ್ತೇನೆ. ಮುಂದೆ ಅದನ್ನು ನಡೆಸಲು ನನ್ನಂಥವರಿಗೇ ಕೊಡುತ್ತೇನೆ. ಈ ಸಂಸ್ಥೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಲ್ಲಿಯೂ ಅಂಗವಿಕಲರಿಗೇ ಮೊದಲ ಆದ್ಯತೆ. ಆದರೆ ಅವರು ಕ್ರಿಯಾಶೀಲವಾಗಿ ಯೋಚಿಸಬೇಕು~ ಎಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ ಪಾಂಡುರಂಗ ರಾವ್.

ಸ್ವಾವಲಂಬನೆಗಿಂತ ಮಿಗಿಲಾವುದು?

`ಹೆರಿಗೆಯ ಸಮಯದಲ್ಲಿ ಆದ ಸಮಸ್ಯೆಯಿಂದಲೋ ಅಥವಾ ಜಾಂಡಿಸ್ನಿಂದಾಗಿಯೋ ಏನೋ ನನ್ನ ಒಬ್ಬನೇ ಮಗ ದೇಹದ ಸ್ವಾಧೀನತೆಯಿಲ್ಲದೇ ಬಳಲುತ್ತಿದ್ದ. ಮಗುವನ್ನು ಕೂಡಿಸಬೇಕೆಂದರೆ, ಸುತ್ತಲೂ ದಿಂಬುಗಳನ್ನು ಇಡಬೇಕಾಗಿತ್ತು. ಮಾತುಗಳೂ ಹೊರಬರುತ್ತಿರಲಿಲ್ಲ. ಆದರೆ ಮಾತಿಗೆ ತಕ್ಕ ಪ್ರತಿಕ್ರಿಯೆ ತೋರುತ್ತಿದ್ದುದರಿಂದ ಮೆದುಳು ಚುರುಕಾಗಿದೆ ಎಂದು ತಿಳಿದೆ. ಪ್ರಾಥಮಿಕ ಶಾಲೆಗೆ ಹೋಗುವಾಗಲೂ ಕೈಯಲ್ಲಿ ಪೆನ್, ಪೆನ್ಸಿಲ್ಗಳೂ ನಿಲ್ಲುತ್ತಿರಲಿಲ್ಲ. ಅಷ್ಟು ನಿಶ್ಯಕ್ತವಾಗಿತ್ತು ಅವನ ದೇಹ. ಮಗ ಸ್ವಾವಲಂಬಿಯಾಗಬೇಕೆಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೀಗ ಅವನು ಸ್ವಂತವಾಗಿ ಕಾರ್ಯನಿರತನಾಗಿರುವುದು ಕಂಡಾಗ ಆಗುವ ಸಂತಸದ ಮುಂದೆ ಯಾವುದು ದೊಡ್ಡದಲ್ಲ ಎನಿಸಿದೆ~ ಎನ್ನುವಾಗ ಪಾಂಡುರಂಗ ಅವರ ಅಮ್ಮ ಸುನಂದಾರ ಕಣ್ಣಲ್ಲಿ ಆನಂದಾಶ್ರು.

`ಒಂದು ವೇಳೆ ನನಗೆ ಸರಿಯಾಗಿ ಓಡಾಡಲು ಸಾಧ್ಯವಿದ್ದಲ್ಲಿ ಒಬ್ಬ ಪತ್ರಕರ್ತನಾಗುತ್ತಿದ್ದೆ~ ಎಂದೆನ್ನುವ ಅವರು `ವಿಸ್ಟಾಹಂಟ್.ಕಾಮ್~ ಹಾಗೂ ಸೆಕ್ಯುರಿಟಿ ಹಂಟ್.ಕಾಮ್ಗಳಿಗೆ ನಿಯಮಿತ ಲೇಖನಗಳನ್ನು ಬರೆಯುತ್ತಿದ್ದಾರೆ.

ಕಂಪ್ಯೂಟರ್ ಮೂಲಕ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಡಬಹುದಾದ `ಕ್ವ್ಿ ಮಾಸ್ಟರ್~ ಎನ್ನುವ ಆಂಗ್ಲ ಭಾಷೆಯ ಸಾಫ್ಟ್ ವೇರ್ ಸಹ ತಯಾರಿಸಿದ್ದಾರೆ. ಕನ್ನಡ ಶಬ್ದಕೋಶದ ಸಾಫ್ಟ್ವೇರ್ ತಯಾರಿಸಬೇಕೆಂದಿದ್ದಾರೆ. `ಐಕ್ಯಾನ್ ಟೆಕ್ನಾಲಜೀಸ್~ ಸಂಸ್ಥೆ ಮೂಲಕ ವೆಬ್ ಡೆವಲಪ್ಮೆಂಟ್, ವೆಬ್ ಹೋಸ್ಟಿಂಗ್, ತಾಂತ್ರಿಕ ಬರವಣಿಗೆ, ಡಾಟಾ ಎಂಟ್ರಿ ಸೇರಿದಂತೆ ಕಂಪ್ಯೂಟರ್ನ ಎಲ್ಲ ರೀತಿಯ ಕೆಲಸಗಳನ್ನೂ ತಾವು ಮಾಡುವುದಾಗಿ ಪಾಂಡುರಂಗರಾವ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಮ್ಮ ಆರ್ಥಿಕ ಶಕ್ತಿಗೆ ತಕ್ಕಂತೆ ಈ ಸಂಸ್ಥೆ ಹುಟ್ಟು ಹಾಕಿರುವ ಪಾಂಡುರಂಗ ಅವರ ಸಾಧನೆ ಇಲ್ಲಿಗೆ ನಿಲ್ಲಲ್ಲ. ಮುಂದೆ ಸರಕಾರದ ನಿವೇಶನ ಒದಗಿಸಿದರೆ, ಅಂಗವಿಕಲರಿಗಾಗಿಯೇ ವಿಶೇಷ ಉದ್ಯಮ ಸ್ಥಾಪಿಸುವ ಆಲೋಚನೆ ಮಾಡಿದ್ದಾರೆ. ಓಡಾಡಲು ಸಾಧ್ಯವಾಗದವರೂ ಒಂದೇ ಸ್ಥಳದಲ್ಲೇ ಕುಳಿತು ಸ್ವಂತ ದುಡಿಮೆ ಮಾಡಲು ಸಹಾಯವಾಗಬೇಕು ಎನ್ನುವುದು ಅವರ ಕಾಳಜಿ.

(ಪಾಂಡುರಂಗ ರಾವ್ ಅವರ ವಿಳಾಸ- ಐಕ್ಯಾನ್ ಟೆಕ್ನಾಲಜಿ, ಸೀಡ್ ಬಿಲ್ಡಿಂಗ್, ಸ್ಟೆಪ್ ಗೆಸ್ಟ್ ಹೌಸ್, ಎಸ್ಜೆಸಿಇ ಕ್ಯಾಂಪಸ್, ಮಾನಸಗಂಗೋತ್ರಿ, ಮೈಸೂರು-570006, ದೂರವಾಣಿ-0821-2403929, ವೆಬ್ಸೈಟ್- www.icantech.in)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.