ಸೋಮವಾರ, ಮೇ 10, 2021
21 °C

ಐಟಂ ನಂಬರ್‌ನಲ್ಲಿ ಮಾಹೀ ಗಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್ ಸಿನಿಮಾಗಳಲ್ಲಿ ಐಟಂ ನಂಬರ್‌ಗೆ ಈಗ ಎಲ್ಲಿಲ್ಲದ ಪ್ರಾಮುಖ್ಯ. ಬಹುತೇಕ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ `ಮೈ ಸಿರಿ~ ಪ್ರದರ್ಶಿಸುವ ಒಂದು ನೃತ್ಯ ಇರಲೇಬೇಕು ಎಂದು ಬಯಸುತ್ತಾರೆ. ಪೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಹಾಗೂ ಹಣ ದೋಚಲು ಇದೊಂದು ಪ್ರಮುಖ ಸರಕು ಕೂಡ ಹೌದು. 

`1973ರಲ್ಲಿ ತೆರೆಕಂಡಿದ್ದ ಜಂಜೀರ್ ಚಿತ್ರ ಈಗ ರಿಮೇಕ್ ಆಗುತ್ತಿದೆ. ಅಮಿತ್ ಮೆಹ್ರಾ ಚಿತ್ರದ ನಿರ್ಮಾಪಕರು. ಇವರು ಕೂಡ ತಮ್ಮ ರೀಮೇಕ್ ಚಿತ್ರದಲ್ಲಿ ಎರಡು ಐಟಂ ನಂಬರ್ ಇಡಲು ಯೋಚಿಸಿದ್ದಾರೆ. ಈ ಚಿತ್ರದಲ್ಲಿನ ಒಂದು ಐಟಂ ಸಾಂಗ್‌ಗೆ ಮಾಹೀ ಗಿಲ್ ಹೆಜ್ಜೆ ಹಾಕಲಿದ್ದಾರೆ. ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಲು ಸಜ್ಜಾಗಿದ್ದಾರೆ. ಇನ್ನೊಂದು ಹಾಡಿಗೆ ಯಾರು ಕುಣಿಯಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಐಟಂ ಸಾಂಗ್‌ಗಳು ಚಿತ್ರಕಥೆಗೆ ಪೂರಕವಾಗಿದ್ದವು. ಹಾಗಾಗಿ ನಾನು ಈ ಚಿತ್ರದಲ್ಲಿ ಐಟಂ ನಂಬರ್ ಇಡಲು ಯೋಚಿಸಿದ್ದು~ ಎನ್ನುತ್ತಾರೆ ಮೆಹ್ರಾ.

ರಾಮ್‌ಚರಣ್ ತೇಜಾ ಮತ್ತು ಪ್ರಿಯಾಂಕ ಚೋಪ್ರಾ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೆಹ್ರಾ ಅವರು ರಾಮ್‌ಚರಣ್ ತೇಜಾ ನಟನಾ ಕೌಶಲ್ಯದ ಬಗ್ಗೆ ತುಂಬಾ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ತೇಜಾ ಈ ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ಅವರದ್ದು.

`ನಾನು ರಾಮ್‌ಚರಣ್ ತೇಜಾ ಅಭಿನಯದ ಚಿತ್ರಗಳನ್ನು ನೋಡಿದ್ದೇನೆ. ಹಾಗಾಗಿ ಈ ಚಿತ್ರಕ್ಕೆ ಆತನೇ ಸೂಕ್ತ ಎಂದು ನಿರ್ಧರಿಸಿದೆ. ಪ್ರಿಯಾಂಕಾ ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದಾರೆ. ಮೇ ಅಂತ್ಯದ ವೇಳೆಗೆ ಆಕೆ ಚಿತ್ರತಂಡ ಕೂಡಿಕೊಳ್ಳಲಿದ್ದಾರೆ. ಅಲ್ಲಿವರೆಗೂ ನಾಯಕಿಯನ್ನು ಹೊರತುಪಡಿಸಿದ ಭಾಗಗಳ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ ಮೆಹ್ರಾ. ಈ ಚಿತ್ರದಲ್ಲಿ ಸಂಗೀತ ಕೂಡ ಪ್ರಮುಖ ಪಾತ್ರವಹಿಸಲಿದೆ. ಆದರೆ ಇನ್ನೂ ಸಂಗೀತ ನಿರ್ದೇಶಕನ ಆಯ್ಕೆ ನಡೆದಿಲ್ಲ. ಡಿಸೆಂಬರ್ ವೇಳೆಗೆ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ. 2013ರ ಮೇ ತಿಂಗಳನಲ್ಲಿ ಚಿತ್ರ ತೆರೆಕಾಣಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.