ಸೋಮವಾರ, ಮೇ 17, 2021
22 °C

ಐಟಿಐ ಮುಗಿಸಿದರೆ ಡಿಪ್ಲೊಮಾ 2ನೇ ವರ್ಷಕ್ಕೆ ಪ್ರವೇಶ

ಪ್ರಜಾವಾಣಿ ವಾರ್ತೆ / ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿಗೆ ನೇರವಾಗಿ ಎರಡನೇ ವರ್ಷದ ಡಿಪ್ಲೊಮಾಗೆ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಆದೇಶದಂತೆ ರಾಜ್ಯದಲ್ಲಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಪ್ರಸಕ್ತ ಸಾಲಿನಿಂದಲೇ ಲ್ಯಾಟರಲ್ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಈಚೆಗೆ ಅಧಿಕೃತ ಆದೇಶ ಹೊರಡಿಸಿದೆ.ಎರಡು ವರ್ಷದ ಐಟಿಐ ಕೋರ್ಸ್‌ನ್ನು ಮೊದಲ ವರ್ಷದ ಡಿಪ್ಲೊಮಾಗೆ ಸಮಾನ ಎಂದು ಪರಿಗಣಿಸಲಾಗಿದೆ. ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರಿಕಲ್, ಸರ್ವೇಯರ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ಒಟ್ಟು 27 ಟ್ರೇಡ್‌ಗಳಲ್ಲಿ ಐಟಿಐ ಪಾಸಾದವರು ಡಿಪ್ಲೊಮಾ ಎರಡನೇ ವರ್ಷದ ಪ್ರವೇಶಕ್ಕೆ ಅರ್ಹರು ಎಂದು ತಾಂತ್ರಿಕ ಶಿಕ್ಷಣ ನಿರ್ದೇಶಕ ಯು.ವಿ.ತಳವಾರ `ಪ್ರಜಾವಾಣಿ'ಗೆ ತಿಳಿಸಿದರು.ರಾಜ್ಯದಲ್ಲಿ 81 ಸರ್ಕಾರಿ ಮತ್ತು 44 ಅನುದಾನಿತ ಪಾಲಿಟೆಕ್ನಿಕ್‌ಗಳಿದ್ದು, ಸುಮಾರು 20 ಸಾವಿರ ಸೀಟುಗಳಿವೆ. ಲ್ಯಾಟರಲ್ ಪ್ರವೇಶ ಮೂಲಕ ಶೇ 20ರಷ್ಟು ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಇದೆ. ಐಟಿಐನಲ್ಲಿ ಪಡೆದಿರುವ ಅಂಕಗಳು ಮತ್ತು ರೋಸ್ಟರ್ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.ಸಾಮಾನ್ಯವಾಗಿ ಐಟಿಐ ನಂತರ ಶೇ 80ರಷ್ಟು ಮಂದಿ ಯಾವುದಾದರೂ ಉದ್ಯೋಗದಲ್ಲಿ ತೊಡಗುತ್ತಾರೆ. ಕೆಲವರು ಶಿಕ್ಷಣ ಮುಂದುವರಿಸಲು ಬಯಸುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಡಿಪ್ಲೊಮಾ ನಂತರ ಲ್ಯಾಟರಲ್ ಪ್ರವೇಶ ಮೂಲಕವೇ ಎಂಜಿನಿಯರಿಂಗ್ ಪದವಿ ಪಡೆಯಬಹುದು ಎಂದು ವಿವರಿಸಿದರು.ಲ್ಯಾಟರಲ್ ಪ್ರವೇಶ ಮೂಲಕ ಡಿಪ್ಲೊಮಾಗೆ ದಾಖಲಾಗುವ ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್‌ನಲ್ಲಿ ಅನ್ವಯಿಕ ಗಣಿತ ಮತ್ತು ಇಂಗ್ಲಿಷ್ ಸಂವಹನ ವಿಷಯ ಹಾಗೂ ನಾಲ್ಕನೇ ಸೆಮಿಸ್ಟರ್‌ನಲ್ಲಿ ಅನ್ವಯಿಕ ಗಣಿತ ವಿಷಯವನ್ನು ಹೆಚ್ಚುವರಿಯಾಗಿ ವ್ಯಾಸಂಗ ಮಾಡಬೇಕಾಗುತ್ತದೆ. ಈ ವಿಷಯಗಳು ಕಡ್ಡಾಯವಾಗಿದ್ದು, ಪಾಸಾಗಲೇಬೇಕಾಗುತ್ತದೆ.ಅರ್ಜಿ ಸಲ್ಲಿಕೆ: ಲ್ಯಾಟರಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ತಿಂಗಳ 24ರವರೆಗೆ ಅವಕಾಶ ಇದೆ. ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಿಂದ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಿಸಿದ ನೋಡಲ್ ಸೆಂಟರ್‌ಗೆ ಸಲ್ಲಿಸಬೇಕು.ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಂಬಂಧಪಟ್ಟ ನೋಡಲ್ ಸೆಂಟರ್‌ಗಳಲ್ಲಿ ಪ್ರಕಟಿಸಲಾಗುತ್ತದೆ. ಆಯ್ಕೆ ಮಾಡಿಕೊಂಡ ಪಾಲಿಟೆಕ್ನಿಕ್‌ಗಳಲ್ಲಿ ನಿಗದಿತ ಅವಧಿಯ ಒಳಗೆ ಪ್ರವೇಶ ಪಡೆಯದೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳ ಸೀಟು ರದ್ದು ಮಾಡಲಾಗುತ್ತದೆ.ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1 ಹಾಗೂ ಪೋಷಕರ ವಾರ್ಷಿಕ ಆದಾಯ 44,500 ರೂಪಾಯಿ ಮೀರದೆ ಇರುವ ಪ್ರಮಾಣ ಪತ್ರ ಸಲ್ಲಿಸಿದರೆ ಅಂತಹ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರವೇಶ ಸಮಯದಲ್ಲಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಿಯಮಾವಳಿ ಪ್ರಕಾರ ಪರಿಶೀಲಿಸಿ, ನೋಡಲ್ ಸೆಂಟರ್‌ನ ಪ್ರಾಂಶುಪಾಲರ ಮಟ್ಟದಲ್ಲೇ ಬೋಧನಾ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

ಪ್ರವೇಶ ವೇಳಾಪಟ್ಟಿ

ತಾತ್ಕಾಲಿಕ  ಪಟ್ಟಿ ಪ್ರಕಟಣೆ: ಜೂನ್ 28

ಮೆರಿಟ್ ಪಟ್ಟಿಯ ಪರಿಷ್ಕರಣೆ /ತಿದ್ದುಪಡಿಗೆ ಮನವಿ ಸಲ್ಲಿಸಲು ಅಂತಿಮ ದಿನಾಂಕ: ಜೂನ್ 29

ಅಂತಿಮ ಅರ್ಹತಾ ಪಟ್ಟಿ ಪ್ರಕಟಣೆ: ಜುಲೈ 1

ಪ್ರವೇಶ ಅವಧಿ: ಜುಲೈ 3 - 6

ನೋಡಲ್ ಸೆಂಟರ್‌ಗಳು

ಎಸ್.ಜೆ.(ಸರ್ಕಾರಿ)ಪಾಲಿಟೆಕ್ನಿಕ್ ಬೆಂಗಳೂರು

ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರು

ಸರ್ಕಾರಿ ಪಾಲಿಟೆಕ್ನಿಕ್ ಬಳ್ಳಾರಿ

ಎಲ್.ವಿ.(ಸರ್ಕಾರಿ) ಪಾಲಿಟೆಕ್ನಿಕ್ ಹಾಸನ

ಡಿ.ಆರ್.ಆರ್.(ಸರ್ಕಾರಿ) ಪಾಲಿಟೆಕ್ನಿಕ್ ದಾವಣಗೆರೆ

ಸರ್ಕಾರಿ ಪಾಲಿಟೆಕ್ನಿಕ್ ಚಿಂತಾಮಣಿ

ಸಿಪಿಸಿ (ಸರ್ಕಾರಿ) ಪಾಲಿಟೆಕ್ನಿಕ್ ಮೈಸೂರು

ಸರ್ಕಾರಿ ಪಾಲಿಟೆಕ್ನಿಕ್ ಗುಲ್ಬರ್ಗ

ಡಿ.ಎ.ಸಿ.ಜಿ.(ಸರ್ಕಾರಿ) ಪಾಲಿಟೆಕ್ನಿಕ್ ಚಿಕ್ಕಮಗಳೂರು

ಸರ್ಕಾರಿ ಪಾಲಿಟೆಕ್ನಿಕ್ ಚನ್ನಪಟ್ಟಣ

ಸರ್ಕಾರಿ ಪಾಲಿಟೆಕ್ನಿಕ್ ಕೆಜಿಎಫ್

ಸರ್ಕಾರಿ ಪಾಲಿಟೆಕ್ನಿಕ್ ತುಮಕೂರು

ಸರ್ಕಾರಿ ಪಾಲಿಟೆಕ್ನಿಕ್ ಬೆಳಗಾವಿ

ಸರ್ಕಾರಿ ಪಾಲಿಟೆಕ್ನಿಕ್ ಕಾರವಾರ

ಸರ್ಕಾರಿ ಪಾಲಿಟೆಕ್ನಿಕ್ ಬೀದರ್

ಸರ್ಕಾರಿ ಪಾಲಿಟೆಕ್ನಿಕ್ ರಾಯಚೂರು

ಸರ್ಕಾರಿ ಪಾಲಿಟೆಕ್ನಿಕ್ ವಿಜಾಪುರ

ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಹುಬ್ಬಳ್ಳಿ

ಸರ್ಕಾರಿ ಪ್ರೆಸಿಡೆನ್ಸಿಯಲ್ ಮಹಿಳಾ ಪಾಲಿಟೆಕ್ನಿಕ್ ಶಿವಮೊಗ್ಗ

ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳ

ಬಿವಿವಿಎಸ್ ಪಾಲಿಟೆಕ್ನಿಕ್ ಬಾಗಲಕೋಟೆ

ಪಾಲಿಟೆಕ್ನಿಕ್ ಸ್ವರೂಪ ಬೋಧನಾ ಶುಲ್ಕ ಅಭಿವೃದ್ಧಿ ಶುಲ್ಕ ಇತರೆ ಒಟ್ಟು

ಸರ್ಕಾರಿ ಪಾಲಿಟೆಕ್ನಿಕ್ 2,300 500 800 3,600

ಅನುದಾನಿತ ಪಾಲಿಟೆಕ್ನಿಕ್ 4,400 500 800 5,700

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.