ಭಾನುವಾರ, ಜೂನ್ 13, 2021
29 °C

ಐಟಿಯಲ್ಲಿ ಭಾರತ ಅಗ್ರಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಯುವ ಪೀಳಿಗೆ ತಾಂತ್ರಿಕ ಶಿಕ್ಷಣದತ್ತ ಹೆಚ್ಚಿನ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತವು ಐಟಿ ಕ್ಷೇತ್ರದಲ್ಲಿ ಮುಂದುವರೆದ ದೇಶಗಳ ಪೈಕಿ ಒಂದಾಗುವಂತಾಗಿದೆ ಎಂದು ಎಂ.ಜಿ. ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಎಂ.ವೆಂಕಟಪತಿ ಅಭಿಪ್ರಾಯಪಟ್ಟರು.ಕ್ಷೇತ್ರದ ಬಿದರಹಳ್ಳಿಯ ಈಸ್ಟ್ ಪಾಯಿಂಟ್ ಮಹಿಳಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಇನ್ಫೋಸಿಸ್ ಕ್ಯಾಂಪಸ್ ಕನೆಕ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.`ಹಲವು ವರ್ಷಗಳ ಹಿಂದೆ ಐಟಿ ಕ್ಷೇತ್ರದಲ್ಲಿ ಭಾರತವು ಸಾಕಷ್ಟು ಹಿಂದೆ ಇತ್ತು. ಯುವ ಪೀಳಿಗೆಯ ಸತತ ಪರಿಶ್ರಮ ಹಾಗೂ ಆಸಕ್ತಿಯಿಂದಾಗಿ ಐಟಿ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ~ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಇನ್ಫೋಸಿಸ್‌ನ ರಿತೇಶ ಕುಂಬ್ಳೆ, ಐಟಿ ಉದ್ಯಮ ಮತ್ತು ಸಾಧನೆ ಕುರಿತು ಮಾತನಾಡಿದರು.ಎಂ.ಜಿ.ಚಾರಿಟೇಬಲ್ ಟ್ರಸ್ಟ್‌ನ ನಿದೇರ್ಶಕರಾದ ಬಿ.ಐ.ರಮಾದೇವಿ, ಎಸ್.ವಿ.ಪ್ರಮೋದ, ಎಸ್.ವಿ.ರಾಜೀವ, ಪ್ರಾಂಶುಪಾಲರಾದ ಡಾ.ಗಿರಿಧರರೆಡ್ಡಿ, ಡಾ.ಬಿ.ಎಂ. ಸತೀಶ  ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.