ನವದೆಹಲಿ(ಪಿಟಿಐ): ದೇಶದ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಅಪಮೌಲ್ಯಗೊಂಡಿರುವುದು(ಡಾಲರ್ ವಿರುದ್ಧ ರೂ58.16 ಮೌಲ್ಯ) ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರದ ಕಂಪೆನಿಗಳಿಗೆ ಸಂತಸ ತರುವ ಸುದ್ದಿ. ಆದರೆ, ಮೊಬೈಲ್ ಫೋನ್ ಸೇರಿದಂತೆ ವಿವಿಧ ಸರಕುಗಳನ್ನು ಆಮದು ಮಾಡಿಕೊಳ್ಳುವ ಕಂಪೆನಿಗಳಿಗೆ ಕಹಿ ಸುದ್ದಿ!

ಐಟಿ ಮತ್ತು ಐಟಿ ಆಧಾರಿತ ಸೇವೆಗಳ ಕಂಪೆನಿಗಳು ಸಾಫ್ಟ್ವೇರ್ ರಫ್ತು ಮತ್ತು ಹೊರಗುತ್ತಿಗೆ ಸೇವೆಗಳಿಗೆ ವಿದೇಶಿ ಕರೆನ್ಸಿ ಮೂಲಕವೇ ಆದಾಯ ಗಳಿಸುವುದರಿಂದ ವಿನಿಮಯ ಮಾರುಕಟ್ಟೆಯಲ್ಲಿ ರೂಮೌಲ್ಯ ಕುಸಿದಷ್ಟೂ ಲಾಭವೇ ಆಗಲಿದೆ. ಹಾಗಾಗಿ ಪ್ರಸಕ್ತ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಈ ಕಂಪೆನಿಗಳ ಆದಾಯ ಮತ್ತು ಲಾಭದ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಲಿದೆ ಎಂದು `ಗಾರ್ಟನರ್' ಸಂಶೋಧನಾ ಸಂಸ್ಥೆ ನಿರ್ದೇಶಕ ಅರುಪ್ ರಾಯ್ ಹೇಳಿದ್ದಾರೆ.

ರೂಪಾಯಿ ಮೌಲ್ಯ ಶೇ 1ರಷ್ಟು ತಗ್ಗಿದರೂ ಐಟಿ ಕಂಪೆನಿಗಳ ಲಾಭ ಗಳಿಕೆ ಪ್ರಮಾಣದಲ್ಲಿ 30ರಿಂದ 35ರಷ್ಟು ಮೂಲ ಅಂಶಗಳಷ್ಟು ಹೆಚ್ಚುತ್ತದೆ ಎಂದು `ಏಂಜೆಲ್ ಬ್ರೋಕಿಂಗ್' ಸಂಸ್ಥೆಯ ಅಂಕಿತಾ ಸೊಮಾನಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ರೂಪಾಯಿ ಮೌಲ್ಯ ಕೆಳಮುಖವಾಗಿರುವುದು ಮಧ್ಯಮ ಶ್ರೇಣಿ ಮತ್ತು ಕಡಿಮೆ ದರ್ಜೆ ಮೊಬೈಲ್ ಫೋನ್ ಹ್ಯಾಂಡ್ಸೆಟ್ ತಯಾರಿಸುವ ಕಂಪೆನಿಗಳಿಗೆ ಹೊರೆ ಹೆಚ್ಚಿಸಲಿದೆ. ಈ ಕಂಪೆನಿಗಳು ಈಗಲೂ ಹೆಚ್ಚಿನ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಪ್ರತಿಯಾಗಿ ಡಾಲರ್ ಲೆಕ್ಕದಲ್ಲಿಯೇ ಹಣ ಪಾವತಿಸಬೇಕಿದೆ. ಡಾಲರ್ ಮೌಲ್ಯ ಹೆಚ್ಚಿರುವುದು ಈ ಕಂಪೆನಿಗಳ ತಯಾರಿಕಾ ವೆಚ್ಚವನ್ನೂ ಹೆಚ್ಚುವಂತೆ ಮಾಡಿದೆ ಎಂದು `ಪಿಡಬ್ಲ್ಯುಸಿ ಇಂಡಿಯಾ ಲೀಡರ್ ಟೆಲಿಕಾಂ'ನ ಮೊಹಮ್ಮದ್ ಚೌಧುರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.