ಬೆಂಗಳೂರು: ನವೀ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಗೆಲ್ಲಿಸಿದ ಜೆಮಿಮಾ ರಾಡ್ರಿಗಸ್ ಕಣ್ಮಣಿಯಾಗಿದ್ದಾರೆ. ಪಂದ್ಯ ಮುಗಿದಾಕ್ಷಣ ಭಾರತದ ಡಗ್ಔಟ್ನಲ್ಲಿ ಎಲ್ಲ ಆಟಗಾರ್ತಿಯರು ಅಳುತ್ತ, ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು. ಅದೇ ಹೊತ್ತಿಗೆ ಡ್ರೆಸಿಂಗ್ರೂಮ್ನಿಂದ ಓಡಿ ಡಗ್ಔಟ್ಗೆ ಬಂದ ವ್ಯಕ್ತಿಯೊಬ್ಬರು ಹರ್ಮನ್ಪ್ರೀತ್ ಕೌರ್ ಮತ್ತಿತರ ಆಟಗಾರರನ್ನು ಅಭಿನಂದಿಸಿ, ಅಪ್ಪಿದರು. ಅವರ ಕಂಗಳಲ್ಲಿ ಸಂತಸದ ಧಾರೆ ಹರಿಯುತ್ತಿತ್ತು. ಆ ಕಣ್ಣೀರಿನ ಒಂದೊಂದು ಹನಿಯಲ್ಲಿಯೂ ನೂರಾರು ಭಾವಗಳು ತುಳುಕುತ್ತಿದ್ದವು.

ಹೌದು: ಆ ವ್ಯಕ್ತಿಯ ಹೆಸರು ಅಮೋಲ್ ಮುಜುಂದಾರ್. ಸದ್ಯ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್. ಮುಂಬೈ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಆದರೆ ಅದೃಷ್ಟವಂತನಲ್ಲ. ಏಕೆಂದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 11 ಸಾವಿರಕ್ಕೂ ಹೆಚ್ಚು ರನ್ ಹೊಡೆದ ಕಲಾತ್ಮಕ ಬ್ಯಾಟರ್ ಅಮೋಲ್ ಭಾರತ ತಂಡದಲ್ಲಿ ಒಂದೇ ಒಂದು ಪಂದ್ಯ ಆಡುವ ಅವಕಾಶವನ್ನೂ ಪಡೆಯಲಿಲ್ಲ. ಅವರು ಆಡುತ್ತಿದ್ದ ಕಾಲಘಟ್ಟದಲ್ಲಿ ಭಾರತ ತಂಡದಲ್ಲಿ ಜಾಗ ಪಡೆಯುವುದು ಸುಲಭವಿರಲಿಲ್ಲ. ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಅವರು ಮಿಂಚುತ್ತಿದ್ದ ಕಾಲವದು. ಶಾರದಾಶ್ರಮ ಮೈದಾನದಲ್ಲಿ ನಡೆದಿದ್ದ ಶಾಲಾ ಕ್ರಿಕೆಟ್ ನಲ್ಲಿ ದಾಖಲೆ ಬರೆದಿದ್ದ ಸಚಿನ್ ಮತ್ತು ಕಾಂಬ್ಳಿ ಇನಿಂಗ್ಸ್ ಎಲ್ಲರಿಗೂ ಗೊತ್ತೇ ಇದೆ. ಅವರಿಬ್ಬರಲ್ಲಿ ಒಬ್ಬರು ಔಟಾದರೆ ಬ್ಯಾಟಿಂಗ್ ಗೆ ತೆರಳಲು ಪ್ಯಾಡ್ ಕಟ್ಟಿಕೊಂಡು, ಬ್ಯಾಟ್ ಹಿಡಿದು ಡಗ್ಔಟ್ನಲ್ಲಿ ಅಮೋಲ್ ಕೂತಿದ್ದರು. ಅವತ್ತು ಸಚಿನ್ ಮತ್ತು ಕಾಂಬ್ಳಿಯ 664 ರನ್ಗಳ ಜೊತೆಯಾಟವನ್ನು ಕಣ್ತುಂಬಿಕೊಂಡಿದ್ದರು.

ಅವರ ವೃತ್ತಿಜೀವನದುದ್ದಕ್ಕೂ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಂದರ್ಭಗಳು ಸೃಷ್ಟಿಯಾದಾಗಲೆಲ್ಲ ಅಮೋಲ್ ಅವರಿಗೆ ಅದೃಷ್ಟ ಕೈಕೊಡುತ್ತಿತ್ತು. ಶಾಂತಸ್ವಭಾವ, ಸಹನಶೀಲ ಮತ್ತು ನಗುಮುಖದ ಅಮೋಲ್ ದೇಶಿ ಕ್ರಿಕೆಟ್ನಲ್ಲಿಯೇ ತಮ್ಮ ಪ್ರತಿಭೆಯನ್ನು ವಿನಿಯೋಗಿಸಿದರು. ಮುಂಬೈ ತಂಡದ ನಾಯಕರಾಗಿ ಆಗಿ ದೇಶಿ ಕ್ರಿಕೆಟ್ ಚಾಂಪಿಯನ್ ಆಗಿದ್ದವರು. ಆಂಧ್ರ ಮತ್ತು ಅಸ್ಸಾಂ ತಂಡಗಳಲ್ಲಿಯೂ ಕೆಲವು ವರ್ಷ ಆಡಿದ್ದರು. 2014ರಲ್ಲಿ ನಿವೃತ್ತಿ ಘೋಷಿಸಿದರು.

‘ನನಗೆ ಆಗಿ ಹೋಗಿದ್ದರ ಕುರಿತು ವಿಷಾದವಿಲ್ಲ. ಸಿಕ್ಕ ಅವಕಾಶಗಳಿಗೆ ನ್ಯಾಯ ಒದಗಿಸಿದ್ದೇನೆ ಎನ್ನುವ ತೃಪ್ತಿ ಇದೆ’ ಎನ್ನುವ ಪ್ರಬುದ್ಧತೆ ಅವರದ್ದು. ಅವರ ಇದೇ ಚೆಂದದ ಗುಣಕ್ಕೆ ಈಗ ಫಲ ಸಿಗುತ್ತಿದೆ. ಅವರ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಭಾನುವಾರ ದಕ್ಷಿಣ ಆಫ್ರಿಕಾ ಎದುರಿನ ಹಣಾಹಣಿಯಲ್ಲಿ ಗೆದ್ದರೆ ಅದರ ಶ್ರೇಯದ ಬಹುಪಾಲು ಅಮೋಲ್ಗೇ ಸಲ್ಲಲೇಬೇಕು.

ಏಕೆಂದರೆ; ಆಟಗಾರನಾಗಿ ಅವರಿಗೆ ಭಾರತ ತಂಡವನ್ನು ವಿಶ್ವಕಪ್ ಪ್ರತಿನಿಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮಹಿಳೆಯರ ಭಾರತ ತಂಡವು ಚೊಚ್ಚಲ ವಿಶ್ವಕಪ್ ಫೈನಲ್ ತಲುಪುವಂತೆ ಸಿದ್ಧಗೊಳಿಸಿದ್ದಾರೆ. 2023ರ ಅಕ್ಟೋಬರ್ನಲ್ಲಿ ಅವರು ತಂಡಕ್ಕೆ ಮುಖ್ಯ ಕೋಚ್ ಆಗಿ ಬಂದಾಗ ಎಲ್ಲವೂ ಸರಿಯಿರಲಿಲ್ಲ. ಆಗ ತಾರೆ ಮಿಥಾಲಿ ರಾಜ್ ಅವರು ನಿವೃತ್ತಿ ಘೋಷಿಸಿ ಕೆಲವು ತಿಂಗಳುಗಳಷ್ಟೇ ಕಳೆದಿದ್ದವು. ಹರ್ಮನ್ಪ್ರೀತ್ ಕೌರ್ ಅವರು ನಾಯಕತ್ವ ವಹಿಸಿಕೊಂಡು ಸ್ವಲ್ಪ ಸಮಯವಾಗಿತ್ತು. ಆಟಗಾರ್ತಿಯರಲ್ಲಿ ಸಮನ್ವಯತೆ ಸಾಧಿಸುವುದು ಸವಾಲಾಗಿತ್ತು.

ಅಮೋಲ್ಗಿಂತ ಮೊದಲು ರಮೇಶ್ ಪೊವಾರ್ ಕೋಚ್ ಆಗಿದ್ದರು. ಅವರ ಮತ್ತು ನಾಯಕಿಯ ನಡುವೆ ಭಿನ್ನಾಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದವು.

ಆದರೆ ಅಮೋಲ್ ತಮ್ಮ ಸಭ್ಯ ನಡವಳಿಕೆ ಮತ್ತು ಚಾಣಾಕ್ಷತೆಯಿಂದ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಿದರು. ಪ್ರತಿಯೊಬ್ಬ ಆಟಗಾರ್ತಿಯ ಸಾಮರ್ಥ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ಹೊಣೆಗಳನ್ನು ನೀಡಿದರು. ಹರ್ಮನ್, ಸ್ಮೃತಿ ಮಂದಾನ, ಜೆಮಿಮಾ, ರೇಣುಕಾ ಸಿಂಗ್, ಶಫಾಲಿ ವರ್ಮಾ ಅವರಂತಹ ಅನುಭವವುಳ್ಳ ಆಟಗಾರ್ತಿಯರ ವಿಶ್ವಾಸ ಗಳಿಸಿದರು. ಕ್ರಾಂತಿ ಗೌಡ್, ಅರುಂಧತಿ, ಪ್ರತಿಕಾ ರಾವಲ್, ರಿಚಾ ಘೋಷ್ ಮತ್ತು ಅನ್ಮೋಲ್ ಜೋತ್ ಕೌರ್ ಅವರಂತಹ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ಕೊಟ್ಟರು. ಹಳೆ ಬೇರು, ಹೊಸ ಚಿಗುರು ಸೇರಿ ಬೆಳೆದ ಮರವು ಈಗ ಫಲ ನೀಡುತ್ತಿದೆ. ಚೊಚ್ಚಲ ವಿಶ್ವಕಪ್ ಕಿರೀಟ ಧರಿಸಲು ಒಂದು ಹೆಜ್ಜೆ ಅಷ್ಟೇ ದೂರವಿದೆ. ಭಾರತದ ಮಹಿಳಾ ಕ್ರಿಕೆಟ್ ಭವಿಷ್ಯದ ಬೆಳವಣಿಗೆಗೆ ವಿಶ್ವಕಪ್ ಗೆಲುವು ಶಕ್ತಿ ತುಂಬಲಿದೆ.
.Womens World Cup 2025: ದುಗುಡ, ಅವಮಾನ ಮೆಟ್ಟಿನಿಂತ ತಾರೆ ಜೆಮಿಮಾ ರಾಡ್ರಿಗಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.