ಮಂಗಳವಾರ, ಜನವರಿ 21, 2020
27 °C

ಐಪಿಎಸ್‌ ಅಧಿಕಾರಿಗಳ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಗಳೂರು, ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್‌ ಕಮಿಷನರ್‌ಗಳು ಸೇರಿದಂತೆ ರಾಜ್ಯ ಸರ್ಕಾರ ಗುರುವಾರ ಐವರು ಐಪಿಎಸ್‌ ಅಧಿಕಾರಿಗ­ಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಕೆ.ಎಸ್‌.ಆರ್‌. ಚರಣರೆಡ್ಡಿ ಅವರನ್ನು ಗೃಹ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ನೇಮಿಸ­ಲಾಗಿದೆ. ಜತೆಗೆ ಹೆಚ್ಚುವರಿಯಾಗಿ ತರಬೇತಿ ವಿಭಾಗದ ಐಜಿಪಿ ಹುದ್ದೆ ನಿಭಾಯಿಸುವಂತೆ ಸೂಚಿಸಲಾಗಿದೆ.ಆರ್‌. ಹಿತೇಂದ್ರ ಅವರನ್ನು ಮಂಗಳೂರು ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಲಾಗಿದೆ. ಬಿ.ಎ. ಪದ್ಮ­ನಯನ ಅವರನ್ನು ಬಂಧಿಖಾನೆಯ ಡಿಐಜಿ ಹುದ್ದೆಗೆ, ಮನೀಷ್‌ ಖರ್ಬಿಕರ್‌ ಅವರನ್ನು ಕೆಎಸ್‌ಆರ್‌ಪಿ ಡಿಐಜಿ ಹುದ್ದೆಗೆ ಹಾಗೂ ರವೀಂದ್ರ ಪ್ರಸಾದ್‌ ಅವರನ್ನು ಹುಬ್ಬಳ್ಳಿ–ಧಾರವಾಡ ಪೊಲೀಸ್‌  ಆಯುಕ್ತರನ್ನಾಗಿ ನೇಮಿಸಲಾಗಿದೆ.

ಪ್ರತಿಕ್ರಿಯಿಸಿ (+)