ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರುಪೇಟೆಯು ಚೇತರಿಕೆ ಕಂಡಿರುವ ಹಿನ್ನೆಲೆಯಲ್ಲಿ, ದೇಶಿ ಉದ್ದಿಮೆ ಸಂಸ್ಥೆಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಪ್ರಾಥಮಿಕ ಮಾರುಕಟ್ಟೆಯಿಂದ ಇದುವರೆಗೆ ್ಙ 59 ಸಾವಿರ ಕೋಟಿಗಳನ್ನು ಸಂಗ್ರಹಿಸಿವೆ.ಮುಂದಿನ ಹಣಕಾಸು ವರ್ಷದಲ್ಲಿ (2011) ಈ ಮೊತ್ತವು ್ಙ 90 ಸಾವಿರ ಕೋಟಿಗಳಿಗೆ ಹೆಚ್ಚಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಎಸ್‌ಎಂಸಿ ಗ್ಲೋಬಲ್ ಸೆಕ್ಯುರಿಟೀಸ್ ಲಿಮಿಟೆಡ್ ನಡೆಸಿರುವ ಅಧ್ಯಯನದ ಪ್ರಕಾರ, ದೇಶಿ ಸರ್ಕಾರಿ ಮತ್ತು ಖಾಸಗಿ ಉದ್ದಿಮೆ ಸಂಸ್ಥೆಗಳು ಈ ವರ್ಷ ಇಲ್ಲಿಯವರೆಗೆ ್ಙ 59,523 ಕೋಟಿಗಳನ್ನು ಸಂಗ್ರಹಿಸಿವೆ. 2009ರಲ್ಲಿ ಕೇವಲ 20 ಸಂಸ್ಥೆಗಳು ್ಙ 20 ಸಾವಿರ ಕೋಟಿಗಳನ್ನಷ್ಟೇ ಸಂಗ್ರಹಿಸಿದ್ದವು. 2011ರಲ್ಲಿ ಒಟ್ಟು ್ಙ 90 ಸಾವಿರ ಕೋಟಿಗಳಷ್ಟು ಮೊತ್ತದ ಆರಂಭಿಕ ಸಾರ್ವಜನಿಕ ಕೊಡುಗೆಗಳು ಪ್ರಾಥಮಿಕ ಪೇಟೆಗೆ ಬರುವ ನಿರೀಕ್ಷೆ ಇದೆ.

ಆರಂಭಿಕ ಸಾರ್ವಜನಿಕ ನೀಡಿಕೆಗೆ ಅನುಮತಿ ಕೋರಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಈಗಾಗಲೇ 100 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಇವುಗಳ ಒಟ್ಟಾರೆ ಬಂಡವಾಳ ಸಂಗ್ರಹದ ಗುರಿ ್ಙ 50 ಸಾವಿರ ಕೋಟಿಗಳಾಗಿದೆ. ಇವುಗಳಲ್ಲಿ 35 ಸಂಸ್ಥೆಗಳು ಈಗಾಗಲೇ ‘ಸೆಬಿ’ ಅನುಮತಿ ಪಡೆದಿದ್ದು, ಪ್ರಾಥಮಿಕ ಪೇಟೆ ಪ್ರವೇಶಿಸಲು ಸಿದ್ಧವಾಗಿವೆ. ಇವುಗಳು ಸಂಗ್ರಹಿಸಲು ಉದ್ದೇಶಿಸಿರುವ ಒಟ್ಟು ಮೊತ್ತವು ್ಙ 35 ಸಾವಿರ ಕೋಟಿಗಳಷ್ಟಿದೆ. ‘ಸೆಬಿ’ ಅನುಮತಿಗಾಗಿ ಕಾಯುತ್ತಿರುವ ಉಳಿದ 65 ಅರ್ಜಿಗಳ ಮೊತ್ತವು ್ಙ 15 ಸಾವಿರ ಕೋಟಿಗಳಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಾಥಮಿಕ ಮಾರುಕಟ್ಟೆಯಲ್ಲಿನ ಚೇತರಿಕೆಯು ಹೂಡಿಕೆದಾರರ ಆತ್ಮವಿಶ್ವಾಸ ವೃದ್ಧಿಸಿದ್ದು, ಈ ಉತ್ಸಾಹ ಮುಂದಿನ ವರ್ಷವೂ ಮುಂದುವರೆಯುವ ಸಾಧ್ಯತೆಗಳಿವೆ.
ಷೇರುವಿಕ್ರಯ: ಕೇಂದ್ರ ಸರ್ಕಾರವು ಇದುವರೆಗೆ ಸರ್ಕಾರಿ ಸ್ವಾಮ್ಯದ 9 ಉದ್ದಿಮೆಗಳ ಷೇರುವಿಕ್ರಯ ಮಾಡಿದೆ. ಅದರಲ್ಲಿ ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್) ‘ಐಪಿಒ’ ಮೂಲಕ 15 ಸಾವಿರ ಕೋಟಿಗಳಷ್ಟು ಬಂಡವಾಳ ಸಂಗ್ರಹಿಸಿರುವುದು ದೇಶಿ ಬಂಡವಾಳ ಮಾರುಕಟ್ಟೆಯಲ್ಲಿ ಹೊಸ ದಾಖಲೆಯಾಗಿದೆ. ಎನ್‌ಎಂಡಿಸಿ, ಎನ್‌ಟಿಪಿಸಿ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ನಿನ ಪೂರಕ ಸಾರ್ವಜನಿಕ ನೀಡಿಕೆಗೂ ಹೂಡಿಕೆದಾರರಿಂದ ಉತ್ತೇಜಕರ ಪ್ರತಿಕ್ರಿಯೆ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.