ಮುಂಬೈ: ಇಲ್ಲಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಇದೇ 30ರಂದು ಮಹತ್ವದ ಸೆಮಿಫೈನಲ್ ಪಂದ್ಯ ಆಡುವ ಮುನ್ನ ಭಾರತ ತಂಡ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಕೊನೆಯ ಅವಕಾಶ ಒದಗಿದೆ.

ಈಗ ಆರು ಪಾಯಿಂಟ್ಸ್ ಗಳಿಸಿರುವ ಭಾರತ ಈ ಕೊನೆಯ ಲೀಗ್ ಪಂದ್ಯ ಗೆದ್ದರೆ ಒಟ್ಟು ಎಂಟು ಪಾಯಿಂಟ್ಸ್ ಗಳಿಸಿದಂತಾಗಲಿದೆ. ಆದರೆ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡವನ್ನು (ಈಗಾಗಲೇ 9 ಪಾಯಿಂಟ್ಸ್ ಗಳಿಸಿದೆ) ಹಿಂದೆಹಾಕಲು ಆಗುವುದಿಲ್ಲ. ಹೀಗಾಗಿ ಲೀಗ್ನಲ್ಲಿ ನಾಲ್ಕನೇ ಸ್ಥಾನ ಬದಲಾಗದು.

ಬಾಂಗ್ಲಾದೇಶ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಶ್ರೀಲಂಕಾ ವಿರುದ್ಧ ಗೆಲುವಿನ ಹೊಸ್ತಿಲಿನಲ್ಲಿದ್ದಾಗ ಎಡವಿ ನಿರಾಸೆ ಅನುಭವಿಸಿತು. ಹೀಗಾಗಿ, ಕೊನೆಯ ಸ್ಥಾನದಲ್ಲೇ ಉಳಿದಿದೆ.

ಭಾರತ ತಂಡ: ಪ್ರತೀಕಾ ರಾವಲ್, ಸ್ಮೃತಿ ಮಂಧಾನಾ, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್(ನಾಯಕಿ), ದೀಪ್ತಿ ಶರ್ಮಾ, ಉಮಾ ಚೆಟ್ರಿ,, ಅಮನ್ ಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್

ಬಾಂಗ್ಲಾದೇಶ ತಂಡ: ಸುಮೈಯಾ ಅಕ್ತರ್, ರುಬ್ಯಾ ಹೈದರ್ ಝೆಲಿಕ್, ಶರ್ಮಿನ್ ಅಖ್ತರ್, ಸೋಭಾನಾ ಮೊಸ್ತರಿ, ನಿಗರ್ ಸುಲ್ತಾನಾ(ವಿಕೆಟ್ ಕೀಪರ್/ನಾಯಕಿ), ಶೋರ್ನಾ ಅಕ್ಟರ್, ರಿತು ಮೋನಿ, ರಬೇಯಾ ಖಾನ್, ನಹಿದಾ ಅಕ್ಟರ್, ನಿಶಿತಾ ಅಕ್ಟರ್ ನಿಶಿ, ಮಾರುಫಾ ಅಕ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.