ವೆಲಿಂಗ್ಟನ್: ವೇಗದ ಬೌಲರ್ ಜೇಕಬ್ ಡಫಿ (38ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿತು. ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ವೆಸ್ಟ್ ಇಂಡಿಸ್ ಎರಡನೇ ಇನಿಂಗ್ಸ್ನಲ್ಲಿ 128 ರನ್ಗಳಿಗೆ ಕುಸಿಯಿತು. ಮೊದಲ ಇನಿಂಗ್ಸ್ನಲ್ಲಿ 73 ರನ್ ಮುನ್ನಡೆ ಗಳಿಸಿದ್ದ ನ್ಯೂಜಿಲೆಂಡ್ ಗೆಲ್ಲಲು ಬೇಕಿದ್ದ 56 ರನ್ಗಳನ್ನು 10 ಓವರುಗಳಲ್ಲಿ ಗಳಿಸಿತು.

ಮೂರನೇ ಹಾಗೂ ಅಂತಿಮ ಟೆಸ್ಟ್ ಗುರುವಾರ ಮೌಂಟ್ ಮಾಂಗಾನೂಯಿಯಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರು:

ವೆಸ್ಟ್ ಇಂಡೀಸ್: 205 ಮತ್ತು 46.2 ಓವರುಗಳಲ್ಲಿ 128 (ಕವೆಮ್ ಹಾಜ್ 35, ಜಸ್ಟಿನ್ ಗ್ರೀವ್ಸ್ 25; ಜೇಕಬ್ ಡಫಿ 38ಕ್ಕೆ5, ಮೈಕೆಲ್ ರೇ 45ಕ್ಕೆ3); ನ್ಯೂಜಿಲೆಂಡ್: 9ಕ್ಕೆ278 ಡಿ. ಮತ್ತು 10 ಓವರುಗಳಲ್ಲಿ 1ಕ್ಕೆ 57 (ಡೆವಾನ್ ಕಾನ್ವೆ ಔಟಾಗದೇ 28).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.