ಬೆಂಗಳೂರು: ಸ್ವಂತ ಮನೆ ಹೊಂದಲು ಬಯಸುವ ರಾಜ್ಯದ ಗ್ರಾಹಕರ ಬೇಡಿಕೆಬೇಗ ಈಡೇರಿಸಲೆಂದೇ ಗೃಹಸಾಲ ಅರ್ಜಿ ತ್ವರಿತ ವಿಲೇವಾರಿ ಸೇವಾ ಕೇಂದ್ರ ವನ್ನು ನಗರದಲ್ಲಿ ಆರಂಭಿಸಲಾಗಿದೆ ಎಂದು `ಇಂಡಿಯ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿ.'(ಐಬಿಎಚ್ಎಫ್ಎಲ್) ಹೇಳಿದೆ.

ನಗರದಲ್ಲಿ ಬುಧವಾರ `ಹೋಮ್ ಲೋನ್ ಮಾಸ್ಟರ್ ಸರ್ವಿಸ್ ಸೆಂಟರ್' ಉದ್ಘಾಟಿಸಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಗಗನ್ ಬಂಗಾ, ಇದೊಂದು ವಿನೂತನ ಕಲ್ಪನೆ. ಗೃಹ ಸಾಲ ಅರ್ಜಿಗ ಳನ್ನು ತ್ವರಿತಗತಿಯಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಲು ಸಾಧ್ಯವಾಗುವಂತೆ ನುರಿತ ಸಿಬ್ಬಂದಿಗಳ ತಂಡವನ್ನು ಇಲ್ಲಿ ನಿಯೋಜಿಸಲಾಗಿದೆ ಎಂದರು.

ಮಂಗಳೂರು, ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರಿನ ಮಲ್ಲೇಶ್ವರಂ, ಮಾರತಹಳ್ಳಿ, ಜಯನಗರ ವೈಟ್ಫೀಲ್ಡ್ನಲ್ಲಿ ಸಂಸ್ಥೆಯ ಶಾಖೆಗಳಿದ್ದು, ಇಲ್ಲಿಗೆ ಬರುವ ಅರ್ಜಿಗಳನ್ನು ನೂತನ ಸೇವಾ ಕೇಂದ್ರ ಕಡಿಮೆ ಅವಧಿಯಲ್ಲಿ ಪರಿಶೀಲಿಸಿ ಸಾಲ ಮಂಜೂರಾತಿಗೆ ನೆರವಾಗಲಿದೆ. `ವೇತನದಾರ'ರ ಅರ್ಜಿ 48 ಗಂಟೆಯೊಳಗೇ ಇತ್ಯರ್ಥ ಪಡಿಸುವ ವ್ಯವಸ್ಥೆ ಇಲ್ಲಿದೆ ಎಂದರು.

ದೇಶದ ವಿವಿಧೆಡೆ 200ಕ್ಕೂ ಅಧಿಕ ಶಾಖೆಗಳಿದ್ದು, ಈವರೆಗೆ 1 ಲಕ್ಷ ಗ್ರಾಹಕರಿಗೆ ಗೃಹ ಸಾಲ ನೀಡಲಾಗಿದೆ. ಕಳೆದ ಹಣಕಾಸು ವರ್ಷದ ವಹಿವಾಟಿನಲ್ಲಿ ಶೇ 25.08ರ ಹೆಚ್ಚಳವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.