ದೊಡ್ಡಬಳ್ಳಾಪುರ: `ಬದಲಾಗುತ್ತಿರುವ ವಿದ್ಯುತ್ ಪ್ರಸರಣ ನಿಯಮಗಳ ಬಗ್ಗೆ ಬಳಕೆದಾರರು ಹೆಚ್ಚಿನ ಅರಿವು ಬೆಳೆಸಿಕೊಳ್ಳುವ ಅಗತ್ಯವಿದೆ' ಎಂದು ಗ್ರಾಹಕರ ಹಕ್ಕು ಶಿಕ್ಷಣ ಮತ್ತು ಜಾಗೃತಿ ವೇದಿಕೆ ವೈ.ಜಿ.ಮುರಳೀಧರ್ ಹೇಳಿದರು.

ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಹಾಗೂ ಗ್ರಾಹಕರ ಹಕ್ಕು ಶಿಕ್ಷಣ ಮತ್ತು ಜಾಗೃತಿ ವೇದಿಕೆ, ಬೆಸ್ಕಾಂ ಸಹಯೋಗದೊಂದಿಗೆ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ವಿದ್ಯುತ್ ಬಳಕೆದಾರರ ಹಕ್ಕು ಜಾಗೃತಿ ಮತ್ತು ಜವಾಬ್ದಾರಿಗಳು ಹಾಗೂ ಕುಂದು ಕೊರತೆಗಳ ನಿವಾರಣೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯುತ್ ಇಲಾಖೆಯಲ್ಲಿ ಸಕಾಲ ಯೋಜನೆಯ ಮೂಲಕ ಬಳಕೆದಾರರು ಅಗತ್ಯವಿರುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ. ಆದರೆ ವಿದ್ಯುತ್ ಬಳಕೆದಾರರಲ್ಲಿರುವ ಮಾಹಿತಿಯ ಕೊರತೆಯಿಂದ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಇಲಾಖೆ ಜನರಲ್ಲಿ ವಿದ್ಯುತ್ ಪ್ರಸರಣದ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಾಗೆಯೇ ಬಳಕೆದಾರರು ಕಾಲಕ್ಕೆ ಅನುಗುಣವಾಗಿ ಬದಲಾಗುವ ಇಲಾಖೆಯ ನಿಯಮಗಳನ್ನು ತಿಳಿದುಕೊಳ್ಳಬೇಕು. ಮಧ್ಯವರ್ತಿಗಳನ್ನು ಆಶ್ರಯಿಸದೇ ತಮ್ಮ ಸಮಸ್ಯೆಗಳನ್ನು ನೇರವಾಗಿ ಮೇಲಿನ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಬೆಸ್ಕಾಂ ಇಲಾಖೆಯವರು ಅವೈಜ್ಞಾನಿಕವಾಗಿ ಖಾಲಿ ನಿವೇಶನದಲ್ಲಿ ಕಂಬಗಳನ್ನು ನೆಟ್ಟು ಗ್ರಾಹಕರ ಮನೆಗಳಿಗೆ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ ಇಲಾಖೆ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳು ಸುಲಿಗೆ ಮಾಡಲು ಬರುತ್ತಿದ್ದಾರೆ. ಈ ಕುರಿತು ಇಲಾಖೆ ಗಮನ ಹರಿಸಬೇಕು ಎಂದು ವಿದ್ಯುತ್ ಬಳಕೆದಾರ ಕೃಷ್ಣಪ್ಪ ತಿಳಿಸಿದರು.

ಬಿಲ್ಗಳಲ್ಲಿ ಅನಗತ್ಯ ಠೇವಣಿಗಳನ್ನು ಸೇರಿಸಲಾಗುತ್ತದೆ. ಯಾವುದೇ ವಿದ್ಯುತ್ ಸಮಸ್ಯೆಗಳು ಬಂದರೂ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸುವುದಿಲ್ಲ. ದುರಸ್ತಿಯಾಗಿರುವ ಕಂಬಗಳು ಮುರಿದು ಬೀಳುವವರೆಗೂ ಇಲಾಖೆ ಅದರ ಬಗ್ಗೆ ದೂರು ನೀಡಿದ್ದರೂ ಗಮನಹರಿಸುವುದಿಲ್ಲ ಎನ್ನುವ ಹಲವಾರು ದೂರುಗಳನ್ನು ಸಾರ್ವಜನಿಕರು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.

ಸೋಲಾರ್ ಸಿಸ್ಟಂ ಅಳವಡಿಸಿಕೊಳ್ಳುವಂತೆ ವಿದ್ಯುತ್ ಇಲಾಖೆ ಮಾಡಿರುವ ನಿಯಮದಿಂದ ಬಡ ವರ್ಗದ ಜನರಿಗೆ ಹೊರೆಯಾಗಲಿದೆ. ಬದಲಿ ವ್ಯವಸ್ಥೆಗಳನ್ನು ಮಾಡಿಕೊಂಡವರಿಗೆ ರಿಯಾಯಿತಿ ನೀಡುವಂತೆ ಸ್ಥಳೀಯ ನಿವಾಸಿ ವೆಂಕಟರಾಜು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಸ್ಕಾಂ ದೊಡ್ಡಬಳ್ಳಾಪುರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಟಿ.ಗಂಗರಾಜ್, ` ಕೆಲವು ರಿಪೇರಿ ಕೆಲಸಗಳಿಗೆ ಪೂರಕವಾಗಿ ಸಾಮಗ್ರಿಗಳು ಬರುವುದು ತಡವಾದಾಗ ಕೆಲಸ ವಿಳಂಬಗುತ್ತದೆ. ಬಿಲ್ಗಳಲ್ಲಿ ಕಿಲೋವ್ಯಾಟ್ ಪಡೆದಿರುವುದಕ್ಕಿಂತ ಹೆಚ್ಚಿನ ಯೂನಿಟ್ ಬಳಸಿದ್ದರೆ, ಠೇವಣಿ ಹಣ ಪಡೆಯಲಾಗುತ್ತದೆ. ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಮಧ್ಯವರ್ತಿಗಳು ಗ್ರಾಹಕರನ್ನು ಸುಲಿಗೆ ಮಾಡುವುದು ಗಮನಕ್ಕೆ ಬಂದರೆ ತಕ್ಷಣವೇ ಮೇಲಧಿಕಾರಿಗಳನ್ನು ಸಂಪರ್ಕಿಸಿ ಎಂದರು.

ಅಧಿಕ ಕೈಗಾರಿಕಾ ಪ್ರದೇಶ, ವಿದ್ಯುತ್ ಮಗ್ಗಗಳನ್ನು ಹೊಂದಿರುವ ದೊಡ್ಡಬಳ್ಳಾಪುರ ಬಿಟ್ಟು ವಿದ್ಯುತ್ ಉಪವಿಭಾಗವನ್ನು ನೆಲಮಂಗಲದಲ್ಲಿ ಮಾಡಿರುವುದರಿಂದ ಎಲ್ಲ ಕೆಲಸಗಳಿಗೂ ತೊಂದರೆಯಾಗುತ್ತಿದೆ. ಪ್ರತಿ ಸಾಮಗ್ರಿ ತರಲು ಹತ್ತಾರು ಬಾರಿ ತಿರುಗಬೇಕು.ಇಲಾಖೆ ಇದನ್ನು ದೊಡ್ಡಬಳ್ಳಾಪುರದಲ್ಲಿಯೇ ತೆರೆಯಲಿ ಎಂದು ನಗರ ಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಮಾಜಿ ನಗರ ಸಭಾ ಸದಸ್ಯ ಕೆ.ಎಂ ಹನುಮಂತರಾಯಪ್ಪ ಅಧಿಕಾರಿಗಳಿಗೆ ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಬೆಸ್ಕಾಂ ನೆಲಮಂಗಲ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್ ಬಾಬು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪವಿಭಾಗಕ್ಕೆ ಮಾಗಡಿ ತಾಲ್ಲೂಕು ಸೇರಿದಂತೆ ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳು ಬರುತ್ತವೆ. ಮಾಗಡಿಗೂ ಹತ್ತಿರವಾಗುವಂತೆ ನೆಲಮಂಗಲದಲ್ಲಿ ಉಪವಿಭಾಗ ತೆರೆಯಲಾಗಿದೆ. ಇಲಾಖೆ ಕೆಲಸಗಳು ತ್ವರಿತವಾಗಿ ಆಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಕೆಪಿಟಿಸಿಎಲ್ ನಿವೃತ್ತ ಅಧೀಕ್ಷಕ ಎಂಜಿನಿಯರ್ ಲಕ್ಷ್ಮಣರೆಡ್ಡಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸಂಚಾಲಕರಾದ ಡಿ.ಆರ್.ನಟರಾಜ್, ಎನ್.ಸಿ.ಲಕ್ಷ್ಮೀ, ಎಸ್.ನಟರಾಜ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.