ಐಸಾನ್‌ವುಲ್ಲ ಷರೀಫ್ ಬಾಣಾವರ ಗ್ರಾ.ಪಂ ಅಧ್ಯಕ್ಷ

7

ಐಸಾನ್‌ವುಲ್ಲ ಷರೀಫ್ ಬಾಣಾವರ ಗ್ರಾ.ಪಂ ಅಧ್ಯಕ್ಷ

Published:
Updated:

ಅರಸೀಕೆರೆ: ತಾಲ್ಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಐಸಾನ್‌ವುಲ್ಲ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾ.ಪಂ.ಇ ಓ ನಾಗರಾಜ್ ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪಿ.ಆರ್. ನಾಗೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿತ್ತು. ಜ.18 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಗೊಂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಐಷಾನ್‌ವುಲ್ಲಾ ಷರೀಫ್ ಇನ್ನುಳಿದ ಅವಧಿಗೆ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಹೇಳಿದರು.ಅಭಿನಂದನೆ: ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಐಸಾನ್‌ವುಲ್ಲಾ ಷರೀಫ್ ಅವರನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿನಂದಿಸಿದ್ದಾರೆ.

ಅಧ್ಯಕ್ಷರ ಚೆನ್ನಾಗಿ ಕೆಲಸ ಮಾಡ   ಬೇಕು ಎಂದು ಹೇಳಿರುವ ಶಾಸಕರು, ಅವರಿಗೆ ಬೇಕಾದ ಸಹಕಾರ   ನೀಡುವುದಾಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry