ಐಜ್ವಾಲ್ (ಪಿಟಿಐ): ಮೊದಲ ಪಂದ್ಯ ದಲ್ಲಿ ಬಲಿಷ್ಠ ಸಲಗಾಂವ್ಕರ್ ಎದುರು ಗೆಲುವು ಪಡೆದು ವಿಶ್ವಾಸ ಹೆಚ್ಚಿಸಿಕೊಂಡಿ ರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡ ಐ ಲೀಗ್ ಟೂರ್ನಿ ಯಲ್ಲಿ ಶನಿವಾರ ಐಜ್ವಾಲ್ ಎದುರು ಪೈಪೋಟಿ ನಡೆಸಲಿದೆ.

ಐ ಲೀಗ್ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಮಿಜೋರಾಂನ ತಂಡ ತನ್ನ ಮೊದಲ ಪಂದ್ಯದಲ್ಲಿ 1–3 ಗೋಲುಗಳಿಂದ ಹಾಲಿ ಚಾಂಪಿಯನ್ ಮೋಹನ್ ಬಾಗನ್ ಎದುರು ಸೋಲು ಕಂಡಿತ್ತು.

ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್ಸಿ ತಂಡ ಆಡುತ್ತಿರುವ ಮೂರನೇ ಐ ಲೀಗ್ ಟೂರ್ನಿಯಿದು. ಚೆಟ್ರಿ ಪಡೆ ಈ ಟೂರ್ನಿಗೆ ಪದಾರ್ಪಣೆ ಮಾಡಿದ ವರ್ಷದಲ್ಲಿಯೇ ಚಾಂಪಿಯನ್ ಆಗಿತ್ತು. ಫೆಡರೇಷನ್ ಕಪ್ನಲ್ಲೂ ಪ್ರಶಸ್ತಿ ಜಯಿಸಿತ್ತು. ಹೋದ ವರ್ಷ ರನ್ನರ್ಸ್ ಅಪ್ ಸ್ಥಾನ ಪಡೆದಿತ್ತು.

ಆದ್ದರಿಂದ ಬಿಎಫ್ಸಿ ಈಗ ವಿಶ್ವಾಸದ ಗಣಿ ಎನಿಸಿದೆ. ಐಜ್ವಾಲ್ ತಂಡ ತವರಿನಲ್ಲಿ ಆಡಲಿರುವ ಮೊದಲ ಐ ಲೀಗ್ ಪಂದ್ಯ ವಿದು. ಆದ್ದರಿಂದ ಪಂದ್ಯ ಕಣ್ತುಂಬಿಕೊಳ್ಳಲು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ.

ಮೋಹನ್ ಬಾಗನ್ ಎದುರಿನ ಪಂದ್ಯದಲ್ಲಿ ಐಜ್ವಾಲ್ ತಂಡದ ರಕ್ಷಣಾ ವಿಭಾಗ ಚುರುಕಾಗಿರಲಿಲ್ಲ. ಆದ್ದರಿಂದ ಈ ತಂಡ ರಕ್ಷಣಾ ವಿಭಾಗಕ್ಕೆ ಒತ್ತು ನೀಡಬೇಕಿದೆ. ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿಯೂ ಮಿಂಚಿದ್ದ ಚೆಟ್ರಿ ಉತ್ತಮ ಲಯದಲ್ಲಿದ್ದಾರೆ. ಸಲ ಗಾಂವ್ಕರ್ ಎದುರು ಚೆಟ್ರಿ ಹಾಗೂ ಸಿ.ಕೆ ವಿನೀತ್ ತಲಾ ಒಂದು ಗೋಲು ಗಳಿಸಿದ್ದರು. ಆದ್ದರಿಂದ ಇವರ ಮೇಲೆ ಹೆಚ್ಚು ಜವಾಬ್ದಾರಿಯಿದೆ.

‘ಎದುರಾಳಿ ಯಾವ ತಂಡವೇ ಆಗಿರಲಿ. ಗೆದ್ದೇ ಗೆಲ್ಲುತ್ತೇವೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಹೊಸ ತಂಡ ಐಜ್ವಾಲ್ ಎದುರು ಉತ್ತಮ ಪ್ರದರ್ಶನ ನೀಡುತ್ತೇವೆ. ನಮ್ಮ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ’ ಎಂದು ಬಿಎಫ್ಸಿ ತಂಡದ ಕೋಚ್ ಆ್ಯಷ್ಲೆ ವೆಸ್ಟ್ವುಡ್ ಹೇಳಿದ್ದಾರೆ.

ಕೋಲ್ಕತ್ತದಲ್ಲಿ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಮೋಹನ್ ಬಾಗನ್ ಹಾಗೂ ಸಲಗಾಂವ್ಕರ್ ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.