ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ `ಒಎನ್ಜಿಸಿ~ ಷೇರು ವಿಕ್ರಯದ ಮೂಲಕ ಇದುವರೆಗೆ ರೂ 12,666 ಕೋಟಿ ಸಂಗ್ರಹವಾಗಿದ್ದು, ಇದು `ಭಾರಿ ಯಶಸ್ಸು~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬಣ್ಣಿಸಿದ್ದಾರೆ.

`ಒಎನ್ಜಿಸಿ~ಯಲ್ಲಿ ಸರ್ಕಾರ ಹೊಂದಿರುವ ಪಾಲಿನಲ್ಲಿ ಶೇ 5ರಷ್ಟು ಷೇರನ್ನು ಗುರುವಾರ ಹರಾಜು ಹಾಕಲಾಗಿತ್ತು. ಇದರಲ್ಲಿ ಇದುವರೆಗೆ ಶೇ 98.3ರಷ್ಟು ಷೇರುಗಳು ಮಾರಾಟವಾಗಿದ್ದು, ಪ್ರತಿ ಷೇರಿಗೆ ಸರಾಸರಿ ದರ ರೂ303ರಂತೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಪ್ರಣವ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯದ ಮೂಲಕ ಒಟ್ಟು ್ಙ40 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಅನೇಕ ಕಂಪೆನಿಗಳು ಷೇರು ವಿಕ್ರಯ ಮುಂದೂಡಿವೆ.

ಪ್ರತಿ ಷೇರಿಗೆ ರೂ303: `ಒಎನ್ಜಿಸಿ~ಯ ಪ್ರತಿ ಷೇರು ಸರಾಸರಿ ರೂ303.67ರಂತೆ ಮಾರಾಟವಾಗಿದ್ದು, ಇದು ಮೀಸಲು ದರಕ್ಕಿಂತಲೂ ಶೇ 4.71ರಷ್ಟು ಹೆಚ್ಚಿದೆ ಎಂದು ಸರ್ಕಾರ ಹೇಳಿದೆ. ಹಣಕಾಸು ಸಚಿವಾಲಯ ಹರಾಜು ಪ್ರಕ್ರಿಯೆ ವೇಳೆ ಷೇರುಗಳ ಸಮಾನ ಬೆಲೆ ರೂ290 ಎಂದು ನಿರ್ಧರಿಸಿತ್ತು.

`ಸೆಬಿ~ ತನಿಖೆ: `ಒಎನ್ಜಿಸಿ~ ಷೇರು ಹರಾಜು ಪ್ರಕ್ರಿಯೆ ವೇಳೆ ಉಂಟಾದ ತಾಂತ್ರಿಕ ಗೊಂದಲದ ಕುರಿತು ತನಿಖೆ ನಡೆಸುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸರ್ಕಾರ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.