ಭಾನುವಾರ, ಜನವರಿ 26, 2020
25 °C

ಒಕ್ಕಲಿಗರ ಸಂಘದ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಮುಂದಿನ 5 ವರ್ಷಗಳ ಅವಧಿ­ಗಾಗಿ ಬೆಂಗಳೂರು ಜಿಲ್ಲೆ ಮತ್ತು ನಗರ ಕ್ಷೇತ್ರದಿಂದ 15 ಸ್ಥಾನಗಳಿಗೆ ಚುನಾ­ವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ.ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ. 17 ಅಂತಿಮ ದಿನ.   ಡಿ. 18 ರಂದು ನಾಮಪತ್ರಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗು­ವುದು. ಡಿ. 19 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನ.ಜ. 5 ರಂದು ಮತದಾನ ಹಾಗೂ ಜ. 6 ರಂದು ಮತ ಎಣಿಕೆ ನಡೆಯ­ಲಿದೆ. ಅಂದೇ ಫಲಿತಾಂಶ ಘೋಷಿಸ­ಲಾ­ಗು­ವುದು ಎಂದು ಚುನಾವಣಾ­ಧಿಕಾರಿ ಎಂ.ಡಿ.ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)