ಶುಕ್ರವಾರ, ಆಗಸ್ಟ್ 7, 2020
25 °C

ಒಡವೆಗಳಿಗೆ ಇನ್ನೊಂದು ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಡವೆಗಳಿಗೆ ಇನ್ನೊಂದು ಮಳಿಗೆ

ಚಿನ್ನದ ಬೆಲೆ ಎಷ್ಟು ಏರಿದರೂ ಲಲನೆಯರ ಒಡವೆಮೋಹ ಕಡಿಮೆಯಾಗುತ್ತಿಲ್ಲ. ನಗರದ ಮಲ್ಲೇಶ್ವರಂನಲ್ಲಿ ಜಿಆರ್‌ಟಿ ಜ್ಯುಯಲರ್ಸ್‌ ಇನ್ನೊಂದು ಮಳಿಗೆ ತೆರೆದಿರುವುದೇ ಇದಕ್ಕೆ ಸಾಕ್ಷಿ. ಚಿನ್ನ, ವಜ್ರ, ಪ್ಲಾಟಿನಂನಲ್ಲಿ ಇರುವ ಹಲವು ಆಯ್ಕೆಗಳನ್ನು ಮಳಿಗೆಯವರು ಇತ್ತೀಚೆಗೆ ಫ್ಯಾಷನ್ ಶೋ ಮೂಲಕ ಪ್ರದರ್ಶಿಸಿದರು.ಎರಡು ಅಂತಸ್ತಿನ ಮಳಿಗೆಯ ವಿಸ್ತೀರ್ಣ 9000 ಚದರಡಿ. ವ್ಯಾಲೆಟ್ ಪಾರ್ಕಿಂಗ್ ಅನುಕೂಲವಿದ್ದು, ಹೆಚ್ಚು ಗ್ರಾಹಕರು ವಾಹನಗಳನ್ನು ನಿಲ್ಲಿಸುವ ಅವಕಾಶವಿದೆ ಎಂದು ಕಂಪೆನಿ ಹೇಳಿಕೊಂಡಿದೆ.ಮದುವೆ ಒಡವೆಗಳು, ವಿಶೇಷ ಸಂಭ್ರಮಗಳಿಗೆ ಬೇಕಾದ ಒಡವೆಗಳು, ಪುರಾತನ ಒಡವೆಗಳು, ಅತ್ಯಾಧುನಿಕ ಫ್ಯಾಷನ್ ಒಡವೆಗಳು, ಬೆಳ್ಳಿ ಒಡವೆಗಳು, ಕುಸುರಿ ಕೆಲಸದ ಬೆಳ್ಳಿಯ ಕಲಾತ್ಮಕ ವಸ್ತುಗಳು, ಪೂಜಾ ಸಾಮಗ್ರಿಗಳು, ಪ್ರಸಿದ್ಧ ನಮೂನೆಗಳ ಹೆಸರಾಂತ ಗಡಿಯಾರಗಳು,ಕಾರ್ಪೊರೇಟ್ ಸಂಸ್ಥೆಗಳಿಗೆ ಅಗತ್ಯವಿರುವ ಉಡುಗೊರೆಗಳು ಇವೆಲ್ಲವೂ ಜಿಆರ್‌ಟಿಯಲ್ಲಿ ಲಭ್ಯ. ಗ್ರಾಹಕರಿಗೆ ಚಿನ್ನದ ಮೇಲೆ ಪ್ರತಿ ಗ್ರಾಂಗೆ 50 ರೂ. ಮತ್ತು ವಜ್ರದ ಮೇಲೆ ಕ್ಯಾರೆಟ್‌ಗೆ 4000 ರೂ. ರಿಯಾಯಿತಿಯೂ ಉಂಟು.

ಸಂಪರ್ಕಿಸಿ: 22921515.ಲೋಟಸ್ ಹರ್ಬಲ್ಸ್‌ನಿಂದ ಮತ್ತೊಂದು ಕ್ರೀಮ್

ಲೋಟಸ್ ಹರ್ಬಲ್ಸ್ ಸೂರ‌್ಯರಶ್ಮಿಯ ಹಾನಿಕಾರಕ ಗುಣಗಳಿಂದ ರಕ್ಷಿಸುವ ಕೊಲಾಜೆನ್‌ಶೀಲ್ಡ್ ಸನ್‌ಬ್ಲಾಕ್ ಎಸ್‌ಪಿಎಫ್ 90ಪಿಎ++  ಬಿಡುಗಡೆ ಮಾಡಿದೆ.

ಇದು ತ್ವಚೆಯಲ್ಲಿನ ಕೊಲಾಜೆನ್ ಅಂಶವನ್ನು ರಕ್ಷಿಸುತ್ತದೆ. ಚರ್ಮ ಸುಕ್ಕುಗಟ್ಟುವಂತೆ ಮಾಡುವ ಸನ್ ಬರ್ನ್, ಚರ್ಮದ ಕ್ಯಾನ್ಸರ್ ಉಂಟು ಮಾಡುವ ಯುವಿ (ಅತಿ ನೇರಳೆ) ಕಿರಣಗಳ ದುಷ್ಪರಿಣಾಮದಿಂದ ರಕ್ಷಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.ಇದರಲ್ಲಿ ಹೈಡ್ರೋಲೈಸ್ಡ್ ಸೋಯಾ ಪ್ರೋಟೀನ್ ಮತ್ತು ಆಲೊವೆರಾ ಅಂಶಗಳು ಅಡಕವಾಗಿವೆ. ಈ ಉತ್ಪನ್ನವು ಹಾನಿಕಾರಕ ಸಂರಕ್ಷಕಗಳಾದ   ಪ್ಯಾರಾಬೆನ್ (ಕ್ಯಾನ್ಸರ್ ಉಂಟು ಮಾಡುವ) ಗಳಿಂದ ಮುಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.