ವಿಜಯಪುರ:  ನಿರಂತರವಾಗಿ ಮೂರ್ನಾಲ್ಕು ವರ್ಷಗಳಿಂದ ಪ್ರಕೃತಿಯ ಮುನಿಸಿಗೆ ತುತ್ತಾಗಿ, ಸಮಸ್ಯೆಗಳ ಸುಳಿಗೆ ಸಿಲುಕಿ ಹೈರಾಣಾಗಿರುವ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು, ಚೇತರಿಸಿಕೊಳ್ಳುವ ಮುನ್ನವೇ ಬೆಲೆ ಕುಸಿತದಿಂದ ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ.

ಹಂಗಾಮಿಗೆ ಮುನ್ನ ಮಾರುಕಟ್ಟೆ ಯಲ್ಲಿ 1 ಕಿಲೋಗೆ ₨ 350ರಷ್ಟಿದ್ದ ಒಣ ದ್ರಾಕ್ಷಿ ಬೆಲೆ ದಿಢೀರನೇ ₨ 150ರ ಆಸುಪಾಸಿಗಿಳಿದಿದೆ. ಒಮ್ಮೆಲೇ ಬೆಲೆ ಕುಸಿದಿದ್ದು, ಮುಂದೇನು ಮಾಡಬೇಕು ಎಂಬುದು ತೋಚದೆ ದ್ರಾಕ್ಷಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ 10 ಸಾವಿರ ಹೆಕ್ಟೇರ್ನಲ್ಲಿ ದ್ರಾಕ್ಷಿ ಬೆಳೆಯಲಾಗಿದ್ದು, ಶೇ 80 ಭಾಗ ಒಣ ದ್ರಾಕ್ಷಿ ತಯಾರಿಕೆಗೆ ಬಳಕೆಯಾಗುತ್ತದೆ. ಪ್ರಸ್ತುತ ವರ್ಷ ಮಾರ್ಚ್ ಎರಡನೇ ವಾರ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ಹಾನಿಯಾಗಿತ್ತು.

ಸತತ ಹೊಡೆತಗಳ ನಡುವೆಯೂ ಒಣದ್ರಾಕ್ಷಿಗೆ ಮಾರುಕಟ್ಟೆಯಲ್ಲಿದ್ದ ಐತಿಹಾಸಿಕ ಬೆಲೆಯಿಂದ ಸಂಕಷ್ಟದಲ್ಲೂ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ಇದೀಗ ಹಂಗಾಮು ಆರಂಭಗೊಳ್ಳುತ್ತಿದ್ದಂತೆಯೇ ಬೆಲೆ ಅರ್ಧಕ್ಕೂ ಹೆಚ್ಚು ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
‘ಒಣ ದ್ರಾಕ್ಷಿ ಹಂಗಾಮು ಆರಂಭಗೊಳ್ಳುತ್ತಿದ್ದಂತೆಯೇ ಬೆಲೆ ಕುಸಿದಿದ್ದು, ನಮ್ಮ ಆತ್ಮಸ್ಥೈರ್ಯವನ್ನೇ ಕಸಿದಿದೆ. ಲಕ್ಷ ಲಕ್ಷ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಬೆಲೆ ಕುಸಿತದಿಂದ ಮಾರಲು ಆಗುತ್ತಿಲ್ಲ.

ಕೋಲ್ಡ್ ಸ್ಟೋರೇಜ್ಗಳಲ್ಲಿ ಒಣದ್ರಾಕ್ಷಿ ಸಂಗ್ರಹಿಸಿಟ್ಟಿದ್ದು, ಒಂದೆಡೆ ಟನ್ಗೆ ₨ 400ರಂತೆ ತಿಂಗಳಿಗೆ ಬಾಡಿಗೆ ಕಟ್ಟಬೇಕು. ಮತ್ತೊಂದೆಡೆ ಸಾಲದ ಮೇಲಿನ ಬಡ್ಡಿ ಹೆಚ್ಚುತ್ತಿದೆ. ನಮ್ಮ ಸ್ಥಿತಿ ಅಡಕತ್ತರಿ ನಡುವೆ ಸಿಕ್ಕಿಕೊಂಡ ಅಡಿಕೆಯಂತಾಗಿದೆ’ ಎಂದು ಬಸವನ ಬಾಗೇವಾಡಿ ತಾಲ್ಲೂಕು ಕೊಲ್ಹಾರದ ಪ್ರಗತಿಪರ ಕೃಷಿಕ ಸಿದ್ಧಪ್ಪ ದುಂಡಪ್ಪ ಬಾಲಗೊಂಡ ಅವರು ದ್ರಾಕ್ಷಿ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

‘ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 70 ರಿಂದ 80 ಸಾವಿರ ಟನ್ ಒಣ ದ್ರಾಕ್ಷಿ ಉತ್ಪಾದಿಸಲಾಗಿದೆ. ನವದೆಹಲಿ, ಮುಂಬೈ, ಗುಜರಾತ್ ಸೇರಿದಂತೆ ದೇಶದ ಅರ್ಧ ಭಾಗದ ಮಾರುಕಟ್ಟೆಗಳಿಗೆ ಇಲ್ಲಿನ ಒಣದ್ರಾಕ್ಷಿ ಮಹಾರಾಷ್ಟ್ರದ ತಾಸಗಾಂವ್ ಮಾರುಕಟ್ಟೆ ಮೂಲಕ ಪೂರೈಕೆಯಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಂತೋಷ ಇನಾಮದಾರ ಹೇಳುತ್ತಾರೆ.

‘ಮಹಾರಾಷ್ಟ್ರದ ನಾಸಿಕ್ ಭಾಗದ ದ್ರಾಕ್ಷಿ ಬೆಳೆ ಪ್ರಸ್ತುತ ವರ್ಷ ಸುರಿದ ಅಕಾಲಿಕ ಮಳೆಯಿಂದ ಹಾನಿಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳುಗಳಲ್ಲಿ ಬೆಲೆ ಗಗನಮುಖಿ ಯಾಗಲಿದೆ ಎಂಬ ಆಶಾಭಾವದಿಂದ ಜಿಲ್ಲೆಯ ಬೆಳೆಗಾರರು, ವಿಜಯಪುರ ದಲ್ಲಿರುವ 12 ಕೋಲ್ಡ್ ಸ್ಟೋರೇಜ್ಗಳಲ್ಲಿ ಮಾಲನ್ನು ಸಂಗ್ರಹಿಸಿಟ್ಟಿದ್ದಾರೆ. ಇದಲ್ಲದೇ ಬಹುತೇಕ ಬೆಳೆಗಾರರು ಮಹಾರಾಷ್ಟ್ರದ ಸಾಂಗ್ಲಿ, ತಾಸಗಾಂವ್ನ ಕೋಲ್ಡ್ ಸ್ಟೋರೇಜ್ಗಳಲ್ಲೂ ಉತ್ಪನ್ನ ಶೇಖರಿಸಿಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

‘ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ನಗರದಲ್ಲಿ ಆನ್ಲೈನ್ ಟ್ರೇಡಿಂಗ್ ಸೆಂಟರ್ಗೆ ಕಳೆದ ಫೆಬ್ರುವರಿ 7ರಂದು ಚಾಲನೆ ನೀಡಲಾಗಿತ್ತು. ಆದರೆ ವ್ಯಾಪಾರಿಗಳ ಲಾಬಿಯಿಂದ ವಾರದೊಳಗೆ ಸ್ಥಗಿತಗೊಂಡಿತು. ಇದರ ಮರು ಆರಂಭಕ್ಕಾಗಿ ಇದೀಗ ವ್ಯಾಪಾರಿಗಳ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುತ್ತಿದೆ’ ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ್ ತಿಳಿಸಿದರು.

ವ್ಯಾಪಾರಿಗಳ ಮರ್ಮ ತಿಳಿಯದಾಗಿದೆ. ಲಾಭಕೋರತನದಿಂದ ಮಾರುಕಟ್ಟೆ ಯಲ್ಲಿ ಬೆಲೆ ಇಳಿಸಲಾಗಿದೆ. ಆನ್ಲೈನ್ ಮಾರಾಟಕ್ಕೆ ಚಾಲನೆ ನೀಡಿದರೆ, ಒಂದಿಷ್ಟು ಅನುಕೂಲವಾಗಬಹುದು.
ಸಿದ್ಧಪ್ಪ ದುಂಡಪ್ಪ ಬಾಲಗೊಂಡ, ದ್ರಾಕ್ಷಿ ಬೆಳೆಗಾರ, ಕೊಲ್ಹಾರ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.