ಭಾನುವಾರ, ಮೇ 22, 2022
27 °C

ಒಬ್ಬ ಸೈನಿಕನಿಗಾಗಿ 1,027 ಕೈದಿಗಳ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆರುಸಲೇಂ (ಪಿಟಿಐ): ಇಸ್ರೇಲ್ ಈಗ ತನ್ನ ಸೈನಿಕ ಗಿಲದ್ ಶಲಿತ್‌ನ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದೆ.1,935 ದಿನಗಳಿಂದ ಹಮಾಸ್ ಉಗ್ರರ ಒತ್ತೆಯಲ್ಲಿರುವ ಶಲಿತ್‌ನನ್ನು ಬಿಡುಗಡೆಗೊಳಿಸುವುದಕ್ಕಾಗಿ ಜೈಲಿನಲ್ಲಿರುವ 1,027 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆಗೊಳಿಸಲು ಇಸ್ರೇಲ್ ಸಮ್ಮತಿಸಿದೆ. ಈ ಸಂಬಂಧ ಇಸ್ರೇಲ್ ಹಾಗೂ ಉಗ್ರ ಸಂಘಟನೆ ನಡುವೆ ಒಪ್ಪಂದ ನಡೆದಿದೆ.ಸೈನಿಕನ ಬಿಡುಗಡೆಗಾಗಿ ಐದು ವರ್ಷಗಳಿಂದ ನಡೆದ ಮಾತುಕತೆ ಹಲವು ಬಾರಿ ಮುರಿದು ಬಿದ್ದಿತ್ತು. ಆದರೆ ಈಗ ಇಸ್ರೇಲ್ ಸಚಿವ ಸಂಪುಟ ಈ ಒಪ್ಪಂದಕ್ಕೆ ಸಹಿ ಹಾಕಲು ಸಮ್ಮತಿ ಸೂಚಿಸಿದೆ. ಮಂಗಳವಾರ ಸಂಜೆ ತುರ್ತಾಗಿ ನಡೆದ ಮತದಾನದಲ್ಲಿ 26 ಸಚಿವರು ಒಪ್ಪಂದದ ಪರ ಮತ ಹಾಕಿದ್ದರೆ, ಮೂವರು ವಿರುದ್ಧ ಮತ ಹಾಕಿದರು.`ಗಿಲದ್ ಶಲಿತ್ ಬಿಡುಗಡೆಗಾಗಿ ಹಮಾಸ್ ಸಂಘಟನೆಯೊಂದಿಗಿನ ಮಾತುಕತೆಯನ್ನು ನಾವು ಪೂರ್ಣಗೊಳಿಸಿದ್ದೇವೆ. ಶೀಘ್ರದಲ್ಲಿ ಅವರು ಸ್ವದೇಶಕ್ಕೆ ಮರಳಲಿದ್ದಾರೆ~ ಎಂದು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರಧಾನಿ  ಬೆಂಜಮಿನ್ ನೆತಾನ್ಯಹು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.