ನವದೆಹಲಿ (ಪಿಟಿಐ): `ಲಂಡನ್ ಒಲಿಂಪಿಕ್ಸ್ಗೆ ಡೌ ಕಂಪೆನಿ ನೀಡಿರುವ ಪ್ರಾಯೋಜಕತ್ವವನ್ನು ಕೈ ಬಿಡಬೇಕು ಎಂದು ಒತ್ತಾಯ ಮಾಡುತ್ತಿರುವ ಭಾರತ ಒಲಿಂಪಿಕ್ಸ್ನಿಂದ ಹಿಂದೆ ಸರಿಯುವ ಯತ್ನ ಮಾಡಬಾರದು. ಒಂದು ವೇಳೆ ಹೀಗಾದರೆ, ಅದು ಮತ್ತೊಂದು `ದುರಂತ~. -ಹೀಗೆ ಹೇಳಿದ್ದು ಐಒಎ ಪ್ರಧಾನ ಕಾರ್ಯದರ್ಶಿ ರಣಧೀರ್ ಸಿಂಗ್.

`ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎನ್ನುವ ದೊಡ್ಡ ಕನಸು ಹೊಂದಿರುವ ಅಥ್ಲೀಟ್ಗಳು ಹಾಗೂ ಅದನ್ನು ಕಾತರದಿಂದ ಎದುರು ನೋಡುತ್ತಿರುವಭಾರತದ ಜನತೆಗೆ ಇದರಿಂದ ನಿರಾಸೆಯಾಗುತ್ತದೆ. ಆದ್ದರಿಂದ ಹಿಂದೆ ಸರಿಯುವ ಯತ್ನಕ್ಕೆ ಮುಂದಾಗಬಾರದು~ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭೋಪಾಲ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಸಂಸ್ಥೆ ಒಡೆತನ ಹೊಂದಿರುವ ಡೌ ಪ್ರಾಯೋಜಕತ್ವ ರದ್ದಾಗದಿರುವುದಕ್ಕೆ ಕ್ರಮವಾಗಿ ಭಹಿಷ್ಕಾರದ ಯೋಚನೆ ಮೊಳಕೆಯೊಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.