ಭಾನುವಾರ, ಸೆಪ್ಟೆಂಬರ್ 22, 2019
23 °C

ಒಲಿಂಪಿಕ್ ಅರ್ಹತಾ ಟೂರ್ನಿ ಕೈತಪ್ಪುವ ಸಾಧ್ಯತೆ ಎಫ್‌ಐಎಚ್ ಎಚ್ಚರಿಕೆ

Published:
Updated:

ನವದೆಹಲಿ (ಪಿಟಿಐ): ಹಾಕಿ ಇಂಡಿಯಾ (ಎಚ್‌ಐ) ಮತ್ತು ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ನಡುವಿನ  `ಮುಸಕಿನ ಗುದ್ದಾಟ~ ಇದೇ ರೀತಿ ಮುಂದುವರಿದರೆ ಲಂಡನ್ ಒಲಿಂಪಿಕ್‌ನ ಹಾಕಿ ಕ್ರೀಡೆಯ ಅರ್ಹತಾ ಹಂತದ ಟೂರ್ನಿಗೆ ಆತಿಥ್ಯ ವಹಿಸುವ ಅವಕಾಶ ಭಾರತದ ಕೈತಪ್ಪುವ ಸಾಧ್ಯತೆಯಿದೆ.ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಮಂಗಳವಾರ ಈ ಕುರಿತು ಭಾರತಕ್ಕೆ ಎಚ್ಚರಿಕೆ ನೀಡಿದೆ. ಈಗ ನಿರ್ಧರಿಸಿರುವಂತೆ ಒಲಿಂಪಿಕ್ ಅರ್ಹತಾ ಟೂರ್ನಿ ನವದೆಹಲಿಯಲ್ಲಿ ಮುಂದಿನ ಫೆಬ್ರುವರಿಯಲ್ಲಿ ನಡೆಯಲಿದೆ.ಅದಕ್ಕೆ ಮುನ್ನ ಎಚ್‌ಐ ಮತ್ತು ಐಎಚ್‌ಎಫ್ ವಿಲೀನಗೊಂಡು ಒಂದೇ ಹೆಸರಿನಡಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ, ಒಲಿಂಪಿಕ್ ಅರ್ಹತಾ ಟೂರ್ನಿಯ ಆತಿಥ್ಯ ಕೈತಪ್ಪಬಹುದು ಎಂದು ಎಫ್‌ಐಎಚ್ ಹೇಳಿದೆ.

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯದ ಹಕ್ಕನ್ನು ಈಗಾ ಗಲೇ ಕಳೆದುಕೊಂಡಿದೆ.`ಭಾರತ ಎಫ್‌ಐಎಚ್‌ನ ಪ್ರಮುಖ ಸದಸ್ಯ ರಾಷ್ಟ್ರ. ಆದರೆ ನಮ್ಮ ನಿಯಮದಂತೆ ಸದಸ್ಯ ರಾಷ್ಟ್ರದಲ್ಲಿ ಹಾಕಿ ಕ್ರೀಡೆಯ ಆಡಳಿತ ನೋಡಿಕೊಳ್ಳಲು ಒಂದು ಸಂಸ್ಥೆ ಮಾತ್ರ ಇರಬೇಕು~ ಎಂದು ಎಫ್‌ಐಎಚ್ ಅಧ್ಯಕ್ಷ ಲಿಯೊನಾಡ್ರೊ ನೆಗ್ರೆ ಮಂಗಳವಾರ ಸ್ಪಷ್ಟಪಡಿಸಿದರು.ಎಚ್‌ಐ ಮತ್ತು ಐಎಚ್‌ಎಫ್ ಅಧಿಕಾರಕ್ಕಾಗಿ ಕಚ್ಚಾಟ ನಡೆಸುತ್ತಿದೆ. ಪರಸ್ಪರ ವಿಲೀನಗೊಂಡು ಒಂದೇ ಹೆಸರಿನಡಿ ಕಾರ್ಯನಿರ್ವಹಿಸುವಂತೆ ಎಫ್‌ಐಎಚ್ ಹಲವು ಸಲ ಈ ಎರಡೂ ಸಂಸ್ಥೆಗಳಲ್ಲಿ ಕೇಳಿಕೊಂಡಿತ್ತು.  

Post Comments (+)