ಶನಿವಾರ, ಸೆಪ್ಟೆಂಬರ್ 26, 2020
21 °C

ಒಲಿಂಪಿಕ್: ಆರಂಭದಲ್ಲೆ ಮುಗ್ಗರಿಸಿದ ಜ್ವಾಲಾ, ದಿಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್: ಆರಂಭದಲ್ಲೆ ಮುಗ್ಗರಿಸಿದ ಜ್ವಾಲಾ, ದಿಜು

ಲಂಡನ್ (ಐಎಎನ್‌ಎಸ್): ಒಲಿಂಪಿಕ್ ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲೇ ಭಾರತದ ಜ್ವಾಲಾ ಗುಟ್ಟಾ ಹಾಗೂ ವಿ.ದಿಜು ಅವರು ಪರಾಭವಗೊಂಡಿದ್ದಾರೆ.ಮಿಶ್ರ ಡಬಲ್ಸ್‌ನ ಸಿ ಗುಂಪಿನಲ್ಲಿ 3ನೇ ಶ್ರೇಯಾಂಕ ಪಡೆದಿದ್ದ ಈ ಜೋಡಿಯನ್ನು ಇಂಡೋನೇಷ್ಯಾದ ಟೊಂಟೊವಿ ಅಹಮ್ಮದ್ ಹಾಗೂ ಲಿಲಿಯಾನ ನಾಸಿ ಅವರು 16-21, 12-21ರ ಸೆಟ್‌ಗಳಲ್ಲಿ ಸೋಲಿಸಿದರು.27 ನಿಮಿಷಗಳ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ಜ್ವಾಲಾ ಹಾಗೂ ದಿಜು ಅವರು ತೀರಾ ನಿರಾಶದಾಯಕ ಪ್ರದರ್ಶನ ನೀಡಿದರು.

ಬುಧವಾರದಿಂದ ಆರಂಭವಾಗುವ ನಾಕ್‌ಔಟ್ ಪಂದ್ಯಾವಳಿಗಳಿಗೆ ಅರ್ಹತೆ ಪಡೆಯಬೇಕಾದರೆ ಇವರು ಮುಂದಿನ 2 ಲೀಗ್ ಪಂದ್ಯಗಳಲ್ಲಿ ಜಯಿಸಲೇ ಬೇಕಾಗಿದೆ. ಮುಂದಿನ ಪಂದ್ಯ ಭಾನುವಾರ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.