ವಿಜಾಪುರ: ನಗರದಲ್ಲಿ ಸಮಗ್ರ ಒಳಚರಂಡಿ ನಿರ್ಮಾಣ ಮಾಡುವ 120 ಕೋಟಿ ರೂ. ವೆಚ್ಚದ ಕಾಮ ಗಾರಿಗೆ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಠ್ಠಲ ಕಟಕದೊಂಡ ಜಂಟಿಯಾಗಿ ಶುಕ್ರವಾರ ಚಾಲನೆ ನೀಡಿದರು.

ಕೆ.ಯು.ಐ.ಡಿ.ಬಿ. ಹಾಗೂ ನಗರ ಸಭೆಯು ಜಂಟಿಯಾಗಿ ಹಮ್ಮಿಕೊಂಡ ಒಳಚರಂಡಿ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ನಗರ ಶಾಸಕ ಅಪ್ಪು ಪಟ್ಟಣ ಶೆಟ್ಟಿ ಮಾತನಾಡಿ, ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮದ ಏಷ್ಯನ್ ಅಭಿವೃದ್ಧಿ ಬ್ಯಾಂಕ್ನಿಂದ ನಗರಕ್ಕೆ ಸಮಗ್ರ ಒಳಚರಂಡಿ ಸೌಲಭ್ಯ ಕಲ್ಪಿಸುವ ಕಾಮ ಗಾರಿ ಪ್ರಾರಂಭಿಸುತ್ತಿದ್ದು, ಬರುವ 18 ತಿಂಗಳ ಒಳಗಾಗಿ ನಗರದ ಒಳ ಹಾಗೂ ಹೊರವಲಯದ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ಭರವಸೆ ನೀಡಿದರು.

ಬರುವ 2042ನೇ ಸಾಲಿನ ನಗರದ ಜನಸಂಖ್ಯೆಗನುಣವಾಗಿ ಈ ಯೋಜನೆ ಯನ್ನು ರೂಪಿಸಲಾಗಿದ್ದು. ಒಟ್ಟಾರೆ ನಗರದ 238 ಕಿ.ಮೀ. ಉದ್ದದ ಒಳ ಚರಂಡಿಯನ್ನು 3 ಪ್ಯಾಕೇಜ್ನಲ್ಲಿ ನಿರ್ಮಾಣ ಮಾಡಲಾಗುವುದು ಹಾಗೂ ಹೊಸದಾಗಿ 8398 ಮ್ಯಾನ್ಹೋಲ್ಗಳ ನಿರ್ಮಾಣ, 16900 ಚೆಂಬರ್ಗಳ ನಿರ್ಮಾಣ, 535 ಮೀ. ಉದ್ದದ ಮಳೆ ನೀರು ಹರಿಯಲು ಚರಂಡಿ ನಿರ್ಮಾಣ ಕಾಮಗಾರಿಯನ್ನು ನಡೆಸಲಾಗುವುದು ಎಂದರು.

ವಿಶ್ವ ಬ್ಯಾಂಕ್ನಿಂದ 72.25 ಕೋಟಿ ರೂ. ಹಾಗೂ ಮುಖ್ಯಮಂತ್ರಿಗಳ ಸಣ್ಣ ಮತ್ತು ಉದ್ಯಮ ಪಟ್ಟಣ ಅಭಿವೃದ್ಧಿ ಕಾರ್ಯಕ್ರಮದಡಿ 30ಕೋಟಿ ರೂ. ಒಳಗೊಂಡಂತೆ ಒಟ್ಟು ರೂ.120 ಕೋಟಿ ಹಣ ಬಿಡುಗಡೆಯಾಗಿದೆ. ಈ ಒಳ ಚರಂಡಿ ಕಾಮಗಾರಿ ಜವಾಬ್ದಾರಿ ಯನ್ನು ಹೈದರಾಬಾದ್ ಮೂಲದ ರಾಮಕೆ ಇನ್ಫ್ರಾಸ್ಟ್ರಕ್ಚರ್ ಅವರಿಗೆ ನೀಡಲಾಗಿದೆ ಎಂದು ವಿವರಿಸಿದರು..

ಒಳಚರಂಡಿ ಕಾಮಗಾರಿ ಪೂರ್ಣಗೊಂಡ ನಗರ ರಸ್ತೆಗಳ ಡಾಂಬರೀಕರಣ ಪ್ರಾರಂಭಿಸ ಲಾಗುವುದು ಹಾಗೂ ಶೀಘ್ರದಲ್ಲೇ ನಗರದ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಉಪಾಧ್ಯಕ್ಷ ಚನ್ನಪ್ಪ ಭಜಂತ್ರಿ, ಜಿಲ್ಲಾಧಿಕಾರಿ ಜಿ.ಎಸ್.ಜಿದ್ದಿಮನಿ, ಪೌರಾಯುಕ್ತ ರಾಜಶೇಖರ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.