ಒಳನುಸುಳಿಸಲು ಪಾಕ್ ದಾಳಿ

ಶುಕ್ರವಾರ, ಮೇ 24, 2019
29 °C

ಒಳನುಸುಳಿಸಲು ಪಾಕ್ ದಾಳಿ

Published:
Updated:

ಜಮ್ಮು (ಪಿಟಿಐ): ಪಾಕಿಸ್ತಾನ ಸೇನೆಯು ಕಾಶ್ಮೀರ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿರುವುದರ ಹಿಂದೆ, ಭಯೋತ್ಪಾದಕರು ಮತ್ತು ಕಳ್ಳಸಾಗಣೆದಾರರ ಒಳ ನುಸುಳುವಿಕೆಗೆ ಆಸ್ಪದ ಕೊಡುವ ಹುನ್ನಾರ ಅಡಗಿದೆ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅಂತರರಾಷ್ಟ್ರೀಯ ಗಡಿ ರೇಖೆ ಉದ್ದಕ್ಕೂ ದಾಳಿ ನಡೆಸುವ ಮೂಲಕ ಬಿಎಸ್‌ಎಫ್ ಯೋಧರನ್ನು ಕಾರ್ಯಾಚರಣೆಯಲ್ಲಿ ಮಗ್ನರಾಗುವಂತೆ ಮಾಡಿ, ಬೇರೆ ಮಾರ್ಗಗಳ ಮುಖಾಂತರ ಉಗ್ರರು, ಕಳ್ಳಸಾಗಣಿಕೆದಾರರು, ನುಸುಳುಕೋರರನ್ನು ಕಾಶ್ಮೀರದೊಳಗೆ ನುಸುಳಿಸುವ ಯೋಜನೆಯನ್ನು ಪಾಕ್ ಹೊಂದಿದೆ ಎಂದು ಬೇಹುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಪಾಕಿಸ್ತಾನ `ದಾಳಿ ಮಾಡು, ಮುನ್ನುಗ್ಗು~ ಎಂಬ ತಂತ್ರ ಅನುಸರಿಸುತ್ತಿದೆ ಎಂದವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry