ಶುಕ್ರವಾರ, ಜುಲೈ 23, 2021
23 °C

ಒಸಾಮಾ ಡೆತ್ ವಾರೆಂಟ್‌ಗೆ ಏಪ್ರಿಲ್ 29ರಂದೇ ಸಹಿ ಹಾಕಿದ ಒಬಾಮಾ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ವಾಷಿಂಗ್ಟನ್ (ಪಿಟಿಐ): ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಕುಖ್ಯಾತ ಜಾಗತೀಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ‘ಡೆತ್ ವಾರೆಂಟ್’ಗೆ ಏಪ್ರಿಲ್ 29 ರಂದೇ ಸಹಿ ಹಾಕಿದರಂತೆ ! ತಿಂಗಳುಗಳ ಕಾಲ ಕರಾರುವಕ್ಕಾದ ಯೋಜನೆ ಮತ್ತು ಸಿದ್ದತೆಯ ನಂತರ ಬಲು ದುಬಾರಿ ಬೇಟೆಗಾಗಿ ಅವರು ಅನುಮತಿ ನೀಡಿದ್ದರೆಂದು ತಿಳಿದು ಬಂದಿದೆ.ಕಾರ್ಯಾಚರಣೆಯ ವಿಷಯಗಳ ಚರ್ಚೆಯಲ್ಲಿ ಅತ್ಯಂತ ಉತ್ಸಾಹದಿಂದಲೇ ಪಾಲ್ಗೋಳ್ಳುತ್ತಿದ್ದ ಒಬಾಮಾ, ಅಂತಿಮವಾಗಿ ರಹಸ್ಯ ಕಾರ್ಯಾಚರಣೆಗೆ ರಾಜತಾಂತ್ರೀಕ ಕೋಣೆಯಲ್ಲಿ ಏಪ್ರಿಲ್ 29ರಂದು ಮುಂಜಾನೆ 8.20ರ ಸಮಯಕ್ಕೆ ಅಂತಿಮ ಮುದ್ರೆ ಒತ್ತಿದ್ದರೆಂದು ಹಿರಿಯ ಆಡಳಿತಾಧಿಕಾರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.