ಶುಕ್ರವಾರ, ಮೇ 27, 2022
30 °C

ಓದುಗರ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಈ ಭೂಮಿ ನಮ್ಮದು~ (ಮೇ 20, ಸತೀಶ್ ಚಪ್ಪರಿಕೆ) ಲೇಖನ ನರ್ಮದಾ ಕಣಿವೆಯ ರೈತರ ಹೋರಾಟದ ಸಮಗ್ರ ಚಿತ್ರಣ ನೀಡಿತು. ಹೋರಾಟದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡ ಮೇಧಾ ಪಾಟ್ಕರ್ ಅವರ ಹೋರಾಟದ ದಿನಗಳು ಆರಂಭಗೊಂಡ ಬಗ್ಗೆಯೂ ತಿಳಿಸಿತು. ಆ ರೈತರ ಭೂಮಿ ಉಳಿಯಲಿ. ಬದುಕು ಹಸನಾಗಲಿ. ಆಗ ದೇಶ ಹಸಿರಿನ ಸಮೃದ್ಧಿಯಿಂದ ಅಭಿವೃದ್ಧಿ ಹೊಂದುತ್ತದೆ.

-ಅನಾರ್ಕಲಿ ಸಲೀಂಚಿಣ್ಯ, ಶ್ರೀರಂಗಪಟ್ಟಣ

ಚಂದಪದ್ಯದಲ್ಲಿ ದೇವನೂರ ಮಹಾದೇವ ಅವರ `ಒಂದು ಲಾಲಿಪದ~ ಮತ್ತು ಅದಕ್ಕೆ ಹಾದಿಮನಿ ಅವರ ಚಿತ್ರ ಅದ್ಭುತವಾಗಿ ಸಂಯೋಜನೆಗೊಂಡು ಕಣ್ಣ ಗೊಂಬೆಗಳಲ್ಲಿ ಅಚ್ಚಳಿಯದಂತೆ ಉಳಿಯಿತು.

-ಕಾಲಕಾಲೇಶ್ವರ ಹಾದಿಮನಿ, ಮೈಸೂರು

`ಹಳತು ಹೊನ್ನು~ ಅಂಕಣದಲ್ಲಿ ಪ್ರಕಟವಾದ `ಹಕ್ಕಿ ಹಾರುತಿದೆ~ ಇಂದಿಗೂ... ಲೇಖನ ಮಾಹಿತಿಯಿಂದ ಭರ್ತಿಯಾಗಿತ್ತು. ದ.ರಾ.ಬೇಂದ್ರೆ ಅವರ ನೇತೃತ್ವದಲ್ಲಿ ಸಂಕಲನಗೊಂಡ `ಹಕ್ಕಿ ಹಾರುತಿದೆ~ ಕವನ ಸಂಕಲನ ರೂಪುಗೊಂಡ ದಿನಗಳನ್ನು ನೆನಪಿಸಿತು. 

-ಎಚ್.ಬಿ. ಮಧು, ತುಮಕೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.