ಗುರುವಾರ , ಮೇ 6, 2021
27 °C

ಓದುವುದಕ್ಕೆ ಅವಕಾಶ ಮಾಡಿಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಜಯನಗರದ 5ನೇ ಬ್ಲಾಕಿನ 5ನೇ ರಸ್ತೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಉಪಕೇಂದ್ರವನ್ನು ಒಂದು ವಾಸದ ಮನೆಯ ಮಹಡಿ ಹಾಗೂ ಗ್ಯಾರೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ.ಗ್ಯಾರೇಜಿನಲ್ಲಿ ಓದುಗರಿಗೆ ಅಗತ್ಯವಾದ ಗಾಳಿ- ಬೆಳಕು ಸಿಗುವುದೇ ಇಲ್ಲ.   ದಿನಪತ್ರಿಕೆಗಳು, ವಾರಪತ್ರಿಕೆಗಳು, ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆ ಹಾಗೂ ಪುಸ್ತಕಗಳನ್ನು ಇಟ್ಟಿರುತ್ತಾರೆ. ಸ್ಥಳಾಭಾವದಿಂದಾಗಿ  ಈ ಗ್ಯಾರೇಜಿನ ಮುಂಭಾಗಕ್ಕೆ ಕಲ್ನಾರು ಹಲಗೆಗಳನ್ನು ಹೊದಿಸಿದ್ದಾರೆ.ಕಲ್ನಾರು ಹಲಗೆಗಳು ಬೇಸಿಗೆಯಲ್ಲಿ ಓದುಗರ ತಲೆ ಬಿಸಿಯಾಗುವಂತಿವೆ. ಮಳೆಗಾಲದಲ್ಲಿ ಸೋರುತ್ತವೆ. ಮಳೆಯ ಹನಿಗಳ ಶಬ್ದದಿಂದಾಗಿ ಹೆದರಿ ಓಡುವಂತಾಗುತ್ತದೆ. ಓದುವುದಕ್ಕೆ ಆಗುವುದಿಲ್ಲ. ಓದುಗ ಸ್ನೇಹಿ ಪರಿಸರ ಇಲ್ಲಿಲ್ಲ . ಸ್ಥಳ ಅಭಾವದಿಂದ ಸೊರಗಿರುವ ಗ್ರಂಥಾಲಯವನ್ನು ಒಂದು ಸರಿಯಾದ ಸ್ಥಳಕ್ಕೆ ಬದಲಾಯಿಸಲು ವ್ಯವಸ್ಥೆಯನ್ನು ಗ್ರಂಥಾಲಯ ಇಲಾಖೆ ಗಮನಿಸಲು ಕೋರಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.