ಭಾನುವಾರ, ಮೇ 31, 2020
27 °C

ಕಂಡಕ್ಟರ್ ಹೇಗೆ ಹೊಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ಚಿತ್ರದುರ್ಗದಿಂದ ಹಾವೇರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸೊಂದರಲ್ಲಿ ( ಸಂಖ್ಯೆ: ಕೆ.ಎ. 42, ಎ್ 285, ಬೆಂಗಳೂರು ಹುಬ್ಬಳ್ಳಿ, ಎನ್.ಎಚ್.4 ಮಾರ್ಗ) 15.01. 2011 ರಂದು ಪ್ರಯಾಣಿಸುತ್ತಿದ್ದೆ. ದಾವಣಗೆರೆ ಹತ್ತಿರ ಚೆಕಿಂಗ್ ಇನ್ಸ್‌ಪೆಕ್ಟರ್ ಬಂದು ಪ್ರಯಾಣಿಕರಲ್ಲಿ ಟಿಕೆಟ್ ಚೆಕ್ ಮಾಡತೊಡಗಿದರು. ಒಬ್ಬ ಪ್ರಯಾಣಿಕರು ಟಿಕೆಟ್ ತೆಗೆದುಕೊಂಡಿದ್ದರೂ, ತಪಾಸಣೆಯ ವೇಳೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದರು. ಹಾಗಾಗಿ ತಪಾಸಣಾ ಅಧಿಕಾರಿಗಳು ಕಂಡಕ್ಟರನನ್ನು ತರಾಟೆಗೆ ತೆಗೆದುಕೊಂಡರು. ಸಾಲದ್ದಕ್ಕೆ ನಿರ್ವಾಹಕನಿಗೆ ದಂಡ ವಿಧಿಸಿ, ಆತನ ವೃತ್ತಿಗೆ ತೊಂದರೆಯಾಗುವಂತೆ ಕಂಪ್ಲೆಂಟ್ ಬರೆದು ಹೋದರು.

ಪ್ರಯಾಣಿಕರು ಟಿಕೆಟ್ ಕಳೆದುಕೊಂಡರೆ ನನ್ನನ್ನೇಕೆ ಹೊಣೆ ಮಾಡುತ್ತೀರಿ ಎಂದು ಪರಿ ಪರಿಯಾಗಿ ಕೇಳಿಕೊಂಡರು. ಕೆಲ ಪ್ರಯಾಣಿಕರೂ ನಿರ್ವಾಹಕರ ಪರವಾಗಿ ಕೇಳಿದರು. ಟಿಕೆಟ್ ಕ್ರಮಸಂಖ್ಯೆಯ ಪ್ರಿಂಟ್ ಔಟ್‌ನಲ್ಲಿ ಟಿಕೆಟ್ ಕಳೆದುಕೊಂಡವರ ಟಿಕೆಟ್ ಸಂಖ್ಯೆ ಸಿಕ್ಕರೂ, ತಪಾಸಣೆಗಾರರು ಕಂಡಕ್ಟರನನ್ನು ಹೊಣೆ ಮಾಡಿ ಕಂಪ್ಲೆಂಟ್ ಬರೆದರು. ನಂತರ ನಿರ್ವಾಹಕ ವಿಪರೀತ ವೇದನೆಯಿಂದ ತೊಳಲಾಡಿದರು. ಇದು ಸರಿಯೇ? ಇಂತಹ ಕ್ರಮದ ಬಗ್ಗೆ ಕೆಎಸ್‌ಆರ್‌ಟಿಸಿ ಪರಿಶೀಲಿಸುವುದೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.