ಮೂವತ್ತು ಕೋಟಿ ರೂಪಾಯಿ ಹಣ ಕೊಡುತ್ತೇನೆ. ಹದಿನೈದು ವರುಷಗಳ ಕಾಲ ಒಂಟಿಯಾಗಿ ಕಳೆಯುತ್ತೀಯಾ? ಅಲ್ಲಿ ದೂರವಾಣಿ–ರೇಡಿಯೊ, ಟೀವಿ ಯಾವುದೂ ಇರುವುದಿಲ್ಲ. ಶ್ರೀಮಂತ ಬ್ಯಾಂಕರ್ ವಕೀಲನಿಗೆ ಈ ‘ಪಂಥ’ಕ್ಕೆ ಆಹ್ವಾನ ನೀಡುವನು. ಹದಿನೈದೇ ವರುಷಗಳನ್ನು ಏಕಾಂತದಲ್ಲಿ ಕಳೆದರೆ ಮೂವತ್ತು ಕೋಟಿ ರೂಪಾಯಿ! ವಕೀಲ ತನ್ನನ್ನು ತಾನೇ ಪಂಥಕ್ಕೆ ಒಳಗು ಮಾಡಿಕೊಳ್ಳುವನು.

ಮನುಷ್ಯನೊಬ್ಬನ ಸಹಜ ಎನ್ನುವ ಹಣದ ಆಸೆ ವಕೀಲನನ್ನು ಆ ಮಟ್ಟಕ್ಕೆ ಮುಟ್ಟಿಸಿರುತ್ತದೆ. ಆ ಒಂಟಿ ಕೋಣೆಯೊಳಗೆ ದಿನಗಳನ್ನು ವಕೀಲ ಓದು–ಬರಹದಲ್ಲಿ ಕಳೆಯುತ್ತಾನೆ. ವರುಷಗಳು ಉರುಳಿದಂತೆ ಬದುಕಿನ ಹೊಸ ಕಾಣ್ಕೆಗಳು ಹೊಳೆಯುತ್ತವೆ. ಹಣದ ಆಸೆಗಾಗಿ ನಿರ್ಬಂಧ ಹೇರಿಕೊಂಡವನಿಗೆ ಆ ಏಕಾಂತ ಕಾಡುತ್ತದೆ. ವಕೀಲನಿಗೆ ಅದು ಅರ್ಥವಂತಿಕೆಯ ಹಾದಿ ಕಾಣಿಸುತ್ತದೆ. ಆಸೆಯ ಬೆನ್ನುಬಿದ್ದವನಿಗೆ ನಶ್ವರತೆಯ ದರ್ಶನ. ವರ್ಷಗಳು ಕಳೆದಂತೆ ವಕೀಲನದ ಮನಸ್ಥಿತಿ ಮಾಗುತ್ತದೆ.

ಇದು ‘ಪಂಥ’ ನಾಟಕ. ಆಂಟನ್ ಚೆಕಾವ್ ಅವರ ‘ದಿ.ಬೆಟ್’ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿ ‘ಪಂಥ’ ಎನ್ನುವ ಏಕವ್ಯಕ್ತಿ ಪ್ರಯೋಗವಾಗಿಸಿದ್ದಾರೆ ಪ್ರೊ. ಸುಧೀಂದ್ರ ಶರ್ಮ. ತೆರೆಯ ಮೇಲೆ ನಟ ಚಸ್ವ. ಯಶಸ್ಸಿನ ನಾಗಾಲೋಟ ಮುಂದುವರಿಸಿರುವ ‘ಪಂಥ’ ನಾಳೆ (ಜ. 21) ನಗರದ ಕೆ.ಎಚ್. ಕಲಾಸೌಧದಲ್ಲಿ 39ನೇ ಪ್ರದರ್ಶನ ಕಾಣುತ್ತಿದೆ. ರಂಗಭೂಮಿ ಮತ್ತು ಸಿನಿಮಾ ರಂಗದ ಪ್ರತಿಭಾವಂತ ನಟ ಚಸ್ವ ತಮ್ಮ ಅಭಿನಯ ಸಾಮರ್ಥ್ಯದ ಮೂಲಕ ‘ಪಂಥ’ವನ್ನು ಕಟ್ಟುತ್ತಿರುವ ರೂವಾರಿ.

ಶ್ರೀಮಂತ ಬ್ಯಾಂಕರ್ ಮತ್ತು ವಕೀಲ ಇಲ್ಲಿ ಎರಡು ಕೋನಗಳು ವ್ಯಕ್ತಿತ್ವಗಳು. ಒಂದು ಕೋಣೆಯಲ್ಲಿ ಕಥೆ ನಡೆಯುತ್ತದೆ. ‘ಆ ಕಗ್ಗತ್ತಲ ಒಂದು ರಾತ್ರಿ’ ಎಂದು ದೀಪವನ್ನು ಬೆಳಗಿಸುವ ಮೂಲಕ ಆರಂಭವಾಗುವ ನಾಟಕದ ಅಂತ್ಯ ಸಹ ಇದೇ ವಾಕ್ಯದಿಂದ ಮತ್ತು ದೀಪವನ್ನು ಹಚ್ಚುವ ಮೂಲಕ ಆಗುತ್ತದೆ. ಆರಂಭದಲ್ಲಿ ಜೀವಾವಧಿ ಮತ್ತು ಗಲ್ಲು ಶಿಕ್ಷೆಯ ವಿಷಯಗಳು ಪ್ರಸ್ತಾಪವಾದಾಗ ‘ನನ್ನ ಆಯ್ಕೆ ಜೀವಾವಧಿ. ಮನುಷ್ಯ ಬದುಕಿರುವುದು ಮುಖ್ಯ, ಸಾಯುವುದಲ್ಲ’ ಎಂದು ವಕೀಲ ಹೇಳುತ್ತಾನೆ. ಇದು ಬ್ಯಾಂಕರ್ನನ್ನು ಉದ್ರೇಕಿಸುತ್ತದೆ. ಹೀಗೆ ‘ಪಂಥ’ ಚಿಂತನೆಯೊಂದರ ಮೂಲಕ ತೆರೆದುಕೊಳ್ಳುತ್ತದೆ.

ಚಸ್ವ ‘ಪಂಥ’ದಲ್ಲಿ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ‘ನನಗೆ ಈ ನಾಟಕವನ್ನು ಒಪ್ಪಿಕೊಂಡಾಗ ಸವಾಲು ಎನಿಸಿತು. ಇಡೀ ನಾಟಕ ಮಾಡುವಾಗ ದೊಡ್ಡ ಸಮೂಹ ನನ್ನ ಎದುರಿಗೆ ಇರುತ್ತದೆ. ಇದೆಲ್ಲವನ್ನೂ ಅರಿತು ತಯಾರಿ ಮಾಡಿಕೊಂಡೆ. ನಿಜಕ್ಕೂ ಇದು ದೊಡ್ಡ ಸವಾಲು. ನನ್ನ ಇಷ್ಟು ವರ್ಷಗಳ ರಂಗಭೂಮಿ ಅನುಭವ ಬೆನ್ನಿಗಿತ್ತು’ ಎಂದು ‘ಪಂಥ’ದ ಆರಂಭಿಕ ಪಥವನ್ನು ಅವಲೋಕಿಸುವರು ಚಸ್ವ. ಅವರ ಈ ತಯಾರಿಯ ಹಿಂದೆ ಜಾಗತಿಕ ನಾಟಕಗಳ ಅಧ್ಯಯನವಿದೆ.

‘ಕಾಲೇಜುಗಳಿಗೆ ಪ್ರಯೋಗವನ್ನು ಹೆಚ್ಚು ತಲುಪಿಸುವುದರಿಂದ ವಿದ್ಯಾರ್ಥಿಗಳಲ್ಲಿ ವಿಚಾರ ಮಂಥನಕ್ಕೂ ಕಾರಣವಾಗುತ್ತದೆ. ರಂಗಶಂಕರ, ಕೆ.ಎಚ್.ಕಲಾಸೌಧದಲ್ಲಿ ಹೆಚ್ಚು ಪ್ರದರ್ಶನಗಳಾಗಿವೆ. ಕಾಲೇಜುಗಳಿಂದ ಅವಕಾಶಗಳು ಬಂದರೆ ಅಲ್ಲಿ ಪ್ರದರ್ಶಿಸುವೆ. ಸಂಭಾಷಣೆ ಸೇರಿದಂತೆ ನಾಟಕದ ಹಿಂದಿನ ಶಕ್ತಿ ಸುಧೀಂದ್ರ ಶರ್ಮ. ನೇಪಥ್ಯದಲ್ಲಿ ಕೆಲಸ ಮಾಡುವ ಎಲ್ಲರೂ ಈ ಏಕವ್ಯಕ್ತಿ ಪ್ರದರ್ಶನಕ್ಕೆ ಬಲ’ ಎನ್ನುವರು ಚಸ್ವ.

ಕರ್ನಾಟಕ ನಾಟಕ ಅಕಾಡೆಮಿ, ಗುಲ್ಬರ್ಗದ ರಂಗಾಯಣ, ಕೇಂದ್ರೀಯ ವಿಶ್ವವಿದ್ಯಾಲಯ, ಹಂಪಿ ವಿಶ್ವವಿದ್ಯಾಲಯದ ನಾಟಕ ವಿಭಾಗ ಉದ್ಘಾಟನೆಗೆ ‘ಪಂಥ’ವನ್ನು ಪ್ರದರ್ಶಿಸಲಾಗಿದೆ. ಅಲ್ಲದೆ ವ್ಯಕ್ತಿ ವಿಕಾಸದ ಪ್ರಯೋಗವಾಗಿ ಕಾಣುವ ‘ಪಂಥ’ವನ್ನು ವಿದ್ಯಾರ್ಥಿಗಳಿಗೆ ಹೆಚ್ಚು ತಲುಪಿಸುವ ಆಸೆ ಚಸ್ವ ಅವರದ್ದು. ಇದಕ್ಕೆ ಇಂಬು ಎನ್ನುವಂತೆ ಪ್ರಾಧ್ಯಾಪಕರು ಮತ್ತು ಚಿಂತಕರಾದ ನಟರಾಜ್ ಹುಳಿಯಾರ್ ಮತ್ತು ರಾಜಪ್ಪ ದಳವಾಯಿ ‘ಪಂಥ’ದ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ.

ಅವರು ಬೇರೆ ಬೇರೆ ಕಾಲೇಜಿಗಳಲ್ಲಿ ಪ್ರದರ್ಶನಕ್ಕೆ ಶಿಫಾರಸು ಮಾಡಿದ್ದಾರೆ. ನಗರದ ನ್ಯಾಷನಲ್ ಕಾಲೇಜು ಸೇರಿದಂತೆ ಬೆರಳೆಣಿಕೆಯ ಕಾಲೇಜುಗಳಲ್ಲಿ ‘ಪಂಥ’ದ ಪ್ರದರ್ಶನವಾಗಿದೆ. ‘ಚೆಕಾವ್ ಅವರ ಕಥೆಗಳು ಪಠ್ಯದಲ್ಲಿ ಇದ್ದವು. ನಾನು ಪಾಠ ಮಾಡಿದಾಗ ಯಾವುದೋ ಕಲ್ಪನೆಗಳನ್ನು ಇಟ್ಟುಕೊಂಡು ಮಾಡಿದ್ದೆ. ಈಗ ‘ಪಂಥ ಮತ್ತು ಚಸ್ವ’ ನೆನಪಾಗುತ್ತಾರೆ ಎಂದು ಹುಳಿಯಾರರು ಪ್ರಶಂಸಿಸಿದ್ದು ಚಸ್ವ ಅವರ ಆತ್ಮವಿಶ್ವಾಸದ ವೃದ್ಧಿಗೂ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.